CONNECT WITH US  

ಕರ್ನಾಟಕದ ರಾಜಕಾರಣಿಗಳಿಗೆ ಮಾದರಿಯಾಗಲಿ ಇಮ್ರಾನ್‌ ಖಾನ್‌

ತಮ್ಮ ಆಯ್ಕೆಗಿರುವ ಅಭ್ಯರ್ಥಿಗಳು ಸ್ವಲ್ಪ ಮಟ್ಟಿನ ಘನತೆ - ಗೌರವವನ್ನಾದರೂ ಹೊಂದಿರಲಿ ಎಂದು ನಿರೀಕ್ಷಿಸುವ ಜನರಿಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಳಂಕಿತ ಅಭ್ಯರ್ಥಿಗಳ ಪರವಾಗಿ ದಣಿವರಿಯದಂತೆ ಪ್ರಚಾರ ಮಾಡುತ್ತಿರುವುದು ಆಘಾತ ನೀಡಿದೆ. 

ನೆರೆ ರಾಷ್ಟ್ರ ಪಾಕಿಸ್ಥಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಮಗೆ ಯಾವತ್ತೂ ಅಸಡ್ಡೆಯ ಭಾವನೆ. ಅದು ರಾಜಕೀಯವಾಗಿದ್ದರಂತೂ ಕೇಳುವುದೇ ಬೇಡ. ಆದರೆ, ಕೆಲವು ವಿಷಯಗಳಲ್ಲಿ ಪಾಕಿಸ್ಥಾನವು ನಮಗಿಂತಲೂ ಮೇಲು ಅನ್ನಲು ಅಡ್ಡಿಯಿಲ್ಲ. ಪಾಕಿಸ್ಥಾನದ ಒಬ್ಬ ರಾಜಕೀಯ ನೇತಾರ ಕರ್ನಾಟಕದ ರಾಜಕಾರಣಿಗಳು ಅನುಕರಿಸಬಹುದಾದ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ. ಖ್ಯಾತ ಕ್ರಿಕೆಟಿಗರಾಗಿದ್ದುಕೊಂಡು ನಿವೃತ್ತಿಯ ಬಳಿಕ ರಾಜಕೀಯ ಪ್ರವೇಶಿಸಿ, ಪಾಕಿಸ್ಥಾನ್‌ ತೆಹ್ರೀಕ್‌ ಇ-ಇನ್ಸಾಫ್ (ಪಿಟಿಐ) ಪಕ್ಷವನ್ನು ಸ್ಥಾಪಿಸಿದ ಇಮ್ರಾನ್‌ ಖಾನ್‌ ಭ್ರಷ್ಟಾಚಾರ, ಸ್ವಜನಪಕ್ಷಪಾತದ ರಾಜಕಾರಣ ಹಾಗೂ ಆನುವಂಶೀಯ ಆಡಳಿತದ ವಿರುದ್ಧ ಸಮರ ಸಾರಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ನರಳುತ್ತಿರುವುದೂ ಇಂಥದೇ ರೋಗಗಳಿಂದ. ಕರ್ನಾಟಕವೂ ಇದಕ್ಕೆ ಹೊರತಲ್ಲ.

ಇತ್ತೀಚೆಗೆ ಇಮ್ರಾನ್‌ ಖಾನ್‌ ಮಾಡಿದ ಕೆಲಸ ಪಾಕಿಸ್ಥಾನದಲ್ಲೂ ಕಂಡು ಕೇಳರಿಯದ್ದು. ತಮ್ಮ ಪಕ್ಷವನ್ನು ಖೈಬರ್‌ ಪಖು¤ಂಖ್ವಾ ಪ್ರಾಂತದಲ್ಲಿ ಪ್ರತಿನಿಧಿಸುತ್ತಿರುವ 20 ಶಾಸಕರನ್ನು ಸಾರ್ವಜನಿಕವಾಗಿ ಹೆಸರಿಸಿ, ಅವರು ಭ್ರಷ್ಟರೆಂದು ಸಾರಿದರು. ಸದ್ಯದಲ್ಲೇ ಅವರನ್ನು ಪಕ್ಷದಿಂದ ಹೊರಹಾಕುವ ಸೂಚನೆಯನ್ನೂ ನೀಡಿದರು. 

