CONNECT WITH US  

ಪುರುಷರು ಹೆಚ್ಚು ಸೆಕ್ಸ್‌ ನಡೆಸಿದ್ರೆ,ದೈವಭಕ್ತಿಯೂ ಹೆಚ್ಚಾಗುತ್ತೆ!

ಅತೀವ ದೈವಭಕ್ತರ ಬಳಿ ಸೆಕ್ಸ್‌ ಅಂದರೆ ಇಶ್ಶೀ.. ಎಂದು ಮೂಗು ಮುರಿಯಬಹುದು. ಶಿವ ಶಿವಾ ಎಂದು ಕಿವಿ ಮುಚ್ಚಿಕೊಳ್ಳಬಹುದು. ಆದರೆ ಇಲ್ಲೊಂದು ಸಮೀಕ್ಷೆ ಅರೆ ಹೌದಾ ಎಂದು ಹುಬ್ಬೇರಿಸುವ ಫ‌ಲಿತಾಂಶ ನೀಡಿದೆ. ಏನಪ್ಪಾ ಅಂದ್ರೆ, ಪುರುಷರು ಹೆಚ್ಚು ಸೆಕ್ಸ್‌ ನಡೆಸಿದ್ರೆ ಅವರಿಗೆ ದೈವಭಕ್ತಿಯೂ ಹೆಚ್ಚಾಗುತ್ತೆ ಅಂತ ಹೇಳಿದೆ.

ಅಮೆರಿಕದ ಡ್ನೂಕ್‌ ವಿಶ್ವವಿದ್ಯಾಲಯ ಈ ಸಮೀಕ್ಷೆ ನಡೆಸಿದ್ದು, ಸೆಕ್ಸ್‌ ವೇಳೆ ಬಿಡುಗಡೆಯಾಗುವ "ಲವ್‌ ಹಾರ್ಮೋನ್‌-ಆಕ್ಸಿಟಾಸಿನ್‌'ನಿಂದಾಗಿ ಪುರುಷರಲ್ಲಿ ದೈವಭಕ್ತಿ ಹೆಚ್ಚಲೂ ಕಾರಣವಾಗುತ್ತದೆ ಎಂದು ಹೇಳಿದೆ.

ದೇವರ ಮೇಲೆ ನಂಬಿಕೆ ಅಥವಾ ಧರ್ಮದ ಮೇಲೆ ನಂಬಿಕೆಗಳು ಇದರಿಂದ ಹೆಚ್ಚಬಹುದಂತೆ. ಇದೇ ಹಾರ್ಮೋನ್‌ ಮಗು ಜನಿಸಿದಾಗ, ಮೊಲೆಹಾಲೂಡಿಸುವ ವೇಳೆಯೂ ಮಾನವರಲ್ಲಿ ಬಿಡುಗಡೆಗೊಳ್ಳುತ್ತದೆ. ಸಮೀಕ್ಷೆ ಪ್ರಕಾರ ಒಂದು ವಾರದ ಅವಧಿಯಲ್ಲಿ ನಿಯಮಿತವಾಗಿ ಸೆಕ್ಸ್‌ ನಡೆಸಿದ ಪುರುಷರಲ್ಲಿ ದೈವಭಕ್ತಿಯ ಭಾವನೆಗಳಲ್ಲಿ ಬದಲಾವಣೆಗಳು ಕಂಡು ಬಂದಿದೆ. ಹಾರ್ಮೋನ್‌ನಿಂದಾಗಿ ಭಕ್ತಿಯ ಬದಲಾವಣೆಗಳ ಬಗ್ಗೆ ಇನಷ್ಟು ಸಂಶೋಧನೆಗಳು ಆಗಬೇಕಿದೆ. ಸದ್ಯದ ಫ‌ಲಿತಾಂಶಗಳ ಮೇಲೆ ಇನ್ನಷ್ಟು ಪರಾಮರ್ಶೆಯೂ ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಫ‌ಲಿತಗಳು... 
ಸೆಕ್ಸ್‌ಗೂ, ದೈವಭಕ್ತಿಗೂ ಸಂಬಂಧವಿದೆ!:ಸಮೀಕ್ಷೆಯಲ್ಲಿ ಬಟಾಬಯಲು

 ಹೆಚ್ಚೆಚ್ಚು ಸೆಕ್ಸ್‌ ನಡೆಸಿದ್ರೆ, ಪುರುಷರಲ್ಲಿ ದೈವಭಕ್ತಿ ಹೆಚ್ಚು

ಆಕ್ಸಿಟಾಸಿನ್‌ ಹಾರ್ಮೋನ್‌ ಕರಾಮತ್ತಿನಿಂದಾಗಿ ಪುರುಷರಿಗೆ ದೈವಭಕ್ತಿ ಹೆಚ್ಚಾಗುತ್ತೆ

ಸೆಕ್ಸ್‌ ನಡೆಸಿದ ಪುರುಷರಲ್ಲಿ ಧಾರ್ಮಿಕ ಮನೋಭಾವನೆ ತೀವ್ರ ಬದಲು

Trending videos

Back to Top