ಕಾಸರಗೋಡು ಕನ್ನಡಿಗರ ಅಸ್ತಿತ್ವದ ಪ್ರಶ್ನೆ


Team Udayavani, Aug 24, 2018, 11:41 AM IST

kannada.jpg

ಕಾಸರಗೋಡಿನಲ್ಲಿರುವ ಕನ್ನಡದ ಮಕ್ಕಳು ಕೇರಳ ಸರಕಾರದಿಂದ ಭಾಷಾ ಸಮಸ್ಯೆ ಎದುರಿಸುತ್ತಿರುವಾಗ ಕರ್ನಾ ಟಕ ಸರಕಾರ ಮೌನ ವಹಿಸುವುದು ಸಲ್ಲದು. ಕೇವಲ ಒಂದೆರಡು ಪತ್ರ ಬರೆದ ಮಾತ್ರಕ್ಕೆ ಮತ್ತು ಒಂದು ಕರೆ ಮಾಡಿ ಮಾತನಾಡಿದ ಮಾತ್ರಕ್ಕೆ ಜಗ್ಗುವವರಲ್ಲ ಕೇರಳದ ಆಡಳಿತದ ಚುಕ್ಕಾಣಿ ಹಿಡಿದವರು. ಕರ್ನಾಟಕ ಸರಕಾರವು ಈ ವಿಷಯದಲ್ಲಿ ತಡ ಮಾಡದೇ ತನ್ನ ಬಲವಾದ ವಿರೋಧ, ಅಸಮಾಧಾನವನ್ನು ಕಾನೂನು ಪರಿಧಿಯಲ್ಲಿ ಕೇರಳ ಸರಕಾರಕ್ಕೆ ವ್ಯಕ್ತ ಪಡಿಸಲು ಮುಂದಾಗಲೇಬೇಕು.

ಕಾಸರಗೋಡಿನಲ್ಲಿ ಕೆಲವು ದಿನಗಳಿಂದ ಕನ್ನಡಿಗರ ಮಕ್ಕಳು ತಮ್ಮ ಹೆತ್ತವರನ್ನು ಜತೆಗೆ ಕರೆಸಿಕೊಂಡು ಶಿಕ್ಷಣ ಇಲಾಖೆ ಮತ್ತು ಸರಕಾರದ ವಿರುದ್ಧ ಪ್ರತಿಭಟನೆ ಮಾಡುವ ಒಂದು ಅನಿವಾರ್ಯ ಹೆಜ್ಜೆಯನ್ನಿಟ್ಟಿದ್ದಾರೆ. ಅವರ ಭವಿಷ್ಯಕ್ಕೆ ಕೊಡಲಿಯೇಟು ಹಾಕಲಿರುವಂಥ ಒಂದು ಕ್ರಮ ಕೈಗೊಂಡಿರುವ ಕೇರಳ ಸರಕಾರ, ತನ್ನ ನಿರ್ಧಾರದ ಹಿಂದೆ ಏನನ್ನು ಸಾಧಿಸಲು ಹೊರಟಿದೆ ಎಂಬುದು ಸ್ಪಷ್ಟವಾದಿದ್ದರೂ ಅದರಲ್ಲಿ ಕನ್ನಡವನ್ನು ಮುಗಿಸಿಬಿಡಬೇಕು ಎಂಬುದೊಂದು ಉದ್ದೇಶವಿರುವುದಂತೂ ಸತ್ಯ. ಸದ್ಯ ಕಾಸರಗೋಡಿನಲ್ಲಿ ಮಕ್ಕಳು ಪ್ರತಿಭಟನೆಯ ದಾರಿ ಹಿಡಿ ಯಲು ಕಾರಣವಾದದ್ದು ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರು ನೇಮಕವಾದ ವಿಷಯ.
1956 ನ.1ರಂದು ಭಾಷಾವಾರು ಪ್ರಾಂತ್ಯ ರಚನೆಯಾದಂದಿನಿಂದ ಮಲಯಾಳಿ ಆಡಳಿತದಲ್ಲಿರುವ ಈ ಕನ್ನಡ ಮಣ್ಣಿನ ಕನ್ನಡಿಗರು ಪಡುತ್ತಿರುವ ಕಷ್ಟ, ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ. ರಾಷ್ಟ್ರ ಕವಿ ಗೋವಿಂದ ಪೈಗಳು ತಮ್ಮ ಕೊನೆಯ ದಿನದವರೆಗೂ ಮಂಜೇಶ್ವರದಲ್ಲಿದ್ದುಕೊಂಡು ಪತ್ರ ವ್ಯವಹಾರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಂದೇ ಬರೆಯುತ್ತಾ ಪ್ರಬಲಪ್ರತಿಭಟನೆ ತೋರಿದ್ದರು. ಹಿರಿಯರಾಗಿದ್ದ ಡಾ| ಕಯ್ನಾರ ಕಿಂಞಣ್ಣ ರೈಯ ವರು ಮಹಾ ಜನ ವರದಿ ಜಾರಿ ಮಾಡಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಹೇಳುತ್ತಾ, ವೇದಿಕೆಯಲ್ಲಿ ಕಣ್ಣೀ ರನ್ನು ಸುರಿಸಿದ್ದಿದೆ. ಈಗ ಆ ಜೀವವೂ ನಮ್ಮನ್ನು ಅಗ ಲಿದೆ. ಮಹಾ ಜನ ವರದಿ ಜಾರಿ ಮಾಡಿ ಎಂದು ಆಗ್ರಹಿಸುವ ಗಟ್ಟಿ ಧ್ವನಿಯನ್ನು ಕಳಕೊಂಡಿ ರುವ ಕಾಸರಗೋಡಿನ ಕನ್ನಡಿಗರ ಮೇಲೆ ಮಲಯಾಳಿ ಆಡಳಿತದ ಕೇರಳ ಸರಕಾರ ಆಗಿಂದಾಗ್ಗೆ ಭಾಷೆಯ ವಿಷಯದಲ್ಲಿ ಅನ್ಯಾಯ ಮಾಡುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆ ಮಲಯಾಳ ಗೊತ್ತಿ ಲ್ಲದ ಕನ್ನಡ ಮಕ್ಕಳಿರುವ ಶಾಲೆಗಳಿಗೆ ಕನ್ನಡ ಬಾರದ ಮಲಯಾಳಿ ಶಿಕ್ಷಕರ ನೇಮಕ.