(ಈ ಮೊದಲು ಪೇಶಾವರವನ್ನು ರಾಜಧಾನಿಯಾಗಿ ಹೊಂದಿದ್ದ ವಾಯವ್ಯ ಪಾಕಿಸ್ಥಾನದ ಭಾಗವಾಗಿರುವ ಖೈಬರ್‌ ಪಖು¤ಂಖ್ವಾ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಉನ್ನತ ನಾಯಕರನ್ನು ನೀಡಿ ರುವ ಭೂಮಿ. ಗಡಿನಾಡ ಗಾಂಧಿ ಎಂದೇ ಹೆಸರಾಗಿದ್ದ ಖಾನ್‌ ಅಬ್ದುಲ್‌ ಗಫಾರ್‌ ಖಾನ್‌ ಈ ಭಾಗದವರೇ.) ಅಫ‌ಘಾನಿಸ್ಥಾನದ ಗಡಿ ಪ್ರದೇಶವಾಗಿರುವ ಇಲ್ಲಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷ ಆಡಳಿತ ನಡೆಸುತ್ತಿದೆ. ಪಾಕಿಸ್ಥಾನದ ಸೆನೆಟ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಿಟಿಐನ 20 ಶಾಸಕರು ತಲಾ ನಾಲ್ಕು ಕೋಟಿ ರೂ. ಲಂಚ ಪಡೆದು, ಅಡ್ಡ ಮತದಾನ ಮಾಡಿ, ಆಸಿಫ್ ಝರ್ದಾರಿ ಅವರ ಪಾಕಿಸ್ಥಾನ್‌ ಪೀಪಲ್ಸ್‌ ಪಾರ್ಟಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆಂಬ ಸಂಗತಿ ಬಯಲಾಗಿದೆ. ಅಕ್ರಮ ಸಂಪಾದನೆ ಹಾಗೂ ಭ್ರಷ್ಟಾಚಾರದ ಜತೆಗೆ ಹೆಸರು ತಳುಕು ಹಾಕಿಕೊಂಡಿರುವ ಝರ್ದಾರಿ ಈ ಮೂಲಕ ತಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳನ್ನು ಶಾಸಕರಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯೂ ಆದರು.

ಕರ್ನಾಟಕದಲ್ಲೂ ಅಡ್ಡ ಮತದಾನ ಆಗಿದ್ದಿದೆ. ರಾಜ್ಯಸಭೆ ಚುನಾ ವಣೆಗಳಲ್ಲಿ ನಡೆದ ಅಡ್ಡಮತದಾನವಂತೂ ಕುಖ್ಯಾತವಾಗಿದೆ. ಹಣದ ಥೈಲಿ ಚುನಾವಣೆಯ ಕಣಕ್ಕೆ ಬಂದಾಗಲೆಲ್ಲ ಅಡ್ಡ ಮತ ದಾನ ಆಗುತ್ತಿದೆ. ಇತ್ತೀಚಿನ ದಶಕಗಳಲ್ಲಿ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿರುವ ಬಿಜೆಪಿಯ ಗುಂಪು ಎರಡು ಸಂದರ್ಭಗಳಲ್ಲಿ ಒಡೆದುಹೋಗಿದೆ. ಪಾಕಿಸ್ಥಾನದ ಭ್ರಷ್ಟಾಚಾರ ವಿರೋಧಿ ಪ್ರಮುಖರಲ್ಲಿ ಕಾಣಿಸಿ ಕೊಳ್ಳುತ್ತಿರುವ ಮತ್ತೂಬ್ಬರೆಂದರೆ ಅಲ್ಲಿನ ಮುಖ್ಯ ನ್ಯಾಯ ಮೂರ್ತಿ ಸಕಿಬ್‌ ನಾಸಿರ್‌. ದೇಶದ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಂದ ಅನಧಿಕೃತವಾಗಿ ವಸೂಲಿ ಮಾಡಿದ ಭಾರಿ ಪ್ರಮಾಣದ ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿ ಗಳಿಗೆ ಮರುಪಾವತಿಸುವಂತೆ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಇಮ್ರಾನ್‌ ಖಾನ್‌ ಅವರು ನಮ್ಮ ರಾಜಕಾರಣಿಗಳಿಗೆ, ವಿಶೇಷ ವಾಗಿ ಮೇ 12ರಂದು ವಿಧಾನಸಭಾ ಚುನಾವಣೆ ನಡೆಯಲಿ ರುವ ಕರ್ನಾಟಕದ ರಾಜಕೀಯ ಮುಖಂಡರಿಗೆ, ಮಾದರಿ ಆಗಬಲ್ಲರು. ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಹಾಗೂ ಜನತಾದಳ (ಜಾತ್ಯತೀತ) ಅದೇ ಹಳೆಯ ಮುಖಗಳನ್ನು ಕಣಕ್ಕಿಳಿಸಿದ್ದರಿಂದ ರಾಜ್ಯದ ಜನ ಮೂಕ ಪ್ರೇಕ್ಷಕರಂತಾ ಗಿದ್ದಾರೆ, ಅಸಹಾಯಕರಾಗಿದ್ದಾರೆ. "ಗೆಲ್ಲುವ ಕುದುರೆ' ಎಂಬ ಒಂದೇ ಮಾನದಂಡ ಇಟ್ಟುಕೊಂಡ ಪಕ್ಷಗಳು ತಮ್ಮ ಅಭ್ಯರ್ಥಿಗಳು ಹಾಗೂ ನಾಯಕರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳನ್ನು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಹಾಗೂ ಶಾಸಕರು - ಸಚಿವರಾಗಿ ಅವರ ಕಳಪೆ ಸಾಧನೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿವೆ.

