CONNECT WITH US  

ಮಹಿಳೆಯರು ದಿನಕ್ಕೆ 59 ರೀತಿ ಕೆಲ್ಸ ಮಾಡ್ತಾರಂತೆ!

ಅಯ್ಯೋ! ಮನೆಯಲ್ಲೂ ಕೆಲ್ಸ, ಆಫೀಸಲ್ಲೂ ಕೆಲ್ಸ ಕೆಲ್ಸ ಕೆಲ್ಸ. ಮುಗಿಯೋದೇ ಇಲ್ಲಾರೀ.. ಅಂತ ಮಹಿಳೆಯರು ಅಲವತ್ತುಕೊಳ್ಳುವುದನ್ನು ಕೇಳಿರಬಹುದು. ನಿಜ. ಮಹಿಳೆಯರು ಪುರುಷರಿಗಿಂತ ಹೆಚ್ಚು ರೀತಿಯ
ಕೆಲಸ ಮಾಡುತ್ತಾರೆ ಅಂದಿದೆ ಒಂದು ಸಮೀಕ್ಷೆ. ಆದರೆ ಈ ಸಮೀಕ್ಷೆ ಬ್ರಿಟನ್‌ ಮಹಿಳೆಯರನ್ನು ಉದ್ದೇಶಿಸಿ ನಡೆದಿದ್ದು, ಅವರು ದಿನಕ್ಕೆ ಸರಾಸರಿ 59 ರೀತಿಯ ಕೆಲಸಗಳನ್ನು ಮಾಡುತ್ತಾರಂತೆ. ಶೇ.90ರಷ್ಟು ಮಹಿಳೆಯರು ಮಕ್ಕಳ ಪಾಲನೆ ಕೆಲಸಗಳನ್ನು ನಿಭಾಯಿಸುತ್ತಾರಂತೆ. ಮಹಿಳೆಯರು ಬೆಳಗ್ಗೆ ಕಿಟಕಿ ಕರ್ಟನ್‌ಗಳನ್ನು ಸರಿಸುವುದರಿಂದ ಹಿಡಿದು, ಮಧ್ಯಾಹ್ನ, ರಾತ್ರಿ ಅಡುಗೆ ಮಾಡುವಲ್ಲಿವರೆಗೆ ವಿವಿಧ ಕೆಲಸಗಳನ್ನು ಮಾಡುತ್ತಾರಂತೆ.
ಸಮೀಕ್ಷೆಗಾಗಿ 1583 ತಾಯಂದಿರನ್ನು ಸಂದರ್ಶಿಸಲಾಗಿದೆ. ತಾಯಂದಿರ ಪ್ರಕಾರ ಅವರ ದೈನಂದಿನ ಕೆಲಸ ಬೆಳಗ್ಗೆ ಆರೂವರೆಯಿಂದ ಶುರುವಾಗಿ ರಾತ್ರಿ ಹತ್ತೂವರೆವರೆಗೆ ಇರುತ್ತವಂತೆ. ಅದರಲ್ಲೂ ಸಣ್ಣ ಮಕ್ಕಳ ಕೆಲಸಕ್ಕೇ ದಿನದಲ್ಲಿ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಮಕ್ಕಳನ್ನು ಏಳಿಸುವುದರಿಂದ ಹಿಡಿದು, ಅವರು ಹೋಂವರ್ಕ್‌ ಮಾಡಿದ್ದಾರಾ?, ಶಾಲೆಯಲ್ಲಿ ಏನು ಮಾಡಿದ್ದಾರೆ ಎಂದೆಲ್ಲ ನೋಡಬೇಕಾಗುತ್ತದೆ. ಮನೆಯ ನಿರ್ವಹಣೆಯ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರಂತೆ. 

ಫ‌ಲಿತಗಳು...
*ಮಹಿಳೆಯರಿಗೆ ಯಾವಾಗ್ಲೂ ಕೆಲ್ಸ, ಕೆಲ್ಸ ಕೆಲ್ಸ!

*ಶೇ.90 ರಷ್ಟು ಮಹಿಳೆಯರಿಗೆ ಮಕ್ಕಳ ಲಾಲನೆ ಪಾಲನೆಯ ಹೊರೆ ದೊಡ್ಡದು
 
* ಬೆಳಗ್ಗೆ ಆರೂವರೆಯಿಂದ ರಾತ್ರಿ ಹತ್ತೂವರೆವರೆಗೆ ನಿರಂತರ ಕೆಲಸಗಳು

*ಮನೆಯ ನಿರ್ವಹಣೆಯ ಜವಾಬ್ದಾರಿಯೂ ಮಹಿಳೆಗೇ! 

Trending videos

Back to Top