CONNECT WITH US  

ನಂಬಿದ್ರೆ ನಂಬಿ..ಐಫೋನ್‌ ಸೆಟ್‌ನಲ್ಲಿ ನಿಗೂಢ ಭೂತ, ನೀವೇ ಪರೀಕ್ಷಿಸಿ!

ವಾಷಿಂಗ್ಟನ್‌ : ಇಲ್ಲೊಬ್ಬ ವ್ಯಕ್ತಿ ಅತ್ಯಾಸೆಯಿಂದ ಹೊಸದಾಗಿ ಒಂದು ಐಫೋನ್‌ ಕೊಂಡುಕೊಂಡಿದ್ದಾನೆ. ಅದರಿಂದ ಆತ ಇನ್ನೂ ಒಂದೇ ಒಂದು ಚಿತ್ರವನ್ನು ಕೂಡ ಸೆರೆ ಹಿಡಿದಿಲ್ಲ. ಆದರೆ ಏನಾಶ್ಚರ್ಯ ? ಅದಾಗಲೇ ಆತನ ಹೊಸ ಐಫೋನ್‌ನಲ್ಲಿ ಭಯ ಹುಟ್ಟಿಸುವ ರೀತಿಯ ಮುಖ ಚಹರೆಯ ಮಹಿಳೆಯ ಫೋಟೋ ಇದೆ ! ನಿದ್ರಿಸುವಂತೆ ಕಂಡು ಬರುತ್ತಿರುವ ಮಹಿಳೆಯ ಈ ಭಯಾನಕ ಫೋಟೋದಲ್ಲಿ ಆಕೆಯ ಮುಖದ ತುಂಬೆಲ್ಲ ಗಾಯಗಳಿವೆ; ರಕ್ತ ಸುರಿಯುತ್ತಿದೆ. ಆಕೆ ಬದುಕಿರುವಳೇ, ಸತ್ತಿರುವಳೇ ಅಥವಾ ಆಕೆ ಯಾರು ಮುಂತಾಗಿ ಒಂದೂ ಗೊತ್ತಾಗುವಂತಿಲ್ಲ !

ಈ ಐಫೋನ್‌ ಖರೀದಿಸಿದಾತ ಅದರಲ್ಲಿನ ನಿಗೂಢ ಮಹಿಳೆಯ ಫೋಟೋದ ವಿವರಗಳನ್ನು ವೀಕ್ಷಿಸುವ ಸಲುವಾಗಿ ಅದನ್ನು ಬೇರೊಂದು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಆದರೆ ವಿಚಿತ್ರವೆಂಬಂತೆ ಹಾಗೆ ಸೆರೆ ಹಿಡಿದ ಫೋಟೋವನ್ನು ಓಪನ್‌ ಮಾಡಲು ಕೂಡ ತನಗೆ ಸಾಧ್ಯವಾಗಿಲ್ಲ ಎಂದಾತ ಹೇಳಿದ್ದಾನೆ.

ನಿಗೂಢ ಮಹಿಳೆಯ ಈ ಫೋಟೋ ಇರುವ ಐಫೋನ್‌ ನ ವಿಡಿಯೋ ಒಂದನ್ನು ಪ್ರಖ್ಯಾತ ಯೂ ಟ್ಯೂಬ್‌ ಬಳಕೆದಾರ ಜೂಲಿಯನ್‌ ಕ್ಯಾವೆಲೆರೋ ಎಂಬಾತ ಚಿತ್ರೀಕರಿಸಿ ಅದನ್ನು ಅಪ್‌ಲೋಡ್‌ ಮಾಡಿದ್ದಾರೆ. ನಂಬ್ರಿದ್ರೆ ನಂಬಿ - 20 ಲಕ್ಷಕ್ಕೂ ಅಧಿಕ ಕುತೂಹಲಿಗಳು ಈ ವಿಡಿಯೋ ವೀಕ್ಷಿಸಿದ್ದಾರೆ. ಅಂತೆಯೇ ಈ ನಿಗೂಢ ಮಹಿಳೆಯ ಫೋಟೋ ಮತ್ತು ವಿಡಿಯೋ ಈಗ ಏಕ್‌ದಂ ವೈರಲ್‌ ಆಗಿದೆ.

ಅನೇಕರ ದೃಷ್ಟಿಯಲ್ಲಿ ಈ ಭಯಾನಕ ಮಹಿಳೆ ಅತ್ಯಂತ ನಿಗೂಢಳಾಗಿದ್ದು ಯಾವುದೋ ಮಾಂತ್ರಿಕ ಶಕ್ತಿಯ ದ್ಯೋತಕವಾಗಿದ್ದಾಳೆ. ಇನ್ನು ಕೆಲವರ ದೃಷ್ಟಿಯಲ್ಲಿ ಇದು ಯಾವುದೋ ಹ್ಯಾಕರ್‌ನ ಕರಾಮತ್ತು ಆಗಿರಬಹುದೆಂಬ ಗುಮಾನಿ ಇದೆ.

ಈ ಭಯಾನಕ ಮಹಿಳೆಯ ನಿಗೂಢ ಫೋಟೋ ಇರುವ ತನ್ನ ಹೊಸ ಐಫೋನನ್ನು ಖರೀದಿಸಿದಾತ ತಾನು ಅದರ ನಿಗೂಢತೆಯನ್ನು ಅರಿಯಲು ಅದನ್ನು ಮತ್ತೆ ಖರೀದಿಸಿದ ಅಂಗಡಿಗೇ ಒಯ್ದಿದ್ದಾನೆ. ಅಲ್ಲಿನ ಐಫೋನ್‌ ಸರ್ವೀಸ್‌ ನೀಡುವಾತ ಈ ಫೋಟೋ ಕಂಡು ಹೌಹಾರಿದ್ದಾನೆ !

ನೀವೂ ಒಮ್ಮೆ ಇಲ್ಲಿರುವ ವಿಡಿಯೋ ವೀಕ್ಷಿಸಿ ; ನಿಮಗೆ ಈ ಐಫೋನ್‌ನಲ್ಲಿ ನಿಗೂಢ ಭೂತ ಕಾಣಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ನೋಡಿ !

Trending videos

Back to Top