CONNECT WITH US  

ಸಚಿನ್‌ ದಾಖಲೆ ಮುರಿಯಲು ಮತ್ತೆ ಕುಕ್‌ ವಿಫ‌ಲ

ಚೆಸ್ಟರ್‌ ಲೀ ಸ್ಟ್ರೀಟ್‌ (ಇಂಗ್ಲೆಂಡ್‌): ಲಂಕಾ ವಿರುದ್ಧದ ಮೊದಲ ಟೆಸ್ಟನ್ನು ಭರ್ಜರಿಯಾಗಿ ಗೆದ್ದಿರುವ ಇಂಗ್ಲೆಂಡ್‌ ಅದೇ ಉತ್ಸಾಹದಲ್ಲಿ 2ನೇ ಟೆಸ್ಟ್‌ ಆರಂಭಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿರುವ ಅದು 5 ವಿಕೆಟ್‌ ಕಳೆದುಕೊಂಡು 227 ರನ್‌ ಗಳಿಸಿದೆ. ಇಂಗ್ಲೆಂಡ್‌ನ‌ ಅಲೆಕ್ಸ್‌ ಹೇಲ್ಸ್‌ 83 ರನ್‌ಗಳಿಸಿದರೆ, ಜೋ ರೂಟ್‌ 80 ರನ್‌ಗೆ ಔಟಾದರು.

ಇಂಗ್ಲೆಂಡ್‌ 5 ವಿಕೆಟ್‌ಗೆ 239 (ಜೋ ರೂಟ್‌ 80, ಅಲೆಕ್ಸ್‌ ಹೇಲ್ಸ್‌ 83, ನುವಾನ್‌ ಪ್ರದೀಪ್‌ 54ಕ್ಕೆ 2)5 ರನ್‌ಗಳಿಂದ ಸಚಿನ್‌ ವಿಶ್ವದಾಖಲೆ ತಪ್ಪಿಸಿಕೊಂಡ ಕುಕ್‌ ಅತಿ ಕಿರಿಯ ವಯಸ್ಸಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಗಳಿಸಿದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಲು ಕುಕ್‌ ಮತ್ತೆ ವಿಫ‌ಲರಾಗಿದ್ದಾರೆ. 

ಸದ್ಯ ತೆಂಡುಲ್ಕರ್‌ ಈ ದಾಖಲೆಯನ್ನು ತಮ್ಮ ಹೆಸರಲ್ಲಿ ಹೊಂದಿದ್ದಾರೆ. 32ನೇ ವರ್ಷದಲ್ಲಿ ತೆಂಡುಲ್ಕರ್‌ ದಾಖಲೆ ನಿರ್ಮಿಸಿದ್ದರೆ, ಕುಕ್‌ 31ನೇ ವರ್ಷದಲ್ಲೇ ಇದನ್ನು ಸಾಧಿಸುವ ಅವಕಾಶ ಪಡೆದಿದ್ದಾರೆ. ಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ 20 ರನ್‌ ಗಳಿಸಿದ್ದರೆ ಕುಕ್‌ ಈ ದಾಖಲೆಗೆ ಪಾತ್ರರಾಗುತ್ತಿದ್ದರು. ಆದರೆ ಅವರು 15 ರನ್‌ಗೆ ಔಟಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲೂ ಬೇಗ ಔಟಾಗುವ ಮೂಲಕ ಕುಕ್‌ ದಾಖಲೆ ನಿರ್ಮಿಸಲು ವಿಫ‌ಲರಾಗಿದ್ದರು.


Trending videos

Back to Top