CONNECT WITH US  

ಟೇಲೆಂಡ್‌ಗೆ ಸಮರ್ಪಕ ನೀರು ಒದಗಿಸಲು ಸರ್ಕಾರಕ್ಕೆ ವರದಿ

ರಾಯಚೂರು: ಟಿಎಲ್‌ಬಿಸಿ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ತಲುಪಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗದ ರೂಪುರೇಷೆಗಳನ್ನು ಒಳಗೊಂಡ ವರದಿಯನ್ನು ನೀರಾವರಿ ಇಲಾಖೆ ನಿವೃತ್ತ ತಾಂತ್ರಿಕ ತಜ್ಞರೊಂದಿಗೆ ಕೂಡಿ ರಚಿಸಿದ್ದು, ಆ.31ರಂದು ಸರ್ಕಾರಕ್ಕೆ ಸಲ್ಲಿಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲುವೆ ಮೇಲ್ಭಾಗದಲ್ಲಿ ನೀರಳ್ಳತನಕ್ಕೆ ಕಡಿವಾಣ ಇಲ್ಲದಾಗಿದೆ. ಅದಕ್ಕೆ ಸೂಕ್ತ ನಿಯಮಗಳು ಇಲ್ಲದಿರುವುದೇ ಕಾರಣ. ಎಚ್‌.ಎಸ್‌.ಚಿನಿವಾಲರ ವರದಿಯ ಶಿಫಾರಸು
ಅನುಷ್ಠಾನಗೊಳಿಸಿದ್ದರೆ ಅಕ್ರಮ ನೀರಾವರಿಗೆ ಕಡಿವಾಣ ಹಾಕಲು ಅಕವಾಶವಿತ್ತು ಎಂದರು. 

ಕಾಲುವೆಯುದ್ದಕ್ಕೂ ಎರಡೂ ಬದಿ ರಸ್ತೆ ನಿರ್ಮಿಸಬೇಕು. ನೀರು ನಿರ್ವಹಣೆಗೆ ಸಂಪೂರ್ಣ ಸಿಬ್ಬಂದಿ ನಿಯೋಜಿಸಬೇಕು. ಪ್ರತಿ ಉಪ ಕಾಲುವೆ ವ್ಯಾಪ್ತಿಯ ನೀರಾವರಿಗೊಳಪಟ್ಟ ಪ್ರದೇಶಕ್ಕೆ ನಿಗದಿತ ನೀರು ಹರಿಸುವುದು, ನೀರಾವರಿ ಇಲಾಖೆ ಇಇಗಳಿಗೆ ನೀರಿನ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರದಂತಹ ಮಹತ್ವದ ಶಿಫಾರಸು ಇದಾಗಿದ್ದು, ಸರ್ಕಾರ ಅದನ್ನು ಕಡೆಗಣಿಸಿ ರೈತರನ್ನು ಬಲಿಪಶು ಮಾಡುತ್ತಿದೆ ಎಂದು ದೂರಿದರು.

ಈ ನಿಟ್ಟಿನಲ್ಲಿ ಪ್ರಗತಿಪರ ರೈತರು, ನೀರಾವರಿ ಅನುಭವ ಉಳ್ಳವರು, ನೀರಾವರಿಯ ತಾಂತ್ರಿಕ ತಜ್ಞರನ್ನೊಳಗೊಂಡ ವರದಿ ಸಿದ್ದಪಡಿಸಲಾಗಿದೆ. ಸೆ.1ರಂದು ಐಸಿಸಿ ಸಲಹಾ ಸಮಿತಿ ಸಭೆ ನಡೆಸುವ ಸಾಧ್ಯತೆಗಳಿವೆ. ಆ.31ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ವರದಿಯಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸಲು 5-6 ಕೋಟಿ ರೂ. ವೆಚ್ಚವಾಗಲಿದೆ. ಆ ಮೂಲಕ ಮಾನ್ವಿ,
ರಾಯಚೂರು ತಾಲೂಕಿನ ಕೊನೆ ಭಾಗಕ್ಕೂ ನೀರು ಹರಿಸಬಹುದು. ವರದಿಯನ್ನು ಒಪ್ಪುವ ಬಿಡುವ ನಿರ್ಧಾರ ಸರ್ಕಾರಕ್ಕೆ ಬಿಡಲಾಗಿದೆ. ಆದರೆ, ಬೇಡಿಕೆ ಈಡೇರಿಸುವವರೆಗೆ ಮಾತ್ರ ಹೋರಾಟ ನಿಲ್ಲದು ಎಂದರು. ಸಂಘದ ಸದಸ್ಯರಾದ ಮಹಾಂತಪ್ಪಗೌಡ, ಹನುಮಂತಪ್ಪ, ಚಂದ್ರು, ಜ್ಞಾನಪ್ಪ ಇತರರಿದ್ದರು 