ತಮ್ಮ ಆಯ್ಕೆಗಿರುವ ಅಭ್ಯರ್ಥಿಗಳು ಸ್ವಲ್ಪ ಮಟ್ಟಿನ ಘನತೆ - ಗೌರವವನ್ನಾದರೂ ಹೊಂದಿರಲಿ ಎಂದು ನಿರೀಕ್ಷಿಸುವ ಜನರಿಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ಕಳಂಕಿತ ಅಭ್ಯರ್ಥಿಗಳ ಪರವಾಗಿ ದಣಿವರಿಯದಂತೆ ಪ್ರಚಾರ ಮಾಡುತ್ತಿರುವುದು ಆಘಾತ  ನೀಡಿದೆ. ಕಳಂಕಿತರನ್ನು ದೂರವಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಈ ಇಬ್ಬರೂ ನಾಯಕರು ತಮ್ಮ ಪಕ್ಷಗಳ ರಾಜ್ಯ ಮುಖಂಡರಿಗೆ ಸೂಚಿಸಬಹುದಾಗಿತ್ತು. ಅಂತಹ ಪ್ರಾಮಾಣಿಕ ರಾಜಕಾರಣಿಗಳ ಸಂಖ್ಯೆ ಬಹಳಷ್ಟು ಕಡಿಮೆಯಿದೆ ಎಂಬುದು ನಿಜ. ಬೆಂಗಳೂರಿನ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಶಾಸಕ ಬಿ.ಎನ್‌. ವಿಜಯಕುಮಾರ್‌ ಅವರು ನಿಧನ ರಾದಾಗ ಬಹುತೇಕರು ಕಣ್ಣೀರು ಹಾಕಿದ್ದರಲ್ಲಿ ಅಚ್ಚರಿ ಏನಿಲ್ಲ. ಅವರು ಸಜ್ಜನಿಕೆ, ಸದಾಚಾರಗಳ ಮೂಲಕವೇ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಪ್ರಚಾರ ಮಾಡುತ್ತಿರುವಾಗಲೇ ತೀರಿಕೊಂಡರು. ನಾನು ಇಲ್ಲಿ ಜೆಡಿಎಸ್‌ ಪಕ್ಷವನ್ನು ಉಲ್ಲೇಖೀ ಸಿಲ್ಲ ಎಂದ ಮಾತ್ರಕ್ಕೆ ಇತರ ಎರಡು ಪಕ್ಷಗಳಿಗಿಂತ ಅವರ ಅಭ್ಯರ್ಥಿಗಳು ಉತ್ತಮರು ಎಂದೇನೂ ಅರ್ಥವಲ್ಲ.

