CONNECT WITH US  

ಪಾಲಿಕೆ ಚುನಾವಣೆ: ಮತದಾನಕ್ಕೆ ಕ್ಷಣಗಣನೆ

ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ಮತದಾನ ಶುಕ್ರವಾರ ನಡೆಯಲಿದ್ದು ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಗುರುವಾರ ಮಧ್ಯಾಹ್ನದಿಂದಲೇ ಸಹ್ಯಾದ್ರಿ ಕಾಲೇಜಿನ ಮಸ್ಟರಿಂಗ್‌ ಕೇಂದ್ರದಿಂದ ಮತಯಂತ್ರ ಹಾಗೂ ಅಗತ್ಯ ಪರಿಕರಗಳನ್ನು ಪಡೆದು ಮತಕೇಂದ್ರಗಳತ್ತ ತೆರಳುತ್ತಿದ್ದ ದೃಶ್ಯ ಕಂಡುಬಂತು. ಈ ಬಾರಿ 303 ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಮತ ಯಂತ್ರಗಳನ್ನು ಕೊಂಡೊಯ್ಯಲು 45 ಬಸ್‌ಗಳನ್ನು ಬಳಸಲಾಗುತ್ತಿದೆ.

ಸಹ್ಯಾದ್ರಿ ನಗರ ವಾರ್ಡ್‌ನಲ್ಲಿ 10 ಮತದಾನ ಕೇಂದ್ರ, ಅಶ್ವಥ್‌ ನಗರ 10, ಶಾಂತಿನಗರ 10, ಮಲ್ಲೇಶ್ವರ 8, ಗುಡ್ಡೇಕಲ್ಲು 8, ಗಾಡಿಕೊಪ್ಪ 11, ಕಲ್ಲಹಳ್ಳಿ ಕೆಎಚ್‌ಬಿ 10, ಜೆಪಿಎನ್‌ ನಗರ 8, ಗಾಂ ನಗರ 7, ರವೀಂದ್ರನಗರ 8, ಬಸವನಗುಡಿ 10, ಟ್ಯಾಂಕ್‌ ಮೊಹಲ್ಲಾ 9, ಅರಮನೆ ವಾರ್ಡ್‌ 9, ವಿದ್ಯಾನಗರ 6, ಹರಿಗೆ 8, ಮಲವಗೊಪ್ಪ 6, ಗೋಪಾಲಗೌಡ ಬಡಾವಣೆ 7, ವಿನೋಬನಗರ ದಕ್ಷಿಣ 9, ಶರಾವತಿ ನಗರ 10, ಹೊಸಮನೆ 9, ದುರ್ಗಿಗುಡಿ 8, ಗಾಂ ಬಜಾರ್‌ ಪಶ್ಚಿಮ 10, ಗಾಂಧಿ ಬಜಾರ್‌ ಪೂರ್ವ 9, ಜೆಪಿ ನಗರ 8, ಅಶೋಕ ನಗರ 8, ಮಿಳಘಟ್ಟ 10, ಆರ್‌ಎಂಎಲ್‌ ನಗರ 11, ಆಜಾದ್‌ನಗರ 9, ಸೀಗೆಹಟ್ಟಿ 10, ಗೋಪಿಶೆಟ್ಟಿಕೊಪ್ಪ 8, ಟಿಪ್ಪು ನಗರ 8, ಸವಾಯಿಪಾಳ್ಯ 9, ವಿದ್ಯಾನಗರ ದಕ್ಷಿಣ 7, ಸೂಳೆಬೈಲಿನಲ್ಲಿ 6 ಮತಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 35 ವಾರ್ಡ್‌ಗಳಲ್ಲಿ 274218 ಮತದಾರರಿದ್ದಾರೆ. ಸೆ.3ರಿಂದ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಕುರುಡು ಕಾಂಚಾಣ: ಪಾಲಿಕೆ ಚುನಾವಣೆಯಲ್ಲಿ ಅಲ್ಲಲ್ಲಿ ಕುರುಡು ಕಾಂಚಾಣ ಕುಣಿಯುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಮನೆ ಮನೆಗೆ 5 ಸಾವಿರ ರೂ. ಕೂಡ ಹಂಚಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ದೇವರ ಫೋಟೋ ಮತ್ತು ನೋಟು ಕೊಟ್ಟು ನನಗೆ ಮತ ನೀಡಬೇಕೆಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ. ಎಲ್ಲ
ಪಕ್ಷದ ಅಭ್ಯರ್ಥಿಗಳು ಹಣ ಹಂಚಿದ್ದಾರೆ ಎನ್ನಲಾಗಿದ್ದು, ಕೆಲ ವಾರ್ಡ್‌ ಕ್ಯಾಂಡಿಟೇಟ್‌ಗಳು ಒಂದು ರೂ. ಕೂಡ ಕೊಟ್ಟಿಲ್ಲ. ಸ್ಮಾರ್ಟ್‌ಸಿಟಿ ಹೆಸರಲ್ಲಿ ನೂರಾರು ಕೋಟಿ ಅನುದಾನ ಬಂದಿದ್ದು ಇದರ ಮೇಲೆ ಕಣ್ಣಿಟ್ಟ ಕೆಲ ಅಭ್ಯರ್ಥಿಗಳು ಕೋಟಿ ರೂ. ವರೆಗೂ ಖರ್ಚು ಮಾಡಿದ್ದಾರೆ.

ಗನ್‌ಮ್ಯಾನ್‌: ವಾರ್ಡ್‌ ನಂ.21ರ ಕಾಂಗ್ರೆಸ್‌ ಅಭ್ಯರ್ಥಿ ಪವಿತ್ರಾ ಗೋಪಿ ಅವರಿಗೆ ಗನ್‌ಮ್ಯಾನ್‌ ಭದ್ರತೆ ಒದಗಿಸಲಾಗಿದೆ. ಈ ಮತಗಟ್ಟೆಯು ಅತೀ ಸೂಕ್ಷ್ಮ ಪ್ರದೇಶಕ್ಕೆ ಒಳಪಟ್ಟಿದ್ದು ಅಲ್ಲದೇ ಈಚೆಗೆ ನಡೆದ ಕೆಲ ಘಟನೆಗಳಿಂದ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ನೀಡಲಾಗಿತ್ತು. ತಕ್ಷಣ ಗನ್‌ಮ್ಯಾನ್‌ ನೀಡಿದ್ದಾರೆ.
 
ಪ್ರಚಾರಕ್ಕೆ ಅಡ್ಡಿ: ಭಾರತಿ ಕಾಲೋನಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್‌ ಠಾಣೆ ಮುಂದೆ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಹಲ್ಲೆ ದೂರು ದಾಖಲಿಸಲಾಗಿ¨


Trending videos

Back to Top