ಪ್ರತಿಭಟನೆಗೆ ಮಣಿಯದ ಸರಕಾರ
ಚಂದ್ರಗಿರಿ ನದಿಯಿಂದ ಈಚೆಗಿನ ತಲಪಾಡಿವರೆಗಿನ ಭಾಗನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಜಸ್ಟಿಸ್‌ ಮಹಾ ಜನ್‌ ಅವರು ನೀಡಿದ್ದ ವರದಿಯನ್ನು ಜಾರಿಗೊಳಿಸಿ ಕನ್ನಡಿಗರಿಗಾಗಿರುವ ಅನ್ಯಾವನ್ನು ಸರಪಡಿಸಿ ಎಂದು ಕಾಸರಗೋಡಿನ ಕನ್ನಡಿಗರು ಸಾಕಷ್ಟು ಹೋರಾಡಿದ್ದರೂ, ಶಾಂತಾರಾಮ- ಸುಧಾ ರ ಅಗ್ಗಿತ್ತಾಯ ಎಂಬಿಬ್ಬರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರಿಗೆ ನೀಡಿರುವ ಸಂವಿಧಾನ ಬದ್ಧ ಹಕ್ಕುಗಳನ್ನು ಅವರಿಗೆ ಒದಗಿಸಿಕೊಡಬೇಕು ಮತ್ತು ಅವರಿಗೆ ಕನ್ನಡದಲ್ಲಿ ವ್ಯವಹರಿಸಲು ಸಮಸ್ಯೆಯಾಗದಂತೆ ಸರಕಾರದ ಎಲ್ಲ ಇಲಾಖೆಗಳು ಕ್ರಮ ಕೈಗೊಳ್ಳ ಬಕು ಎಂದು ಕೋರ್ಟ್‌ ಆದೇಶಿಸಿದ್ದರೂ ಅದನ್ನು ಪಾಲಿಸಲು ಸರಕಾರ ಮಡಿವಂತಿಕೆ ಅನುಸರಿಸುತ್ತಿದೆ. ಕನ್ನಡಿಗರು ಶಾಂತಿ ಪ್ರಿ ಯರಾಗಿದ್ದು, ಹೊಂದಿಕೊಂಡು ಬಾಳುವರು. ಇವರ ತಾಳ್ಮೆ ಮತ್ತು ಹೊಂದ ಣಿಕೆಯ ಲಾಭ ಪಡೆದುಕೊಳ್ಳಲು ಮುಂದಾದ ಸರಕಾರ ನಿಧಾನವಾಗಿ ಕನ್ನಡವನ್ನೇ ಮುಗಿಸಲು ಕೆಲವು ರಹಸ್ಯ ಕಾರ್ಯ ಸೂಚಿಗಳನ್ನು ಜಾರಿಗೆ ತರುತ್ತಿದೆ. ಯಾವುದೇ ಪ್ರತಿಭಟನೆಗೂ ಬಗ್ಗದೆ ಕಾಸರಗೋಡಿನ ಅಚ್ಚಗನ್ನಡ ನೆಲದ ಮೇಲೆ ಮಲಯಾಳದ ಮುದ್ರೆ ಒತ್ತಲು ಕೇರಳದಲ್ಲಿ ಆಡಳಿತ ನಡೆಸಿದ್ದ ಇದುವರೆಗಿನ ಎಲ್ಲ ಸರಕಾರಗಳೂ ಶಕ್ತಿ ಮೀರಿ ಕೆಲಸ ಮಾಡಿವೆ.
 
