ವಿದೇಶದಲ್ಲಿ ಶಿಕ್ಷಣ , ಮಾಹಿತಿ ಪಡೆದು ಮುನ್ನಡೆಯಿರಿ 

Team Udayavani, Sep 26, 2018, 3:03 PM IST

26-sepctember-12.gif

ಅಮೆರಿಕ, ಫ್ರಾನ್ಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯಾ… ಹೀಗೆ ವಿದೇ ಶ ದಲ್ಲಿ ಹೋಗಿ ಶಿಕ್ಷಣ ಪಡೆಯಬೇಕು ಎಂಬ ಕನಸು ಹಲವರಿಗೆ ಇದ್ದರೂ ಅದನ್ನು ನನಸಾಗಿಸುವುದು ತುಸು ಕಷ್ಟ. ದೂರದ ಊರಿಗೆ ಹೋಗಿ ಕಷ್ಟಪಡುವುದಕ್ಕಿಂತ ಮೊದಲೇ ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಶಿಕ್ಷಣಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಪಡೆದು ಕೊಳ್ಳುವುದು ಬಹುಮುಖ್ಯ. ಜತೆಗೆ ಸರಕಾರ, ಶಿಕ್ಷಣ ಸಂಸ್ಥೆಗಳು ನೀಡುವ ಸೌಲಭ್ಯಗಳ ಬಗ್ಗೆಯೂ ತಿಳಿದುಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯುವುದು ಬಹುಶಃ ಪ್ರತಿಯೊಬ್ಬರ ಕನಸು. ಆದರೆ ಈ ಕನಸು ಈಡೇರಿಸಿಕೊಳ್ಳಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಎಷ್ಟೇ ಶ್ರೀಮಂತರಾದರೂ ವಿದೇಶಿ ಶಿಕ್ಷಣ ಎಂಬುದು ಕೈಗೆಟುಕದ ದ್ರಾಕ್ಷಿಯೇ ಸರಿ. ಕಾರಣ ಶಿಕ್ಷಣ ಪಡೆಯುವಲ್ಲಿ ಅಡ್ಡಿಯಾಗುವ ಕೆಲವೊಂದು ನೀತಿ ನಿಯಮಗಳು, ಅರ್ಹತೆ ಇಲ್ಲದಿರುವಿಕೆ ಇತ್ಯಾದಿ.

ಮುಖ್ಯವಾಗಿ ನಿರ್ದಿಷ್ಟವಾದ ಕೋರ್ಸ್‌ ಅಥವಾ ಕ್ಷೇತ್ರ ಪರಿಣತಿ ಸಾಧಿಸುವಿಕೆ, ಕೇಂಬ್ರಿಡ್ಜ್, ಹಾರ್ವರ್ಡ್ನಂತಹ ಇಡೀ ವಿಶ್ವದಲ್ಲೇ ಖ್ಯಾತಿಗಳಿಸಿರುವ ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಸಿಸುವ ಬಯಕೆ, ವೃತ್ತಿ ಜೀವನವನ್ನು ವಿದೇಶಗಳಲ್ಲಿ ನಿರ್ವಹಿಸುವ ಆಸೆ ಮುಂತಾದ ಕಾರಣಗಳಿಗಾಗಿ ವಿದೇಶಿ ಶಿಕ್ಷಣವನ್ನು ಹಲವರು ಇಷ್ಟಪಡುತ್ತಾರೆ. ಆದರೆ ಅದೆಷ್ಟೇ ಆಸೆ- ಆಕಾಂಕ್ಷೆ ಇದ್ದರೂ, ವಿದೇಶದಲ್ಲಿ ತೆರಳಿ ಶಿಕ್ಷಣ ಗಳಿಸುವುದು ಸುಲಭ ಸಾಧ್ಯವಲ್ಲ. ಕನಿಷ್ಠ ಎಂದರೂ 15ರಿಂದ 20 ಲಕ್ಷ ರೂ. ಗಳಂತೂ ಬೇಕೇ ಬೇಕು.

ಯಾವ ದೇಶದಲ್ಲಿ ಓದಿದ್ದೀರಿ ಎನ್ನುವುದಕ್ಕಿಂತ ಯಾವ ವಿವಿಯಲ್ಲಿ ಓದಿದ್ದೀರಿ ಎಂಬುದೇ ವೃತ್ತಿ ಜೀವನಕ್ಕೆ ತೆರಳುವಾಗ ಮುಖ್ಯವಾಗುತ್ತದೆ. ಆದ್ದರಿಂದ ಖ್ಯಾತಿಗಳಿಸಿದ ದೇಶದಲ್ಲಿ ಓದುವ ಕನಸಿದ್ದರೆ ಅದನ್ನು ಕೈ ಬಿಟ್ಟು, ಖ್ಯಾತಿಗಳಿಸಿದ ವಿಶ್ವ ವಿದ್ಯಾನಿಲಯವನ್ನೇ ಆಯ್ಕೆ ಮಾಡಿಕೊಂಡರೆ ಒಳಿತು. ಕೆಲವೊಮ್ಮೆ ವಿದ್ಯಾಭ್ಯಾಸದ ಹೆಸರಿನಲ್ಲಿ ದುರ್ಲಾಭ ಮಾಡಿಕೊಳ್ಳುವವರೂ ಇರುವುದರಿಂದ ದೇಶದ ಹೆಸರು ದೊಡ್ಡದಿದೆ ಎಂದು ಶಿಕ್ಷಣ ಸಂಸ್ಥೆಯ ಆಯ್ಕೆಯಲ್ಲಿ ಎಡವಬಾರದು.

