CONNECT WITH US  

ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಮನವಿ 

ರಾಮನಗರ: ನಗರಸಭೆ ಅಧ್ಯಕ್ಷ ಪಿ.ರವಿಕುಮಾರ್‌ ನಗರದ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲವಾದ್ದರಿಂದ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಅವಕಾಶ ನೀಡುವಂತೆ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗಳ ಕಚೇರಿಗೆ  ಮನವಿ ಸಲ್ಲಿಸಿದರು.  

ಈ ಮಾತನಾಡಿದ ಸದಸ್ಯ ಎ.ಬಿ.ಚೇತನ್‌ಕುಮಾರ್‌, ನಗರಸಭೆ ಅಧ್ಯಕ್ಷ ರವಿಕುಮಾರ್‌ ಆಡಳಿತದ ಅವಧಿಯಲ್ಲಿ ಸದಸ್ಯರ ಅಭಿಪ್ರಾಯ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದಿರುವುದರಿಂದ ಅಸಮಾಧಾನವಾಗಿದೆ.

ಅಲ್ಲದೆ ನಗರದ ಅಭಿವೃದ್ಧಿ ವಿಷಯವಾಗಿ ಸದಸ್ಯರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ ಅವರ ಮೇಲೆ ಸದಸ್ಯರಿಗೆ ವಿಶ್ವಾಸ ಇಲ್ಲ. ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಸದಸ್ಯರೆಲ್ಲ ಒಮ್ಮತದ ಅಭಿಪ್ರಾಯ ಕೈಗೊಂಡಿರುವುದಾಗಿ ತಿಳಿಸಿದರು.

ಒಮ್ಮತದ ತೀರ್ಮಾನ: ಈ ವಿಷಯವಾಗಿ ಸದಸ್ಯರು ಸಭೆ ನಡೆಸಿ ಅಧ್ಯಕ್ಷರ ನಡೆಯ ಬಗ್ಗೆ ಸುದೀರ್ಘ‌ವಾಗಿ ಚರ್ಚೆ ನಡೆಸಿದ್ದು, ಅಂತಿಮವಾಗಿ ಸ್ಪಂದಿಸುವ ಸದಸ್ಯರನ್ನು ಅಧ್ಯಕರನ್ನಾಗಿ ಆಯ್ಕೆ ಮಾಡಿಕೊಳ್ಳುವ ಸಂಬಂಧ ಹಾಲಿ ಅಧ್ಯಕ್ಷ ರವಿಕುಮಾರ್‌ ಅವರನ್ನು ಪದಚ್ಯುತಿಗೊಳಿಸಲು ಒಮ್ಮತದ ತೀರ್ಮಾನ ಮಾಡಲಾಗಿದೆ. ಇದು ಸದಸ್ಯರ ಒಮ್ಮತದ ತೀರ್ಮಾನವೇ ಹೊರತು ಪಕ್ಷದ ತೀರ್ಮಾನವಲ್ಲ ಎಂದು ಚೇತನ್‌ಕುಮಾರ್‌ ಉತ್ತರಿಸಿದರು.

ಅವಿಶ್ವಾಸಕ್ಕೆ  15 ಕಾಂಗ್ರೆಸ್‌ ಮತ್ತು ಇಬ್ಬರು ಪಕ್ಷೇತರ ಸೇರಿ ಒಟ್ಟು 17 ಸದಸ್ಯರು ಸಹಿ ಮಾಡಿದ್ದು, ಅವಿಶ್ವಾಸ ನಿಲುವಳಿಗೆ ಮನವಿ ಮಾಡಿರುವ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ್‌ ಜಗದೀಶ್‌ ಅವರಿಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.

ಉಪಾಧ್ಯಕ್ಷೆ ಮಂಗಳಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಚೇತನ್‌, ಎಚ್‌.ಎಸ್‌.ಲೋತ್‌ (ಬಾಬು), ಡಿ.ಕೆ.ಶಿವಕುಮಾರ್‌, ಮುತ್ತುರಾಜು, ನಾಗೇಶ್‌, ಅಬ್ದುಲ್‌ಬಾದ್‌, ರತ್ನಮ್ಮ, ಎಕ್ಬಾಲ್‌ಷರೀಫ್, ತಲ್ಲಪಾಷ, ತಾಸೀನ್‌ತಾಜ್‌, ಆರೀಫ್ಖುರೇಶಿ, ಮೊಹಮದ್‌ರಫೀಕ್‌, ಸಾವಿತ್ರಮ್ಮ, ಪೈರೋಜ್‌ಪಾಷ ಇದ್ದರು.

Trending videos

Back to Top