ಈಗ ಕನ್ನಡ ಉಳಿಸುವುದೇ ಸವಾಲು
ಕಾಸರಗೋಡಿನಲ್ಲಿ ಒಂದು ಕಾಲದಲ್ಲಿ ಏಕೀಕರಣದ ಹೋರಾಟ, ದನಿ ಬಲವಾಗಿತ್ತು. ಕಾಸರಗೋಡು ಏಕೀಕರಣ ದಿಂದ ಕಣಕ್ಕಿಳಿದು ಚುನಾವಣೆಲ್ಲಿ ಗೆದ್ದು ಶಾಸಕರಾದವರೂ ಇದ್ದರು. ಅಷ್ಟು ದೊಡ್ಡ ರಾಜಕೀಯೇತರ ಶಕ್ತಿಯಾಗಿ ಕನ್ನಡಿಗರು ಒಂದಾಗಿದ್ದರು. ನಿಧಾನವಾಗಿ ರಾಜಕೀಯ ಶಕ್ತಿ ಮೇಲುಗೈ ಸಾಧಿಸಿ ಕನ್ನಡಿಗರ ಒಗ್ಗಟ್ಟನ್ನು ಮುರಿಯುವಲ್ಲಿ ಸಫ‌ಲವಾಯಿತು. ಮತ್ತೆ ಏಕೀಕರಣದ ದನಿ ಕ್ಷೀಣಿಸುತ್ತಾ ಬಂದಿದೆ ಎಂಬುದು ವಾಸ್ತವ. ಅದು ಪ್ರತಿ ಭಟನೆಯಿಂದ ವೇದಿಕೆಯ ಭಾಷಣಕ್ಕೆ ಸೀಮಿತವಾಗುವ ವಿಷಯವಾಯಿತು. ಕನ್ನಡದ ಮೇಲೆ ಮಲಯಾಳದ ದಬ್ಟಾಳಿಕೆ ಅತಿಯಾದ ಕಾರಣಕ್ಕಾಗಿ ಇಲ್ಲಿಂದ ವಲಸೆ ಹೋದ ಕನ್ನಡಿಗರ ಸಂಖ್ಯೆಯೂ ದೊಡ್ಡದಾಗಿಯೇ ಇದೆ. ಗಡಿನಾಡು ಕಾಸರಗೋಡನ್ನು ಭಾರವಾದ ಹೃದಯ ದಿಂದ ತೊರೆದು ನೆರೆಯ ಕರ್ನಾಟಕಕ್ಕೆ ವಲಸೆ ಹೋದ ವರು ಅಪಾರ ಮಂದಿ. ಉಳಿದಿರುವವರಿಗೆ ಈಗ ಏಕೀಕರಣದಿಂದ ಇಲ್ಲಿ ಹೇಗೆ ಕನ್ನ ಡ ವನ್ನು ಉಳಿಸಿಕೊಳ್ಳುವುದು ಎಂಬುದೇ ಪ್ರಶ್ನೆಯಾಗಿದೆ.

