CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆಫೀಸಲ್ಲಿ ಲವ್‌ ಶುರುವಾದ್ರೆ,ಮದ್ವೇಲಿ ಮುಕ್ತಾಯ!

ಆಫೀಸಲ್ಲಿ ಕೆಲಸ ಮಾಡುವವರು ತಮ್ಮ ಸಹೋದ್ಯೋಗಿಗಳನ್ನು ಪ್ರೀತಿಸುವುದು ಹೊಸತೇನಲ್ಲ. ಯಾವುದಾದರೊಂದು ಕಾರಣಕ್ಕೆ ಮಾತು ಶುರುವಾಗಿ ಕೊನೆಗೆ ಆಫೀಸ್‌ಗೆ ಹೋಗೋದು, ಬರೋದು ಒಟ್ಟಿಗೆ ಎಂದಾಗಿ, "ನಾನಿನ್ನ ಬಿಟ್ಟಿರಲಾರೆ' ಎಂಬಷ್ಟು ಪ್ರಕರಣ ಬೆಳೆಯುತ್ತದೆ. ಈ ಆಫೀಸ್‌ ಲವ್‌ ಎಲ್ಲಾ ಕಡೆಯೂ ಇದ್ದಿದ್ದೇ. ಹೀಗೆ ಆಫೀಸ್‌ನಲ್ಲಿ ಲವ್‌ ಮಾಡಿದವರ ಮದುವೆ ಸಾಧ್ಯತೆಯೂ ಹೆಚ್ಚು ಎಂದು ಸಮೀಕ್ಷೆ ಹೇಳಿದೆ. ಮಾಹಿತಿ ತಂತ್ರಜ್ಞಾನದ ಕಂಪನಿಗಳು, ಹಣಕಾಸು, ಆಸ್ಪತ್ರೆ ಇತ್ಯಾದಿ ಕಚೇರಿಗಳಲ್ಲಿ ನಡೆದ ಲವ್‌ ಪ್ರಕರಣಗಳಲ್ಲಿ ಬಹುತೇಕ ಸುಖಾಂತ್ಯವಾಗಿದೆಯಂತೆ. ಸಮೀಕ್ಷೆಗಾಗಿ 4,216 ಮಂದಿಯನ್ನು ಸಂದರ್ಶಿಸಲಾಗಿದ್ದು, ಅವರಲ್ಲಿ ಶೇ.30 ಮಂದಿ ತಾವು ತಮ್ಮ ಸಹೋದ್ಯೋಗಿಯನ್ನು ಪ್ರೀತಿಸಿ ಅದರಲ್ಲಿ ಯಶಸ್ಸು ಕಂಡಿದ್ದಾಗಿ ಹೇಳಿದ್ದಾರೆ.

ಸಹೋದ್ಯೋಗಿಯನ್ನು ಪ್ರೀತಿಸುವಲ್ಲಿ ಪುರುಷರು ಮುಂದಿದ್ದು (ಶೇ.38) ಮಹಿಳೆಯರು (ಶೇ.21) ರಷ್ಟಿದ್ದಾರೆ. ಹೆಚ್ಚಿನವರು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳುತ್ತಿದ್ದರೆ, ಶೇ.38ರಷ್ಟು ಮಂದಿ ಕದ್ದುಮುಚ್ಚಿ ಪ್ರೀತಿ ಮಾಡುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಒಂದೇ ಕಡೆ ಕೆಲಸ, ಹೆಚ್ಚು ಭೇಟಿ, ಒಂದೇ ರೀತಿಯ ಆಕಾಂಕ್ಷೆ, ಅನುಭವಗಳು ಆಫೀಸ್‌ ಲವ್‌ನ್ನು ನೀರೆರೆದು ಪೋಷಿಸುತ್ತವೆ. ಪರಿಣಾಮ ಬಹುತೇಕ ಪ್ರಕರಣಗಳು ಮದುವೆಯಲ್ಲಿ ಮುಕ್ತಾಯವಾಗುತ್ತವೆ ಎಂದು ಸಮೀಕ್ಷೆ ಹೇಳಿದೆ. 

ಫ‌ಲಿತಗಳು...
ಆಫೀಸ್‌ ಪ್ರಣಯ ಮದುವೆಯಲ್ಲೇ  ಮುಕ್ತಾಯ

ಸಹೋದ್ಯೋಗಿಗಳನ್ನು ಪ್ರೀತಿಸುವಲ್ಲಿ ಪುರುಷರೇ ಮುಂದು

ಒಂದೇ ರೀತಿಯ ಆಕಾಂಕ್ಷೆ, ಅನುಭವಗಳು ಆಫೀಸ್‌ ಲವ್‌ಗೆ ಕಾರಣ!

ಆಫೀಸಲ್ಲಿ ಶೇ.38ರಷ್ಟು ಮಂದಿಯಿಂದ ಕದ್ದುಮುಚ್ಚಿ ಪ್ರೀತಿ!

ಇಂದು ಹೆಚ್ಚು ಓದಿದ್ದು

Nov 21, 2017 09:24am

ಸಂತ್ರಸ್ತ ಮಹಿಳೆ  ಮತ್ತು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ ಎಸ್‌ಡಿಪಿಐ ಮುಖಂಡರು

Nov 21, 2017 09:04am

ಉಡುಪಿ: ಪೇಜಾವರ ಮಠದ ದಿವಾನರಾದ ರಘುರಾಮಾಚಾರ್ಯ ಉಗ್ರಾಣ ಮುಹೂರ್ತ ನೆರವೇರಿಸಿದರು.

Nov 21, 2017 08:31am

ಉಡುಪಿ: ವಸುಂಧರಾ ರಾಜೇ ಅವರಿಗೆ ಪೇಜಾವರ ಶ್ರೀಗಳು ಸ್ಮರಣಿಕೆ, ಪ್ರಸಾದ ನೀಡಿದರು.

Nov 21, 2017 08:04am

ಕೊಲ್ಲೂರು: ವಸುಂಧರಾ ರಾಜೇ ಅವರು ಕೊಲ್ಲೂರು ದೇಗುಲ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.

Nov 21, 2017 08:02am
Back to Top