CONNECT WITH US  

ನ್ಯಾಯಾಂಗ ನಿಂದನೆ ಅರಿವಿರಲಿಲ್ಲ

ನವದೆಹಲಿ: ಬಿಹಾರದ ಮುಜಫ‌ರ್‌ನಗರ ಬಾಲಿಕಾಶ್ರಮದ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ಅವರನ್ನು ವರ್ಗಾವಣೆ ಮಾಡುವಾಗ, ತಾವು ನ್ಯಾಯಾಂಗ ನಿಂದನೆ ಮಾಡುತ್ತಿದ್ದೇನೆಂಬುದು ಅರಿವಿಗೆ ಬಂದಿರಲಿಲ್ಲ ಎಂದು ಸಿಬಿಐನ ಮಾಜಿ ಮಧ್ಯಂತರ ನಿರ್ದೇಶಕ ಎಂ. ನಾಗೇಶ್ವರ ರಾವ್‌, ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತಮ್ಮ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ನ್ಯಾಯಪೀಠದ ಕ್ಷಮೆ ಕೋರಿದ್ದಾರೆ. 

ಕಳೆದ ಜನವರಿಯಲ್ಲಿ, ಆಗ ಸಿಬಿಐನ ಹಂಗಾಮಿ ನಿರ್ದೇಶಕರಾಗಿದ್ದ ರಾವ್‌, ಎ.ಕೆ. ಶರ್ಮಾ ಅವರನ್ನು ಸಿಆರ್‌ಪಿಎಫ್ನ ಹೆಚ್ಚುವರಿ ನಿರ್ದೇಶಕರನ್ನಾಗಿ ವರ್ಗಾಯಿಸಿದ್ದರು. ಹಿರಿಯ ಐಪಿಎಸ್‌ ಅಧಿಕಾರಿಗಳ ವರ್ಗಾವಣೆಗಳ ಜತೆಯಲ್ಲೇ ಈ ವರ್ಗಾವಣೆಯೂ ಆಗಿಹೋಗಿತ್ತು. 

ಆದರೆ, ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಬಾಲಿಕಾಶ್ರಮದ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ತನ್ನ ಅನುಮತಿಯಿಲ್ಲದೆ ವರ್ಗಾಯಿಸಬಾರದೆಂದು ತಾನು ಆದೇಶಿಸಿದ್ದರೂ, ಸಿಂಗ್‌ ಅವರನ್ನು ಹೀಗೆ ಏಕಾಏಕಿ ವರ್ಗಾವಣೆ ಮಾಡಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಸುಪ್ರೀಂ ಕೋರ್ಟ್‌, ರಾವ್‌ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿ ಫೆ. 11ರಂದು ಪ್ರತ್ಯುತ್ತರ ನೀಡುವಂತೆ ಸೂಚಿಸಿತ್ತು.


Trending videos

Back to Top