CONNECT WITH US  

ಭಯೋತ್ಪಾದನೆ, ನಕ್ಸಲ್‌ ನಿಗ್ರಹಕ್ಕೆ ಪ್ರತ್ಯೇಕ ಪಡೆ

ರಾಮನಗರ: ಜಿಲ್ಲೆಯಲ್ಲಿ ಉಗ್ರನೊಬ್ಬ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸರು ಭಯೋತ್ಪಾದನೆ, ನಕ್ಸಲ್‌ ಮುಂತಾದ ಅಹಿತಕರ ಚಟುವಟಿಕೆಗಳು ಘಟಿಸಿದ ಸಂದರ್ಭದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಲು ಸಾಧ್ಯವಾಗುವಂತೆ  ಕಾರ್ಯಾಚರಣೆ ಪಡೆ ರಚಿಸಲು ನಿರ್ಧರಿಸಲಾಗಿದೆ.

ಸಂಘಟಿತ ಅಪರಾಧ ಪ್ರಕರಣಗಳು ಘಟಿಸಿದಾಗ ಉಗ್ರರ ನಿಗ್ರಹ ಮತ್ತು ನಾಗರಿಕರ ರಕ್ಷಣೆಗೆ ಬೇಕಾದ ವಿಶೇಷ ತರಬೇತಿ ಪಡೆದ ಪಡೆ ಜಿಲ್ಲೆಯಲ್ಲಿ ಸದ್ಯ ಇಲ್ಲ. ಹೀಗಾಗಿ, ಜಿಲ್ಲೆಯಲ್ಲಿರುವ ಪೊಲೀಸ್‌ ಸಿಬ್ಬಂದಿಯಲ್ಲೇ ಕೆಲವರನ್ನು ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಿ ಕಾರ್ಯಪಡೆ ರಚಿಸಲು ಉದ್ದೇಶಿಸಲಾಗಿದೆ.

ಉಗ್ರನೊಬ್ಬ ಪತ್ತೆ ಹಿನ್ನೆಲೆಯಲ್ಲಿ  ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸರು ಕಣ್ಗಾವಲು ಬಲಗೊಳಿಸಲಾಗಿದೆ. ರೈಲು, ಬಸ್‌ ನಿಲ್ದಾಣಗಳಲ್ಲಿ ಅಪರಿಚಿತರ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌ ತಿಳಿಸಿದ್ಧಾರೆ.


Trending videos

Back to Top