CONNECT WITH US  

ವಿವೇಕಾನಂದರ ಆದರ್ಶ ಸರ್ವರ ಪಥವಾಗಲಿ

ಹೊಸದಿಲ್ಲಿ: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುವ ಮೂಲಕ ಹೊಸ ಭಾರತ ನಿರ್ಮಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು ಅಮೆರಿಕದ ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷಾ ಚರಣೆಯ ಪ್ರಯುಕ್ತ ಕೊಯಮತ್ತೂರಿನ ಶ್ರೀ ರಾಮಕೃಷ್ಣ ಮಠ ಹಮ್ಮಿಕೊಂಡಿದ್ದ ಕಾರ್ಯ ಕ್ರಮದ ಸಮಾರೋಪದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಅವರು ಮಾತನಾಡಿದ್ದಾರೆ.

ಭಾರತ ಸದ್ಯ ಎದುರಿಸುತ್ತಿರುವ ಸವಾಲು ಗಳಿಂದ ಹೊರ ಬರಲು ವಿವೇಕಾನಂದರ ಆದರ್ಶ ಪಾಲಿಸಬೇಕು. ಸ್ವಾಮಿ ವಿವೇಕಾ ನಂದರು 1893ರ ಸೆ. 11ರಂದು ಅಮೆರಿಕದಲ್ಲಿ ಮಾತನಾಡಿ ಭಾರತದ ಸಂಸ್ಕೃತಿ, ಪರಂಪರೆ ಗಳನ್ನು ವಿಶ್ವಕ್ಕೇ ಪರಿಚಯಿಸಿದರು ಎಂದು ಕೊಂಡಾಡಿದ್ದಾರೆ ಪ್ರಧಾನಿ.

ಭಾರತವು ಮುಕ್ತ ವಿಚಾರಧಾರೆಯ ದೇಶ. ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನಮ್ಮ ಸಮಾಜ ಎಲ್ಲ ಕೆಟ್ಟ ಪರಂಪರೆಯಿಂದ ದೂರವಾಗಿಲ್ಲ. ಇನ್ನೂ ಹಲವು ಸವಾಲುಗಳಿವೆ ಎಂದಿದ್ದಾರೆ ಪ್ರಧಾನಿ. ಸ್ವಾಮಿ ವಿವೇಕಾನಂದರು ಭಾರತದ ಆಲೋಚನ ಕ್ರಮಗಳನ್ನು ಬದಲಿಸಿದವರು. ಭಾರತದ ಭವಿಷ್ಯ ಯುವಕರ ಕೈಯ್ಯಲ್ಲಿದೆ ಎಂದು ನಂಬಿದ್ದರು. ಇಂದಿನ ಯುವಜನತೆ ಅದೇ ದಾರಿಯಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿ ಎಂದಿದ್ದಾರೆ.


Trending videos

Back to Top