ಮಲಯಾಳ ಕಡ್ಡಾಯ
ಇಲ್ಲಿನ ಕನ್ನಡ ಮಕ್ಕಳು ಮಲಯಾಳ ಕಲಿಯುವುದು ಕಡ್ಡಾಯ ಎಂಬ ನಿರ್ಣಯವನ್ನು ಸರಕಾರ ತೆಗೆದು ಕೊಂಡಿತ್ತು. ಅದು ಲಿಖೀತ ರೂಪದಲ್ಲಿ ಆದೇಶವಾಗಿ ಬರಲಿಲ್ಲ. ಅದಕ್ಕೂ ಕನ್ನಡಿಗ ಸಂಘಟನೆಯವರು ವಿರೋಧ ವ್ಯಕ್ತಪಡಿಸಿದ ಕಾರಣ ಲಿಖೀತವಾಗಿ ಆದೇಶ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಲಿಖೀತ ಆದೇಶ ನೀಡಿದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋದರೆ ಅಲ್ಲಿ ಸೋಲಾಗಬಹುದು ಎಂಬ ಕಾರಣಕ್ಕೆ ಸರಕಾರ ಹಿಂದೇಟು 
ಹಾಕುತ್ತಿರಬಹುದು. ಆದರೆ ಸರಕಾದ ಅಜೆಂಡಾ ಯಾವ ರೀತಿಯಲ್ಲಿದೆ ಮತ್ತು ಇಲ್ಲಿ ಕನ್ನಡವನ್ನು ಮುಗಿಸಲು ಏನೆಲ್ಲ ಕ್ರಮ ಕೈಗೊಳ್ಳುತ್ತಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆ. 

ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರು
ಕಾಸರಗೋಡಿನ ಕನ್ನಡ ಅಲ್ಪಸಂಖ್ಯಾಕ ಶಾಲೆಗಳಿಗೆ ಎಲ್ಲ ವಿಷಯಗಳಿಗೂ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಕ ಮಾಡಬೇಕು ಎಂಬ ಆದೇಶವೇ ಇದೆ. ಹೈಕೋರ್ಟ್‌ ಕೂಡ ಇದನ್ನೇ ಹೇಳಿದ್ದು, ಆ ಮೂಲಕ ಇಲ್ಲಿನ ಕನ್ನಡಿಗರ ಸಂವಿಧಾನ ಬದ್ಧ ಹಕ್ಕುಗಳನ್ನು ಕಾಪಾಡ ಬೇಕು ಎಂದು ಕೋರ್ಟ್‌ ಹೇಳಿದೆ. ಆದರೆ ಈಗ ಕೆಲವರ ಷಡ್ಯಂತ್ರ ದಿಂದಾಗಿ ಕನ್ನಡ ಬಾರದ ಶಿಕ್ಷಕರ ನೇಮಕವಾಗಿದೆ. ಸದ್ಯಕ್ಕೆ ಒಂದು ಶಾಲೆಗೆ ಗಣಿತ ಕಲಿಸಲು ಅಚ್ಚಮಲಯಾಳಿ ಪ್ರದೇಶದ ಶುದ್ಧ ಮಲಯಾಳಿ ಶಿಕ್ಷಕರ ನೇಮಕವಾಗಿದೆ. ಇದರ ವಿರುದ್ಧ ಪ್ರತಿಭಟನೆ ಜೋರಾಗಿದೆ. ಇನ್ನೂ ಕೆಲವರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅವರಿಗೆ ನೇಮಕ ಆದೇಶ ಸಿಕ್ಕಿದರೆ ಸಮಾಜ ಶಾಸ್ತ್ರದಥ ವಿಷಯಳಿಗೂ ಮಲಯಾಳಿ ಶಿಕ್ಷಕರಿಂದಲೇ ಪಾಠ ಹೇಳಸಿಕೊಳ್ಳಬೇಕಾದ ಸ್ಥಿತಿ ಎದುರಾಗುವ ಭೀತಿಯಿದೆ.

