CONNECT WITH US  

ನಾನು ಏಕಾಂಗಿಯಲ್ಲ:ಡಿಕೆಶಿ

ಬೆಂಗಳೂರು:ನಾನು ಪಕ್ಷದಲ್ಲಿ ಯಾವತ್ತೂ ಏಕಾಂಗಿಯಲ್ಲ. ಅದು ನನ್ನ ಜಾಯಮಾನವಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕೊ ಎನ್ನುವುದನ್ನು ಪಕ್ಷ ತೀರ್ಮಾನ ಮಾಡಲಿದೆ. ಹೈಕಮಾಂಡ್‌ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಅದಕ್ಕೆ ನಾನು ಕಾಣುತ್ತಿಲ್ಲ ಎನ್ನುವುದು ಸರಿಯಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್‌.ಆರ್‌. ಪಾಟೀಲ್‌ ಯಾಕೆ ರಾಜಿನಾಮೆ ನೀಡಿದರು ಎನ್ನುವುದು ಗೊತ್ತಿಲ್ಲ. ಅವರು ಪ್ರಮುಖ ನಾಯಕರು. ದಕ್ಷಿಣ ಕರ್ನಾಟಕ ಭಾಗದಲ್ಲಿ ಒಕ್ಕಲಿಗರು ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಸಮುದಾಯ ಇದೆ. ಚುನಾವಣೆಯಲ್ಲಿ ನಮಗೆ ಮತ ಹಾಕಿದ ಜನ ರಾಜ್ಯದಲ್ಲಿದ್ದಾರೆ. ಎಲ್ಲರ ಬಗ್ಗೆ ಹೈ ಕಮಾಂಡ್‌ ಯೋಚನೆ ಮಾಡಲಿದೆ ಎಂದರು.

ಸಂಪುಟ ವಿಸ್ತರಣೆ ವೇಳೆ ವೀರಶೈವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಮೇಲ್ವರ್ಗದವರ ನಿರ್ಲಕ್ಷದಿಂದ ನಮಗೆ ಹಿನ್ನೆಡೆಯಾಗಿದೆ ಎಂಬ ಭಾವನೆ ಇದೆ. ಅದು  ಪರೋಕ್ಷವಾಗಿ ಎಚ್ಚರಿಕೆಯೂ ಹೌದು ಎಂದು ಹೇಳಿದರು. ಇನ್ನು ಇಂಧನ ಇಲಾಖೆಯ ಬಗ್ಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

Trending videos

Back to Top