CONNECT WITH US  

ಚನ್ನಬಸವ ತಾತನವರಜಾತ್ರಾ ಮಹೋತ್ಸವ

ಗೊರೇಬಾಳ: ಎರಡನೇ ಕಲಬುರ್ಗಿ ಎಂದೇ ಪ್ರಸಿದ್ಧವಾದ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ
ಶರಣ ಬಸವೇಶ್ವ ರ ಪುರಾಣ ಪ್ರವಚನ ಮಂಗಲೋತ್ಸವ ಹಾಗೂ ಮಹಾತಪಸ್ವಿ ಲಿಂ| ಶ್ರೀ ಚನ್ನಬಸವ ತಾತನವರ
9ನೇ ವರ್ಷದ ಜಾತ್ರಾ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ಬೆಳಗ್ಗೆ ಚನ್ನಬಸವ ತಾತನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಬೋತ್ಸವ ನಡೆಸಲಾಯಿತು. ಸಂಜೆ ಚನ್ನಬಸವ ತಾತನವರ ರಥವನ್ನು ಮಹಿಳೆಯರು ಎಳೆದರು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಧ್ಯಕ್ಷತೆ ಮತ್ತು ಅಡವಿ ಅಮರೇಶ್ವರ ಸುವರ್ಣಗಿರಿ ವಿರಕ್ತ ಮಠದ ಶ್ರೀ ಶಾಂತಮಲ್ಲ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಹಾಗೂ ಶರಣಬಸವೇಶ್ವರ ಪುರಾಣ ಮಹಾ ಮಂಗಲೋತ್ಸವವಾಯಿತು.  ಆಳಂದ ಹಿರೇಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯರು, ಸಂತೆಕೆಲೂರ ಘನಮಠದೇಶ್ವರದ ಶ್ರೀ ಗುರುಬಸವ ಮಹಾಸ್ವಾಮಿಗಳು, ಯದ್ದಲದೊಡ್ಡಿ ಮಹಾಲಿಂಗ
ಮಹಾಸ್ವಾಮಿಗಳು, ರವಡಕುಂದ ಸಂಸ್ಥಾನ ಹಿರೇಮಠದ ಮರಿಸಿದ್ದಲಿಂಗ ಶಿವಾಚಾರ್ಯರು, ಅಂಕಲಿಮಠದ
ವೀರಭದ್ರ ಮಹಾ ಸ್ವಾಮಿಗಳು,ಗುಡುದೂರಿನ ನೀಲಕಂಠಯ್ಯ ಶರಣರು, ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠ ನಿಯೋಜಿತ ಉತ್ತರಾಧಿಕಾರಿ ಸದಾಶಿವ ದೇವರು ಇದ್ದರು 


Trending videos

Back to Top