ಉಪಮುಖ್ಯಮಂತ್ರಿಯಾಗಿ ಶ್ರೀರಾಮುಲು?
ಚುನಾವಣೆಯ ಬಳಿಕ ಯಾವ ರೀತಿಯ ಸರಕಾರ ರಚನೆಯಾಗಬಹುದು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೊಡ್ಡ ಪಕ್ಷಗಳ ಹಂಗಿನಲ್ಲಿರುವ ಜನರು ಮತ ಹಾಕುವುದಕ್ಕೆ ಬೇರೆ ಆಯ್ಕೆಗಳನ್ನೇ ಹೊಂದಿಲ್ಲ. ನಿಧಿ ಸಂಗ್ರಹದ ರಾಜಕೀಯದಲ್ಲಿ ಪಳಗಿರುವ ವೃತ್ತಿಪರ ರಾಜಕಾರಣಿಗಳ ನಡುವೆ ಹೊಸ ಮುಖಗಳೂ ಇವೆ. ಚುನಾವಣಾ ವೆಚ್ಚ ಗರಿಷ್ಠ ಮಟ್ಟಕ್ಕೆ ಏರಿ ಕುಳಿತಿದೆ. ಹಾಗಾಗಿ ಪಕ್ಷಗಳಿಗೆ ನಿಧಿ ಬೇಕು. ಜಾತಿ ರಾಜಕಾರಣವೂ ಸಾಕಷ್ಟು ಪ್ರಭಾವಶಾಲಿಯಾಗಿದೆ. ವೃತ್ತಿಪರ ರಾಜಕಾರಣಿಗಳಂತೆ ಕಳಂಕದ ಸೋಂಕಿಲ್ಲದ ಕೆಲವು ಅಭ್ಯರ್ಥಿಗಳು ಇದ್ದಾರೆ. ಬೆಂಗಳೂರಿನ ಶಾಂತಿನಗರದಲ್ಲಿ ಮಾಜಿ ಐಎಎಸ್‌ ಅಧಿಕಾರಿ ರೇಣುಕಾ ವಿಶ್ವನಾಥನ್‌ ಆಮ್‌ ಆದ್ಮಿ ಪಕ್ಷದ ಟಿಕೆಟ್‌ ಪಡೆದು ಸ್ಪರ್ಧಿಸಿದ್ದಾರೆ. ಆದರೆ, ಸಾಕಷ್ಟು ತಪ್ಪು ಲೆಕ್ಕಾಚಾರಗಳ ಬಳಿಕ ಕಾಂಗ್ರೆಸ್‌ ಅದೇ ಕ್ಷೇತ್ರದಲ್ಲಿ ಹಾಲಿ ಶಾಸಕ ಎನ್‌.ಎ. ಹಾರಿಸ್‌ ಅವರನ್ನು ಕಣಕ್ಕಿಳಿಸಿದೆ. ನಗರದ ರೆಸ್ಟಾರೆಂಟ್‌ ಒಂದರಲ್ಲಿ ಯವಕನೊಬ್ಬನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯ ಗೊಳಿಸಿದ ಆರೋಪದಲ್ಲಿ ಹಾರಿಸ್‌ ಅವರ ಪುತ್ರ ವಿಚಾರಣಾಧೀನ ಕೈದಿಯಾಗಿ ಇನ್ನೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. 

