CONNECT WITH US  

ಬಡಾವಣೆ ಸಮಸ್ಯೆ ಪರಿಹರಿಸಲು ಒತ್ತಾಯ

ಬೆಂಗಳೂರು: ಬಿಡಿಎ ನಿರ್ಲಕ್ಷ್ಯದಿಂದಾಗಿ ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ ಮೊದಲನೇ ಬ್ಲಾಕ್‌ ನಾಗರಿಕರು ಉಸಿರುಗಟ್ಟುವ ವಾತಾವರಣದಲ್ಲಿ ವಾಸಿಸುತ್ತಿದ್ದು, ಅಲ್ಲಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಸರ್‌ ಎಂ.ವಿಶ್ವೇಶ್ವರಯ್ಯನಗರ ನಾಗರಿಕರ ಒಕ್ಕೂಟ ಒತ್ತಾಯಿಸಿದೆ.

ಸರ್‌ ಎಂ.ವಿಶ್ವೇಶ್ವರಯ್ಯ ನಗರವು ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಗೆ ಹೊಂದಿಕೊಂಡಿದ್ದು, 1800 ಎಕರೆ ಪ್ರದೇಶದಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಯಲ್ಲಿ 9 ಬ್ಲಾಕ್‌ಗಳಿದ್ದು, ಸುಮಾರು 2500 ಕುಟುಂಬಗಳು ನೆಲೆಸಿವೆ.

ಇದರಲ್ಲಿ ಮೊದಲನೇ ಬ್ಲಾಕ್‌ನಲ್ಲಿ ಸುಮಾರು 250 ಕುಟುಂಬಗಳಿದ್ದು, ಇಲ್ಲಿನ ನಾಗರಿಕರು ಉಸಿರುಗಟ್ಟುವಂತಹ ಪರಿಸರದಲ್ಲಿ ಬದುಕುವಂತಾಗಿದೆ. ಸರ್ಕಾರ ಕೂಡಲೇ ಇಲ್ಲಿನ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಫೋರಂ ಅಧ್ಯಕ್ಷ ಎನ್‌.ನಂಜೇಗೌಡ ಸೊಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಬಡಾವಣೆ ಅಭಿವೃದ್ಧಿಗೆ ಸರ್ಕಾರ 530 ಕೋಟಿ ರೂ. ನೀಡಿದ್ದರೂ ಮೊದಲನೇ ಬ್ಲಾಕ್‌ನಲ್ಲಿ ಶೇ.80ರಷ್ಟು ಕೆಲಸ ನಡೆದಿಲ್ಲ. ಹಣ ದುರುಪಯೋಗ, ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಕುರಿತಂತೆ ಸರ್ಕಾರ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.


Trending videos

Back to Top