CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಂಟರ ಸಂಘ ಕುರ್ಲಾ-ಭಾಂಡೂಪ್‌: ಶೈಕ್ಷಣಿಕ ನೆರವಿಗಾಗಿ ಅರ್ಜಿ ವಿತರಣೆ

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ವತಿಯಿಂದ ಪ್ರತೀ ವರ್ಷದಂತೆ ಕೊಡಮಾಡುವ ಬಂಟ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ವಿಧವೆ, ಅಂಗವಿಕಲರಿಗಾಗಿ ಸಂಘದ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ವತಿಯಿಂದ  ಮಾ. 19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆರ್ಥಿಕ ಸಹಾಯ ಅರ್ಜಿಯನ್ನು ವಿತರಿಸಲಾಗುವುದು. ಕುರ್ಲಾ, ಚೆಂಬೂರು, ಘಾಟ್‌ಕೋಪರ್‌, ವಿದ್ಯಾವಿಹಾರ್‌, ವಿಕ್ರೋಲಿ, ಕಾಂಜೂರ್‌ಮಾರ್ಗ, ಭಾಂಡೂಪ್‌ ವ್ಯಾಪ್ತಿಯಲ್ಲಿ ನೆಲೆಸಿರುವ ಸಮಾಜ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಮಧ್ಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ, ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ನಿಕಟಪೂರ್ವ ಕಾರ್ಯಾಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿಎ ವಿಶ್ವನಾಥ್‌ (9821313192), ಸರೋಜಾ ಎಸ್‌. ಶೆಟ್ಟಿ (9323222225),  ಭರತ್‌ ವಿ. ಶೆಟ್ಟಿ (9867022224), ಗಿರೀಶ್‌ ಶೆಟ್ಟಿ  (9967722151), ಪ್ರಕಾಶ್‌ ಶೆಟ್ಟಿ (9892004135), ಉದಯ ಶೆಟ್ಟಿ (9324278028), ಶಿವಣ್ಣ ಶೆಟ್ಟಿ (9322223881) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Back to Top