ಸಾಕಷ್ಟು ಪ್ರಚಾರ ಪಡೆದ ಆದಾಯ ತೆರಿಗೆ ಇಲಾಖೆಯ ದೊಡ್ಡ ಪ್ರಮಾಣದ ದಾಳಿ ಬಳಿಕವೂ ಡಿ.ಕೆ. ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೇ ನೋಡುತ್ತಿದೆ. "ರಾಜಕೀಯ ಷಡ್ಯಂತ್ರ' ಎಂದು ಕಾಂಗ್ರೆಸ್‌ನಿಂದ ಕರೆಸಿಕೊಳ್ಳುವ ಐಟಿ ದಾಳಿಯಿಂದ ಅದರ ಹಲವು ಸಚಿವರು ತಪ್ಪಿಸಿಕೊಂಡಿದ್ದು ಅದೃಷ್ಟ ಎಂದೇ ಹೇಳಬೇಕಾಗುತ್ತದೆ. ಕರ್ನಾಟಕದಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ, 2013ರ ವಿಧಾನಸಭಾ ಚುನಾವಣೆಯ ಸೋಲಿನಿಂದ ಯಾವುದೇ ಪಾಠ ಕಲಿತಂತೆ ಕಾಣು ವುದಿಲ್ಲ. ಭ್ರಷ್ಟಾಚಾರದ ಕಾರಣಕ್ಕಾಗಿಯೇ ಅದು ಆಗ ಜನರಿಂದ ತಿರಸ್ಕಾರಕ್ಕೆ ಒಳಗಾಯಿತು. ಐದು ವರ್ಷಗಳಿಂದಲೂ ಬಿಜೆಪಿಯ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿ ರುವ ಬಿ.ಎಸ್‌. ಯಡಿಯೂರಪ್ಪ ಅವರು ಇನ್ನೂ ಹಲವು ಪ್ರಕರಣ ಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಜನಪ್ರಿಯ ನಾಯಕ ಬಿ. ಶ್ರೀರಾಮುಲು ಅವರನ್ನು ಘೋಷಿಸುವ ಸೂಚನೆಗಳನ್ನು ಬಿಜೆಪಿ ರವಾನಿಸುತ್ತಿ ರುವುದು ಅಚ್ಚರಿ ಮೂಡಿಸಿದೆ. ಶ್ರೀರಾಮುಲು ಇಲ್ಲದೆ ಏನೂ ಮಾಡಲಾಗದು ಎಂಬಂತಿರುವ ಬಿಜೆಪಿ, ಅವರನ್ನು ಎರಡು ಕಡೆ ಗಳಲ್ಲಿ ಕಣಕ್ಕಿಳಿಸಿದೆ. ಸಂಸದರಾಗಿಯೇ ಉಳಿಯುವ ಅವಕಾಶ ವಿದ್ದರೂ ಶ್ರೀರಾಮುಲು ಅವರು ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಾದಾಮಿ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವ 
ಶಕ್ತಿ ಇರುವುದು ಶ್ರೀರಾಮುಲು ಅವರಿಗೆ ಮಾತ್ರ ಎಂದು ಪಕ್ಷ ಪರಿಭಾವಿಸಿದೆ. ಆದರೆ, "ರಿಪಬ್ಲಿಕ್‌ ಆಫ್ ಬಳ್ಳಾರಿ'ಯ ಸೃಷ್ಟಿಕರ್ತ, ಶ್ರೀಮಂತ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಜತೆಗೆ ಶ್ರೀರಾಮುಲು ಹೆಸರು ತಳಕು ಹಾಕಿಕೊಂಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವೇನೂ ತೋರುವುದಿಲ್ಲ.

ಗಾಲಿ ಜನಾರ್ದನ ರೆಡ್ಡಿ ಅವರ ಸೂತ್ರಕ್ಕೆ ತಕ್ಕಂತೆ ಕುಣಿಯುವ ಸಂಭವವಿರುವ ಬಿಜೆಪಿ ಸರಕಾರ ಅಥವಾ ಐಟಿ ದಾಳಿ ಹಾಗೂ ವಿಚಾರಣಾ ಆಯೋಗಗಳಿಂದ ತಪ್ಪಿಸಿಕೊಂಡಿರುವ ಅದೇ ಹಳೆಯ ಕಳಂಕಿತ ಮಂತ್ರಿಗಳಿರುವ ಕಾಂಗ್ರೆಸ್‌ ಸರಕಾರ - ಇವೆರಡೇ ಆಯ್ಕೆ ಗಳು ರಾಜ್ಯದ ಜನರ ಮುಂದೆ ಇರುವಂತಿವೆ. ನಾವು ಜಾತ್ಯತೀತ ಜನತಾದಳವನ್ನೂ ಪ್ರಯತ್ನಿಸಿದ್ದೇವೆ. "ಸುವರ್ಣ ಕರ್ನಾಟಕ'ದ ಹೆಸರಿನಲ್ಲಿ ಅದು ಏನು ಮಾಡಿತೆಂದೂ ನೋಡಿದ್ದೇವೆ.