ಕನ್ನಡಿಗರ ಮೇಲೆಯೇ ಬೆನ್ನಿಗಿರಿದ ಆರೋಪ 
ಕನ್ನಡ ಬಲ್ಲ ಶಿಕ್ಷ ಕರನ್ನೇ ಇಲ್ಲಿಗೆ ನೇಮಿಸಬೇಕೆಂಬ ಆದೇಶ ಇರುವ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರ ಕನ್ನಡ ಭಾಷಾ ಜ್ಞಾನವನ್ನು ಅರಿಯಲು ಪರೀಕ್ಷೆ ನಡೆಸಲಾಗುತ್ತಿದೆ. ಆಗ ಕನ್ನಡಿಗರೇ ಉಪಸ್ಥಿತರಿದ್ದು ಅಭ್ಯರ್ಥಿಗೆ ಕನ್ನಡ ಗೊತ್ತಿದೆ ಎಂಬ ಶಿಫಾರಸು ನೀಡಬೇಕಾಗುತ್ತದೆ. ಈ ವಿಷಯದಲ್ಲಿ ಕನ್ನಡಿಗರೇ ತಮ್ಮ ಭಾಷೆಗೆ ಅನ್ಯಾಯ ಮಾಡದಂತಿದೆ. ಕನ್ನಡ ಗೊತ್ತಿಲ್ಲದವರಗೆ ಕನ್ನಡ ಗೊತ್ತಿದೆ ಎಂದು ಅಂಕ ಹಾಕಿದ್ದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದು ಕೂಡ ಚಿಂತಿಸಬೇಕಾದ ವಿಷಯವಾಗಿದ್ದು, 
ಅವರು ಯಾಕೆ ಹಾಗೆ ಮಾಡಿದ್ದಾರೆ, ಅವರು ಯಾವುದಾದರೂ ಪ್ರಭಾವಕ್ಕೆ ಒಳಗಾದರೇ ಅಥವಾ ಬಲವಂತದಿಂದ ಇಂಥ ಕ್ರಮ ಕೈಗೊಂಡರೇ ಎಂಬುದು ಕೂಡ ಇಲ್ಲಿ ಮುಖ್ಯ ವಾಗುತ್ತದೆ.

ಒಡೆದು ಆಳುವ ನೀತಿ 
ಕೇರಳ ಸರಕಾರ ಇಲ್ಲಿನ ಕನ್ನಡಿಗರನ್ನು ಒಡೆದು ಆಳುವ ನೀತಿಯನ್ನು ಹಿಂದಿನಿದಲೂ ಅನುಸರಿಸಿಕೊಂಡು ಬಂದಿದ್ದರಿಂದಲೇ ಈ ಭಾಗದಲ್ಲಿ ಕನ್ನಡ ದುರ್ಬಲವಾಗಲು ಪ್ರಮುಖ ಕಾರಣ. ಇಲ್ಲಿ ಕನ್ನಡಿಗರ ಹೆಸರಲ್ಲಿ ಒಂದು ಪರಿಣಾಮಕಾರಿ ಸಮಾವೇಶ ಮಾಡುವ ಶಕ್ತಿ ಸದ್ಯಕ್ಕೆ ಕಂಡುಬರುತ್ತಿಲ್ಲ. ಕನ್ನಡಿಗರ ಹೋರಾಟವನ್ನು ಹತ್ತಿಕ್ಕಲು ಸರಕಾರ ಬೇರೆ ಬೇರೆ ರೀತಿಯಲ್ಲಿ ಕ್ರಮಕೈಗೊಂಡು ಅದರಲ್ಲಿ ಯಶಸ್ಸು ಸಾಧಿಸಿದೆ ಎಂದು ಕೂಡ ಹೇಳಲು ಸಾಧ್ಯ. ಆದರೆ ಕನ್ನಡದ ಮೇಲೆ ಗದಾಪ್ರಹಾರ ಬೀಳುವ ಹೊತ್ತಿಲ್ಲಿ ಅದಕ್ಕೆ ಎದೆಯೊಡ್ಡಿ ಪ್ರತಿಭಟಿಸುವ ಶಕ್ತಿ ಮತ್ತು ಗುಣವನ್ನು ಈಗಲೂ ಕೆಲವು ಸಂಘಟನೆಗಳು ತೋರಿಸುತ್ತಿವೆ. ಕನ್ನಡ ಶಾಲೆ ಗಳಿಗೆ ಮಲಯಾಳಿ ಶಿಕ್ಷಕರ ನೇಮಕದಂಥ ವಿಷಯದಲ್ಲಿ ಪರಿಣಾಮಕಾರಿ ಹೋರಾಟಕ್ಕೆ ಸಂಘಟನೆಗಳು ಮುಂದಾಗಿರುವುದು ಶ್ಲಾಘನೀಯ. ಅವರ ಕೈ ಬಲಪಡಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಆಗಿದೆ.

