CONNECT WITH US  

ಕಿದ್ವಾಯಿ ಆಸ್ಪತ್ರೆ ಇನ್ನು 'ರಾಜ್ಯ ಕ್ಯಾನ್ಸರ್‌ ಸಂಸ್ಥೆ'

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆಯಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಈ ತಿಂಗಳ 23ರಿಂದ ರಾಜ್ಯ ಕ್ಯಾನ್ಸರ್‌ ಸಂಸ್ಥೆ' ಎಂಬ ಮಾನ್ಯತೆ ಅಧಿಕೃತವಾಗಿ ಸಿಗಲಿದೆ. ಇದರೊಂದಿಗೆ ಸಂಸ್ಥೆಯಲ್ಲಿ ಸುಮಾರು 120 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳಿಗೂ ಚಾಲನೆ ಸಿಗಲಿದೆ.

23ರ ಬುಧವಾರ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನ್ನು ರಾಜ್ಯ ಕ್ಯಾನ್ಸರ್‌ ಸಂಸ್ಥೆ ಎಂದು ಘೋಷಣೆ ಮಾಡಲಿದ್ದಾರೆ. ಇದರ ಜತೆಗೆ ರಾಜ್ಯ ಮಟ್ಟದ ಕ್ಯಾನ್ಸರ್‌ ಸಂಸ್ಥೆ ಎಂಬ ಹೆಸರಿನಲ್ಲಿ ಐದು ಅಂತಸ್ತಿನ ಸುಸಜ್ಜಿತ ಚಿಕಿತ್ಸಾ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಟ್ಟಡದಲ್ಲಿ ಹೈ ಎಂಡ್‌ ರೇಡಿಯೋ ಥೆರಪಿ' ಯಂತ್ರಗಳು ಮತ್ತು ರೋಬೋಟಿಕ್‌ ಯಂತ್ರ'ಗಳನ್ನು ಅಳವಡಿಸುವುದರ ಜತೆಗೆ ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ಘಟಕಗಳು ತಲೆ ಎತ್ತಲಿವೆ.

ದೇಶದಲ್ಲಿ 29 ಪ್ರಾದೇಶಿಕ ಕ್ಯಾನ್ಸರ್‌ ಸಂಸ್ಥೆಗಳಿದ್ದು, ಈ ಪೈಕಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯೂ ಒಂದಾಗಿದೆ. ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಕಾರಣ ಕೇಂದ್ರ ಸರಕಾರವು ರಾಜ್ಯ ಕ್ಯಾನ್ಸರ್‌ ಸಂಸ್ಥೆ' ಎಂಬ ಮಾನ್ಯತೆ ನೀಡಿ ಉನ್ನತೀಕರಣಕ್ಕಾಗಿ 120 ಕೋಟಿ ರೂ. ವೆಚ್ಚದ ಯೋಜನೆ ಘೋಷಿಸಿತ್ತು.

Trending videos

Back to Top