ಬಂಧನಕ್ಕೂ ಮುಂಚೆ ತಾನು ಭಾರತದ ಸರಕಾರವನ್ನೇ ನಡೆಸ ಬಲ್ಲೆ ಎಂದು ಭಾವಿಸಿದ್ದ ಜನಾರ್ದನ ರೆಡ್ಡಿ, ಸುಪ್ರೀಂ ಕೋರ್ಟ್‌ ನಿಂದಲೂ ಪಾರಾಗಿ ಬರಲು ತನಗೆ ದಾರಿಗಳಿವೆ ಎಂದು ನಂಬಿರ ಬಹುದು. ಆದರೆ, ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಅವಕಾಶ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿ ಪ್ರಯತ್ನಿಸಿದರೂ ಫ‌ಲ ನೀಡಲಿಲ್ಲ. ಭ್ರಷ್ಟಾಚಾರ ಹಾಗೂ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಕೇವಲ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬುದನ್ನು ಗಮನಿಸಿರುವ ನ್ಯಾಯ ಮೂರ್ತಿ ಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಬಳ್ಳಾರಿ ಜಿಲ್ಲೆಯಿಂದ ಹೊರಗುಳಿಯುವಂತೆ ಜನಾರ್ದನ ರೆಡ್ಡಿಗೆ ಆದೇಶ ನೀಡಿದ್ದಾರೆ. ಚುನಾವಣೆಯಲ್ಲಿ ಅವರು ಪ್ರಚಾರ ಮಾಡುವ ಅಗತ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶ, ಜನಾರ್ದನ ರೆಡ್ಡಿಯವರ ಚುನಾವಣಾ ರಾಜಕೀಯದ ನೈಪುಣ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ನಾಯಕರಿಗೆ ತಣ್ಣೀರು ಎರಚಿದೆ.

ಮೋದಿ ಹಾಗೂ ಜನರಲ್‌ಗ‌ಳು
ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರಿಗೆ ಕಾಂಗ್ರೆಸ್‌ ಮಾಡಿರುವ ಅವಮಾನವನ್ನು ಖಂಡಿಸುವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರಿಯಪ್ಪ ಹಾಗೂ ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಹೆಸರುಗಳನ್ನು ಮಿಶ್ರಮಾಡಿ ಉಚ್ಚರಿಸಿದರು. ಕಚೇರಿಯ ಸಿಬಂದಿಯಾದರೂ ಪ್ರಧಾನಿಯವರಿಗೆ ಮೊದಲೇ ಸರಿಯಾದ ಮಾಹಿತಿ ನೀಡಬೇಕಿತ್ತು. ಮಾಧ್ಯಮ ಕಾರ್ಯದರ್ಶಿಯಿಲ್ಲದೆ ಕೆಲಸ ಮಾಡುತ್ತಿರುವ ಇತ್ತೀ ಚಿನ ಕೆಲವೇ ಪ್ರಧಾನಮಂತ್ರಿಗಳಲ್ಲಿ ಮೋದಿ ಅವರೂ ಒಬ್ಬರು. ಮತ್ತೂಬ್ಬ ಸೇನಾಧಿಕಾರಿ ಜನರಲ್‌ ಗೋಪಾಲ ಗುರುನಾಥ ಬೇವೂರ್‌ ಅವರೂ ಕರ್ನಾಟಕದವರೇ ಎಂಬುದನ್ನು ಪ್ರಧಾನಿ ಯವರಿಗೆ ಬಿಜೆಪಿಯ ಅಥವಾ ಕೇಂದ್ರ ಸರಕಾರದ ಯಾರೂ ಏಕೆ ನೆನಪಿಸಲಿಲ್ಲ ಎಂಬುದೇ ಅಚ್ಚರಿ ಮೂಡಿಸುವ ವಿಷಯ. ಬಾಗಲಕೋಟೆಯವರಾದ ಬೇವೂರ್‌ ದೇಶದ ಭೂಸೇನೆಯ 9ನೇ ಮುಖ್ಯಸ್ಥರಾಗಿದ್ದವರು. ಗೋಪಾಲ್‌ ಬೇವೂರ್‌ ಅವರು ಉತ್ತರ ಕರ್ನಾಟಕ ಭಾಗದ ಮೊದಲ ಐಸಿಎಸ್‌ ಅಧಿಕಾರಿ ಸರ್‌ ಗುರುನಾಥ್‌ ಬೇವೂರ್‌ ಅವರ ಪುತ್ರ ಎಂಬುದು ಉಲ್ಲೇಖನೀಯ. 1955-57ರ ಅವಧಿಯಲ್ಲಿ ಭೂಸೇನೆ ಮುಖ್ಯಸ್ಥ ರಾಗಿದ್ದ ಜನರಲ್‌ ಎಸ್‌.ಎಂ. ಶ್ರೀಗಣೇಶ್‌ ಕನ್ನಡಿಗರೇ. ಮಹಾರಾಷ್ಟ್ರದ ಸೊಲ್ಲಾಪುರ ದವರಾದ ಶ್ರೀಗಣೇಶ್‌, ಮೈಸೂರು ರಾಜ್ಯಪಾಲರೂ ಆಗಿದ್ದರು.


Trending videos

Back to Top