 ರಾಯಚೂರು: ಕಾಲುವೆ ಕೆಳಭಾಗಕ್ಕೆ ನೀರು ತಲುಪದ ಕಾರಣ ಮುನಿರಾಬಾದ್‌ನ ಕಚೇರಿಯಲ್ಲಿ ಆ.29ರಂದು ಕೊಪ್ಪಳ-ರಾಯಚೂರು ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೆಳಭಾಗದ ರೈತ ಮುಖಂಡರೊಂದಿಗೆ ಮಾತನಾಡಿದರು. ನೀರಿಲ್ಲದೇ ಕೆಳಭಾಗದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮೇಲ್ಭಾಗದಲ್ಲಿ ಮಾತ್ರ ಅಕ್ರಮ ನೀರಾವರಿ ಎಗ್ಗಿಲ್ಲದೇ ಸಾಗಿದೆ. 0 ದಿಂದ 47 ಮೈಲ್‌ ಕಾಲುವೆವರೆಗೆ ಮಾತ್ರ ನೀರು ಸಮರ್ಪಕವಾಗಿ ಬಳಕೆಯಾಗುತ್ತಿದೆ. ಕಾಲುವೆಗಳ ಮೇಲೆ ಬ್ರಿಡ್ಜ್ನಿ ರ್ಮಿಸಿ, ಅಕ್ರಮ ಪಂಪ್‌ಸೆಟ್‌ ಅಳವಡಿಸಿ ನೀರು ಪಡೆಯುತ್ತಿದ್ದಾರೆ. ಇದರಿಂದ ಕೆಳಭಾಗದ ರೈತರು ಮಾತ್ರ ನೀರು ಸಿಗದೆ ಪೇಚಾಡುತ್ತಿದ್ದಾರೆ ಎಂದರು.

ಸೆ.1ರಂದು ಐಸಿಸಿ ತುರ್ತುಸಭೆ ಕರೆದಿರುವ ಹಿನ್ನೆಲೆಯಲ್ಲಿ ಆ.29ರಂದು ನೀರಾವರಿ ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಸಭೆ ನಡೆಸಿ ಕೈಗೊಂಡ ನಿರ್ಧಾರಗಳ ಬಗ್ಗೆ ಐಸಿಸಿ ಸಭೆಯಲ್ಲಿ ವಿವರಿಸಲಾಗುವುದು ಎಂದರು. ಅಪರ ಜಿಲ್ಲಾ ಧಿಕಾರಿ ಗೋವಿಂದರೆಡ್ಡಿ, ಶಾಸಕರಾದ ದದ್ದಲ್‌ ಬಸವನಗೌಡ, ಡಾ| ಶಿವರಾಜ ಪಾಟೀಲ ಇತರರು ಹಾಜರಿದ್ದರು.

ಮುಖಂಡರ ಮಾತಿನ ಚಕಮಕಿ: ನೀರಿನ ವಿಚಾರ ಚರ್ಚೆಯಾಗುತ್ತಿದ್ದ ವೇಳೆ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಪಂ ಮಾಜಿ ಸದಸ್ಯರಾದ ಬಷಿರುದ್ದೀನ್‌, ಶರಣಪ್ಪರ ನಡುವೆ ವಾಕ್ಸಮರ ನಡೆಯಿತು. ನೀವು ಸಂಪೂರ್ಣ ನೀರು ಬಳಸಿಕೊಳ್ಳುತ್ತಿದ್ದಿರಿ ಎಂದು ಬಷಿರುದ್ದೀನ್‌ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶರಣಪ್ಪ ನಮಗೆ ನೀರಿಲ್ಲ. ಸುಮ್ಮನೆ ಆರೋಪ ಮಾಡಬೇಡಿ ಎಂದು ದೂರಿದರು. ಇದು ಏಕವಚನದಲ್ಲಿ ಸಂಬೋಧಿ ಸುವಷ್ಟರ ಮಟ್ಟಿಗೆ ಚಕಮಕಿ ನಡೆಯಿತು. ನಂತರ ಸಭೆಯಲ್ಲಿ ಶಾಸಕರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ನೀರಿನ ಕೊರತೆಗೆ ನಾಳೆ ಮುನಿರಾಬಾದ್‌ನಲ್ಲಿ ಡಿಸಿಗಳ ಸಭೆ ಬೋಸರಾಜು ಕಾರಣ ಇಂದು ನಮಗೆ ನೀರಿನ ಕೊರತೆ ಆಗಲು ಈ ಭಾಗದ ಪ್ರಭಾವಿ ಜನಪ್ರತಿನಿಧಿ ಎನ್‌.ಎಸ್‌ .ಬೋಸರಾಜು ಕಾರಣ. ಅವರು ನೀರು ಹೆಚ್ಚು ಹರಿದಾಗಲೂ ಕಡಿಮೆ ಎಂದು ದಾಖಲಿಸಿ ಈ ಸಮಸ್ಯೆಗೆ ಕಾರಣವಾಗಿದ್ದಾರೆ ಎಂದು ವೀರನಗೌಡ ದೂರಿದರು. ವಿಧಾನ ಪರಿಷತ್‌ ಸದಸ್ಯ ಎನ್‌. ಎಸ್‌.ಬೋಸರಾಜು ಅವರನ್ನು ನೀರಾವರಿ ತಜ್ಞರೆಂದೇ ಭಾವಿಸಿದ್ದೆವು. ಈ ಭಾಗದ ರೈತರಿಗೆ ಅವರೇ ದ್ರೋಹ ಮಾಡಿದ್ದಾರೆ.

ಜಲಾಶಯದಿಂದ ಕಾಲುವೆಗೆ 93 ಟಿಎಂಸಿ ಅಡಿ ನೀರು ಬಳಕೆ ಮಾಡಬೇಕಿತ್ತು, ಆದರೆ, 65 ಟಿಎಂಸಿ ಅಡಿ ಬಳಸಿದಂತೆ ಈ ಹಿಂದೆ ಹಲವು ಬಾರಿ ದಾಖಲಿಸುವಂತೆ ಮಾಡಿದ್ದರಿಂದಲೇ ಈ ಸಮಸ್ಯೆಯಾಗಿದೆ. ರೈತರ ಪರ ಹೋರಾಟ ಮಾಡುವುದಾದರೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬರಲಿ ಎಂದು ಸವಾಲೆಸೆದರು. 


Trending videos

Back to Top