CONNECT WITH US  

ಕೆಂಪು ಮುಖದ ಹುಡುಗರೇ ಹುಡ್ಗೀರಿಗೆ ಇಷ್ಟವಂತೆ ಕಣ್ರೀ!

ಕೆಂಪು ಚಂದಿರನ ಮುಖ. ಶೇವ್‌ ಮಾಡ್ಕೊಂಡು ನೀಟಾಗಿ ಕಾಣುತ್ತಿದ್ದರೆ, ಎಂತಹ ಹುಡುಗಿಯೂ ಆ ಹುಡುಗನಿಗೆ ಫಿದಾ ಆಗಬೇಕು. ಸ್ವಲ್ಪ ಬೆಳ್ಳಗೆ, ಕೆನ್ನೆ ಕೆಂಪು ಇರುವ ಹುಡುಗರಿಗೇ ಹುಡುಗಿಯರು ಹೆಚ್ಚು ಮನಸೋಲುತ್ತಾರೆ ಅಂತಾ ಸಮೀಕ್ಷೆ ಹೇಳಿದೆ.

ನೋಟಿಂಗ್‌ಹ್ಯಾಮ್‌ ವಿಶ್ವವಿದ್ಯಾಲಯ ನಡೆಸಿದ ಈ ಸಮೀಕ್ಷಾ ವರದಿಯಲ್ಲಿ ಎಂತಹ ಹುಡುಗರನ್ನು ಕಂಡರೆ ಸಾಕು ಹುಡುಗಿಯರು ಕ್ಯೂ ನಿಲ್ಲೋಕೂ ರೆಡಿಯಂತೆ!. ಸಮೀಕ್ಷೆ ವೇಳೆ ಹುಡುಗಿಯರ ಮನಸ್ಸು ಅರಿಯಲು, ಹಲವು ಮೈಬಣ್ಣದ, ಹುಡುಗರ ಫೋಟೋ ಹುಡುಗಿಯರಿಗೆ ನೀಡಲಾಗಿದ್ದು, ಗುರುತು ಹಾಕುವಂತೆ ಕೇಳಲಾಗಿದೆ.

ಅದರಂತೆ ಹೆಚ್ಚಿನ ಹುಡುಗಿಯರು ಸ್ಪಲ್ಪ ಕೆಂಪು ಕೆಂಪಾದ ಕೆಂಪು ಚಂದಿರ ನಂತಹ ಹುಡುಗರನ್ನೇ ಆರಿಸಿದ್ದಾರೆ. ಕೆಂಪು ಮೋರೆಯ ಹುಡುಗರು ಅತ್ಯಂತ ಆಕರ್ಷಕವಾಗಿದ್ದು, ಸೂಜಿಗಲ್ಲಿನಂತೆ ಸೆಳೆಯುತ್ತಾರೆ ಎಂದು ಹೇಳಿದ್ದಾರೆ. ಆದರೆ ಕೋಪದಿಂದ ಮುಖ ಕೆಂಪಾದರೆ ಅದು ನಮಗೆ ಚೆನ್ನಾಗಿ ಕಾಣಲ್ಲ ಎಂದು ಹುಡುಗಿಯರು ಅಭಿಪ್ರಾಯಪಟ್ಟಿದ್ದಾರೆ.

ಆಮ್ಲಜನಕ ಯುಕ್ತ ರಕ್ತ ಕಣಗಳಿಂದಾಗಿ ಸಹಜವಾಗಿರುವ ಕೆಂಪಾದ ಮುಖವೇ ನಮಗೆ ಇಷ್ಟ ಎಂದು ಹೇಳಿದ್ದಾರೆ. ಇದರೊಂದಿಗೆ ಅತ್ಯಂತ ಜಾಣರಾದ, ಆಕ್ರಮಣಶೀಲ, ನಾಯಕತ್ವದ ಗುಣದ ಸ್ವಭಾವವಿರುವ ಹುಡುಗರಿಗೆ ಹುಡುಗಿಯರು ಮನಸೋಲುತ್ತಾರೆ ಎಂದೂ ಸಮೀಕ್ಷೆ ಹೇಳಿದೆ.

ಫ‌ಲಿತಗಳು...

ಹುಡುಗರ ಕೆಂಪು ಗಲ್ಲ ನೋಡಿದಾಗೆಲ್ಲ ಹುಡುಗಿಯರ ಕೆನ್ನೆಯೂ ಕೆಂಪು!

ಕೆಂಪು ಚಂದಿರನಂತಹ ಹುಡುಗನೇ ಬೇಕು: ಹುಡುಗಿಯರ ಅಭಿಪ್ರಾಯ

ಆಕ್ರಮಣಶೀಲ, ನಾಯಕತ್ವದ ಗುಣವಿರುವ ಹುಡುಗರಿಗೂ ಹುಡುಗಿಯರು ಮನಸೋಲುತ್ತಾರಂತೆ!

Trending videos

Back to Top