CONNECT WITH US  

ಸರ್ಕಾರಿ ಶಾಲೆಗಳ 30 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ 

ಬೆಂಗಳೂರು: ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 30 ಶಿಕ್ಷಕರಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' ಪ್ರಕಟಿಸಿದೆ.

20 ಪ್ರಾಥಮಿಕ ಮತ್ತು 10 ಪ್ರೌಢ ಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇವರಿಗೆ ಸೆ.5ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರು: ಶಿವಮೊಗ್ಗ ಜಿಲ್ಲೆ ಹಳ್ಳಿàಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್‌. ಕೂಬಾ ನಾಯಕ್‌, ಬೆಂಗಳೂರಿನ ಅರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್‌.ಅನಂತಲಕ್ಷ್ಮಿ, ದೇವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎನ್‌.ಶಿವಕುಮಾರ್‌, ತಿಂಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್‌.ಎ.ಲಕ್ಷ್ಮೀಕುಮಾರ್‌, ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಗೋಪಾಲಕೃಷ್ಣ. ಉಡುಪಿ ಜಿಲ್ಲೆ ಕೂಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೃಷ್ಣ ಮೊಯ್ಲಿ, ದಕ್ಷಿಣ ಕನ್ನಡ ಜಿಲ್ಲೆ ಮೊಳಂತಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಚ್‌.ಸಂಜೀವ್‌, ಕೊಡಗು ಜಿಲ್ಲೆ ಚಿನ್ನನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಬಿ.ಬಿ.ಜಾಜಿ, ಚಿಕ್ಕಮಗಳೂರು ಜಿಲ್ಲೆ ಕಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎನ್‌.ಪಿ.ಸುಕೇಶ, ಚಾಮರಾಜನಗರ ಜಿಲ್ಲೆ ಹನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಭಾಗ್ಯರೇಖ. ಉತ್ತರ ಕನ್ನಡ ಜಿಲ್ಲೆ ಮಂಕಿಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಥೊಮಸ್‌ ತೊಮ್ಮೆ ಹೊರ್ಟಾ, ಬಾಗಲಕೋಟೆ ಜಿಲ್ಲೆ ಹೊಸೂರಿನ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮುತ್ತಯ್ಯ ಅಂದಯ್ಯ ಘಂಟಿ, ಚಿಕ್ಕೋಡಿಯ ಮೂಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯ ಬಿ.ಎಸ್‌.ನಂದೆಪ್ಪನವರ, ಗದಗ ಜಿಲ್ಲೆ ಸೂಡಿ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆ ಶಿಕ್ಷಕ ಅಶೋಕ ರಂಗಪ್ಪ ಉಂಡಿ, ಧಾರವಾಡ ಜಿಲ್ಲೆ ಮದಾರಮಡ್ಡಿಯ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಪದವೀಧರೇತರ ಮುಖ್ಯೋಪಾಧ್ಯಾಯ ವಿಜಯ ರುದ್ರಪ್ಪ ಮೆಳವಂಕಿ. ಯಾದಗಿರಿ ಜಿಲ್ಲೆ ಸ್ಟೇಷನ್‌ ಬಜಾರ್‌ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕ ಮಲ್ಲಿಕಾರ್ಜುನ ಬಳೆ, ಬಳ್ಳಾರಿ ಜಿಲ್ಲೆ ಗೊರವಿನ ಗುಡ್ಡ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಹನುಮಂತಪ್ಪ ದ್ಯಾಮಪ್ಪ ಜಗೀನ, ಬೀದರ್‌ ಜಿಲ್ಲೆ ಚಂಗಲೇರಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಲವಂತ ರೆಡ್ಡಿ, ರಾಯಚೂರು ಜಿಲ್ಲೆ ಚಿಕ್ಕಕೋಟೆ°ಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಾಧುರಿ ಮುವ್ವಾ, ಕುಲಬುರಗಿ ಜಿಲ್ಲೆ ಮದರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹ್ಮದ ನೂರುದ್ದೀನ್‌.

ಪ್ರೌಢಶಾಲಾ ಶಿಕ್ಷಕರು:
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಶ್ರೀರಾಮಕೃಷ್ಣ ಪ್ರೌಢಶಾಲೆ ಶಿಕ್ಷಕಿ ಕೆ.ವಸಂತಿ, ಕಲಬುರಗಿ ಜಿಲ್ಲೆ ಚಿಂಚನಸೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆರ್‌.ಟಿ.ಜಗದೀಶ್ವರಯ್ಯ, ಉಡುಪಿ ಜಿಲ್ಲೆ ಎರ್ಮಾಳು ಬಡಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಸಂಪತ್‌ ಕುಮಾರ್‌ ಪಾಂಗಾಳ, ಕೊಪ್ಪಳ ಜಿಲ್ಲೆ ಕೊರಡಕೇರಾ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ರಾಮೇಶ್ವರ ಡಾಣಿ, ತುಮಕೂರು ಜಿಲ್ಲೆ ವಿನೋಬ ನಗರ ಸಿದ್ಧಾರ್ಥ ನಿವಾಸ ಪ್ರೌಢಶಾಲೆ ಶಿಕ್ಷಕ ಎಂ.ವಿ.ನಂಜಪ್ಪ, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಶಿಕ್ಷಕ ಚನ್ನಬಸಪ್ಪ ಮಲ್ಲಪ್ಪ ಕುರುಬರ, ಬೀದರ್‌ ಜಿಲ್ಲೆ ವಲಖೀಂಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಜು ಸಿಂಗ್‌ ಎಚ್‌.ರಾಜಪೂತ, ಉತ್ತರ ಕನ್ನಡ ಜಿಲ್ಲೆ ವಂದಾನೆ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶಿವಾನಂದ ಬೊಮ್ಮಯ್ಯ ನಾಯ್ಕ, ದಾವಣಗೆರೆ ಜಿಲ್ಲೆ ನಿಟ್ಟೂರು ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಪಿ.ನಾಗರಾಜ, ಬೆಂ.ಗ್ರಾಮಾಂತರ ಜಿಲ್ಲೆ ದೊಡ್ಡಗಟ್ಟಿಗನಬ್ಬೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಂ.ಲಲಿತಮ್ಮ ಅವರುಗಳು ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Trending videos

Back to Top