ಕರ್ನಾಟಕ ಸರಕಾರದ ಸ್ಪಂದನೆ ಅಗತ್ಯ 
ಕಾಸರಗೋಡಿನಲ್ಲಿರುವ ಕನ್ನಡದ ಮಕ್ಕಳು ಕೇರಳ ಸರಕಾರದಿಂದ ಭಾಷಾ ಸಮಸ್ಯೆ ಎದುರಿಸುತ್ತಿರುವಾಗ ಕರ್ನಾ ಟಕ ಸರಕಾರ ಮೌನ ವಹಿಸುವುದು ಸಲ್ಲದು. ಕೇವಲ ಒಂದೆರಡು ಪತ್ರ ಬರೆದ ಮಾತ್ರಕ್ಕೆ ಮತ್ತು ಒಂದು ಕರೆ ಮಾಡಿ ಮಾತನಾಡಿದ ಮಾತ್ರಕ್ಕೆ ಜಗ್ಗುವವರಲ್ಲ ಕೇರಳದ ಆಡಳಿತದ ಚುಕ್ಕಾಣಿ ಹಿಡಿದವರು. ಕರ್ನಾಟಕ ಸರಕಾರವು ತನ್ನ ಬಲವಾದ ವಿರೋಧ ಮತ್ತು ಅಸಮಾಧಾನವನ್ನು ಕಾನೂನು ಪರಿಧಿಯೊಳಗೆ ಕೇರಳ ಸರಕಾರಕ್ಕೆ ವ್ಯಕ್ತಪಡಿಸಬೇಕಾಗುತ್ತದೆ. ಕನ್ನಡಿಗರ ಮೇಲೆ ಕರ್ನಾಟಕಕ್ಕೆ ಯಾವ ಸಾಂವಿಧಾನಿಕ ಹಕ್ಕುಗಳಿಗೆ, ಅವುಗಳನ್ನು ರಕ್ಷಿಸಲು ಏನು ಮಾಡಲು ಸಾಧ್ಯ ಎಂಬುದನ್ನು ಚಿಂತಿಸಿ ಆ ನಿಟ್ಟಿನಲ್ಲಿ ಕೇರಳ ಸರಕಾರದೊಂದಿಗೆ ಮಾತುಕತೆ ನಡೆಸಿ ಕಾಸರಗೋಡಿನಲ್ಲಿ ಕನ್ನಡ ಉಳಿಸಲು ಮತ್ತು ಅಲ್ಲಿನ ಕನ್ನಡಿಗರ ಹಿತ ರಕ್ಷಣೆಗೆ ಕರ್ನಾಟಕ ಸರಕಾರ ಕಟಿಬದ್ಧವಾಗಬೇಕಾಗಿದೆ. ನೆರೆ ರಾಜ್ಯದಲ್ಲಿದ್ದರೂ ಕಾಸರಗೋಡಿನರು ಕನ್ನಡಿಗರು ಎಂಬುದನ್ನು ಒಪ್ಪಿಕೊಂಡು ಅವರ ಹಿತರಕ್ಷಣೆ ತನ್ನ ಕರ್ತವ್ಯವೂ ಹೌದು ಎಂಬುದನ್ನು ಅರ್ಥೈಸಿಕೊಂಡು ಕರ್ನಾಟಕ ಸರಕಾರವು ಉನ್ನತ ಮಟ್ಟದಲ್ಲಿ ಕೇರಳದೊಂದಿಗೆ ವ್ಯವಹರಿಸಿ ಕಾಸರಗೋಡಿನ ಕನ್ನಡಿಗರ ರಕ್ಷಣೆಗೆ ತುರ್ತಾಗಿ ಮುಂದಾಗಬೇಕಿದೆ. 
ಕೇರಳ ಸರಕಾರವು ಕನ್ನಡಿಗರನ್ನು ಅಲುಗಾಡಿಸಿ ನೋಡುವ ಕೆಲಸವನ್ನು ಆಗಾಗ ಮಾಡುತ್ತಲೇ ಇದೆ. ಅದನ್ನು ಶಾಶ್ವತವಾಗಿ ಇಲ್ಲವಾಗಿಸಲು ಕರ್ನಾಟಕ ಸರಕಾರದ ಪ್ರಬಲ ಎಚ್ಚರಿಕೆ ಮತ್ತು ಸಮರ್ಥ ಕ್ರಮದಿಂದ ಮಾತ್ರ ಸಾಧ್ಯ. ಆ ನಿರೀಕ್ಷೆಯಲ್ಲಿದ್ದಾರೆ ಕಾಸರಗೋಡಿನ ಕನ್ನಡಿಗರು. 

* ಪುತ್ತಿಗೆ ಪದ್ಮನಾಭ ರೈ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.