CONNECT WITH US  

ಮಹಿಳೆಯರಿಗೇ ಬುದ್ಧಿ ಮಾಂದ್ಯತೆ,ಮರೆವಿನ ಕಾಯಿಲೆ ಅಪಾಯ ಹೆಚ್ಚು!

ಏನೇ ಹೇಳಿ, ಮಹಿಳೆಯರಿಗೆ ನೆನಪಿರುತ್ತೆ!, ಬರ್ತ್‌ಡೇ, ಮದ್ವೆ ವಾರ್ಷಿಕೋತ್ಸವ, ಯಾವುದೋ ವಸ್ತುತೆಗೆದುಕೊಂಡ ದಿನಾಂಕ ಎಲ್ಲ, ಕೇಳಿದ್ರೆ ಫ‌ಟಾಫ‌ಟ್‌ ಉತ್ತರ. ಪುರುಷರಿಗಿಂತ ಮಹಿಳೆಯರಿಗೇ
ನೆನಪಿನ ಶಕ್ತಿ ಹೆಚ್ಚು ಅನ್ನೋದು ನಿಜ. ಆದ್ರೆ ಇದರೊಂದಿಗೆ ಅವರಿಗೆ ಬುದ್ಧಿಮಾಂದ್ಯತೆ ಮರೆವಿನ ಕಾಯಿಲೆ ಅಪಾಯ ಹೆಚ್ಚು ಎಂಬುದನ್ನು ಹೊಸ ಸಮೀಕ್ಷೆ ಬಯಲು ಮಾಡಿದೆ.

ಮಹಿಳೆಯರು ಋತುಮತಿಯಾಗುವುದು ಸ್ಥಗಿತಗೊಂಡ ಬಳಿಕ ಅವರಲ್ಲಿ ಈಸ್ಟ್ರೋಜನ್‌ ಹಾರ್ಮೋನ್‌ ಕೂಡ ಇಳಿಕೆ ಕಾಣುತ್ತದೆ. ಈ ಸಂದರ್ಭ ಅವರ ನೆನಪಿನ ಶಕ್ತಿ ಕೂಡ ಇಳಿಕೆ ಕಾಣುತ್ತದೆ ಎಂದು
ಹೇಳಲಾಗಿದೆ. ಜರ್ನಲ್‌ ಮೀನೋಪಾಸ್‌ ನಿಯತಕಾಲಿಕೆಯಲ್ಲಿ ಈ ಬಗ್ಗೆ ಹೇಳಲಾಗಿದೆ. ಮಹಿಳೆಯರು ಋತುಮತಿ ಆಗುವುದು ಸ್ಥಗಿತಗೊಂಡ ಬಳಿಕ ಅವರ ಮೆದುಳಿನಲ್ಲಿ ಮರೆವು ಬಾಧಿಸುತ್ತದೆ
ಎಂದು ಹೇಳಲಾಗಿದೆ. ಇದು ಪುರುಷರಿಗೆ ಹೋಲಿಸಿದರೆ ಹೆಚ್ಚು ಎನ್ನಲಾಗಿದೆ. ಸಮೀಕ್ಷೆಗಾಗಿ 212 ಮಂದಿ 45 ರಿಂದ 55 ವಯಸ್ಸಿನ ಮಹಿಳೆಯರನ್ನು ಸಂದರ್ಶಿಲಾಗಿದ್ದು, ಅವರಲ್ಲಿನ ನೆನಪಿನ ಶಕ್ತಿಯ ಕುರಿತ ಸಮಸ್ಯೆಗಳನ್ನು ಪತ್ತೆ ಹಚ್ಚಲಾಗಿದೆ. ಅವರಿಗೆ ಅರಿವಿನ ಪರೀಕ್ಷೆ, ಮಾತುಗಾರಿಕೆ ಇತ್ಯಾದಿ ಮನಃಶಾಸ್ತ್ರೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ನೆನಪಿನ ಶಕ್ತಿಯಲ್ಲಿ ಏರುಪೇರು ಕಂಡುಬಂದಿದೆ.

ಫ‌ಲಿತಗಳು...

ಮಹಿಳೆಯರು ಋತುಮತಿ ಯಾಗುವುದು ಸ್ಥಗಿತವಾದ ಬಳಿಕ ಅವರಲ್ಲಿ ಮರೆವಿನ ಸಮಸ್ಯೆ ಹೆಚ್ಚು

ಈಸ್ಟ್ರೋಜನ್‌ ಹಾರ್ಮೋನ್‌ ಇಳಿಕೆ ಬಳಿಕ ಮರೆವಿನ ಸಮಸ್ಯೆ, ಬುದ್ಧಿಮಾಂದ್ಯತೆ ಅಪಾಯ

ಮೆದುಳಿನ ಶಕ್ತಿ ಕುಂಠಿತ, ಪುರುಷರಿಗೆ ಹೋಲಿಸಿದರೆ ಈ ಸಮಸ್ಯೆ ಹೆಚ್ಚು ತೀವ್ರ.

Trending videos

Back to Top