CONNECT WITH US  

ಪಾರ್ಕಿಂಗ್‌ಗೆ ರೈತರ ಜಟಾಪಟಿ

 ರಾಮನಗರ: ಎಪಿಎಂಸಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಪಾರ್ಕಿಂಗ್‌ ವ್ಯವಸ್ತೆ ಕಲ್ಪಿಸುವ ವಿಚಾರದಲ್ಲಿ ಕರೆಯಲಾಗಿದ್ದ ಎಪಿಎಂಸಿ ಸದಸ್ಯರು ಹಾಗೂ ರೈತರ ಸಭೆಯಲ್ಲಿ ರೈತ ಸಂಘದ ವಿವಿಧ ಬಣಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು.

ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಎಪಿಎಂಸಿ ಆಡಳಿತ ಸಮಿತಿ ಈ ಸಭೆಯನ್ನು ಆಯೋಜಿಸಿತ್ತು. ಎಪಿಎಂಸಿ
ಮಾರುಕಟ್ಟೆ ಆವರಣದಲ್ಲಿ ಗ್ರಾಹಕರಿಗೆ ವಾಹನ ನಿಲುಗಡೆ ಕಲ್ಪಿಸುವ ವಿಚಾರದಲ್ಲಿ ರೈತರ ಸಲಹೆಗಳನ್ನು ಪಡೆಯಲು ಈ
ಸಭೆಯಲ್ಲಿ ಉದ್ದೇಶಿಸಲಾಗಿತ್ತು. ಇದೇ ವಿಚಾರದಲ್ಲಿ ಸಭೆ ಪ್ರಗತಿಯಲ್ಲಿದ್ದಾಗಲೇ ಒಂದೊಂದು ಬಣದ ಮುಖಂಡರು
ಒಂದೊಂ¨ ‌ು ಹೇಳಿಕೆ ಕೊಡಲಾರಂಭಿಸಿದರು.

 ಇದು ಸಭೆಯ ಹಾದಿಯನ್ನೆ ತಪ್ಪಿಸಿತು. ಮುಖಂಡರ ನಡುವೆ ಪರಸ್ಪರ ಮಾತಿನ ಚಕಮಕಿಗೂ ಕಾರಣವಾಯಿತು. ರೈತ ಮುಖಂಡರಿಂದಲೇ ದ್ವಂದ್ವ ನಿಲುವುಗಳ ಬಗ್ಗೆ ಚರ್ಚೆಗಳ ಮಧ್ಯೆ ಮಾತನಾಡಿದ ರೈತ ಮುಖಂಡ ಮಲ್ಲಯ್ಯ, ರೈತರ ಉದ್ದೇಶ, ಸಮಸ್ಯೆಗಳು, ಹೋರಾಟ ಒಂದೇ ಆಗಿರುವಾಗ ಭಿನ್ನಹಾದಿ ಏಕೆ ?, ಇಲ್ಲಿ ಕೋಡಿಹಳ್ಳಿ ಬಣ, ಲಕ್ಷ್ಮಣ ಸ್ವಾಮಿ ಬಣ, ಶಿವಕುಮಾರ್‌ ಬಣ ಎಂಬುದು ಬೇಡ. ಆತ್ಮಾವಲೋಕನ ಸಭೆ ನಡೆಯಲಿ, ತಾವು ಸಹ ಭಾಗಿಯಾಗುವುದಾಗಿ ತಿಳಿಸಿದರು.

ಈ ಹೇಳಿಕೆಗೆ ಇತರ ಕೆಲವು ಮುಖಂಡರು ಸಭೆ ಕರೆದಿರುವ ಉದ್ದೇಶ ಏನು ? ಬಣದ ವಿಷಯ ಏಕೆ ? ಎಂದು ಆಕ್ಷೇಪ
ವ್ಯಕ್ತಪಡಿಸಿದಾಗ ರೈತರಲ್ಲಿ ಪರಸ್ಪರ ಗೊಂದಲ ಏರ್ಪಟ್ಟು, ಪರಸ್ಪರ ವಾಗ್ವಾದಕ್ಕಿಳಿದರು. ಕೆಲವು ಮುಖಂಡರು ಸಭೆಯಿಂದ ಹೊರ ನಡೆದರು. ಆದರೆ ಸಭೆಯ ಹೊರಗಡೆಯೂ ಆಕ್ಷೇಪ, ಪರಸ್ಪರ ನಿಂದನೆಗಳು ಮುಂದುವರೆದು, ಯಾರು ರೈತರು, ಯಾರು ರೈತರಲ್ಲ, ಸಾಲ ಮನ್ನಾ ಮಾಡಿಸಲು ಹಣ ವಸೂಲಿ ಮಾಡಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆ ಎಲ್ಲಾ ಬಣಗಳಿಂದಲೂ ಪರಸ್ಪರ ವ್ಯಕ್ತವಾಯಿತು. 

ಒಂದು ಹಂತದಲ್ಲಿ ಕೆಲವರು ಕೈಕೈ ಮಿಲಾಯಿಸುವ ಹಂತವೂ ತಲುಪಿತು. ಕೆಲವು ರೈತ ಮಹಿಳೆಯರೂ ಸಹ ಆಕ್ರೋಶ,
ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದು ಕಂಡು ಬಂತು.

ಮಾರುಕಟ್ಟೆ ಮುಂದುಗಡೆ ಪಾರ್ಕಿಂಗ್‌ಗೆ ನಿರ್ಧಾರ: ಮಾರುಕಟ್ಟೆಯ ಒಳಾಂಗಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದರೆ ಅನುಕೂಲ, ಅನಾನುಕೂಲಗಳ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು. ಕೊನೆಗೆ ಮಾರುಕಟ್ಟೆಯ ಮುಂದುಗಡೆ ಪಾರ್ಕಿಂಗ್‌ ವ್ಯವಸ್ಥೆ ಕೈಗೊಳ್ಳಲು, ಗ್ರಾಹಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್‌ ಸ್ಥಳ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ ಮಾತನಾಡಿದರು. ರೈತ ಮುಖಂಡರಾದ ತುಂಬೇನಹಳ್ಳಿ ಶಿವಕುಮಾರ್‌, ಕುಮಾರಸ್ವಾಮಿ, ಕೃಷ್ಣಪ್ಪ, ಎಪಿಎಂಸಿ ನಿರ್ದೇಶಕರಾದ ವೆಂಕಟರಂಗಯ್ಯ, ದೊರೆಸ್ವಾಮಿ, ಕುಮಾರ್‌, ಪ್ರಭಾರ ಕಾರ್ಯದರ್ಶಿ ಬಸವರಾಜು ಭಾಗವಹಿಸಿದ್ದರು.

Trending videos

Back to Top