ಪ್ರವೇಶ ಹೇಗೆ?
ಹಣ ಇದೆ ಎಂದ ಮಾತ್ರಕ್ಕೋ, ಹೆಚ್ಚು ಅಂಕ ಇದೆ ಎಂಬ ಕಾರ ಣ ಕ್ಕೋ ವಿದೇಶದಲ್ಲಿ ಸುಲಭವಾಗಿ ಶಿಕ್ಷಣಕ್ಕೆ ಆಯ್ಕೆಯಾಗಬಹುದು ಎಂದಂದುಕೊಂಡರೆ ತಪ್ಪು. ಯಾವುದೇ ಶಿಕ್ಷಣ ಸಂಸ್ಥೆಯ ಪ್ರವೇಶಕ್ಕೆ ಮುನ್ನ ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುತ್ತದೆ. ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡುವಿರಾದರೆ ಜಿಮಾಟ್‌, ಕಾನೂನು ಪದವಿ ಪಡೆಯಲು ಎಲ್‌ಸಾಟ್‌, ವೈದ್ಯಕೀಯ ಶಿಕ್ಷಣಕ್ಕೆ ಎಂಸಾಟ್‌, ಎಂಜಿನಿಯರಿಂಗ್‌ ಗೆ ಜಿಆರ್‌ಇ ಮುಂತಾದ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವೊಂದು ದೇಶದಲ್ಲಿನ ಕಾನೂನಿಗೆ ಅನುಗುಣವಾಗಿ ಈ ಪ್ರವೇಶ ಪರೀಕ್ಷೆಗಳು ಬದಲಾಗುವುದರಿಂದ ಸೂಕ್ತ ಮಾಹಿತಿ ಪಡೆದೇ ಮುಂದಿನ ಹೆಜ್ಜೆ ಇಡಬೇಕು. ಪ್ರವೇಶಕ್ಕೆ ಮುನ್ನ ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿ ಪರಿಚಯ, ಅಂಕಪಟ್ಟಿ, ಶಿಫಾರಸ್ಸು ಪತ್ರ ಮುಂತಾದವುಗಳನ್ನು ಜತೆಗಿಡಬೇಕಾಗುತ್ತದೆ. ಗಳಿಸಿದ ಅಂಕ, ಇಂಗ್ಲಿಷ್‌ನಲ್ಲಿ ಗಳಿಸಿದ ಗ್ರೇಡ್‌ ಮುಂತಾದವು ಈ ಸಂದರ್ಭದ ಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲವೂ ಓಕೆ ಆದರೆ ಮುಂದೆ ಸಂದರ್ಶನವನ್ನೂ ಎದುರಿಸಬೇಕಾಗುತ್ತದೆ.

ಇವೆಲ್ಲಇರಲಿ
ವಿದೇಶಿ ಶಿಕ್ಷಣ ಎಲ್ಲರಿಗೂ ಕೈಗೆಟಕುವಂತದ್ದಲ್ಲ. ಏಕೆಂದರೆ ಆರ್ಥಿಕತೆ, ಕೌಶಲ ಎಲ್ಲವೂ ಇದ್ದರೂ, ವೀಸಾ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗದು. ಹೀಗಾಗಿ ವೀಸಾ ಸಂದರ್ಶನಕ್ಕೂ ಮೊದಲೇ ತಯಾರಾಗಿ ಹೋಗಬೇಕು. ಅಂತಾರಾಷ್ಟ್ರೀಯ ಕ್ರೆಡಿಟ್‌ ಕಾರ್ಡ್‌, ಟ್ರಾವೆಲ್‌ ಚೆಕ್‌ ರೂಪದಲ್ಲಿ ಹಣ ಅವಶ್ಯವಾಗಿ ಬೇಕಾಗುತ್ತದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ಕಾರ್ಡ್‌ ಹೊಂದಿದ್ದರೆ ಅನೇಕ ಡಿಸ್ಕೌಂಟ್‌, ಸೌಲಭ್ಯಗಳು ಸಿಗುತ್ತವೆ. ಪಾಸ್‌ಪೋರ್ಟ್‌, ವೀಸಾ, ಪ್ರವೇಶ ಪತ್ರ, ಇತರ ದಾಖಲೆಗಳನ್ನು ಮೂಲ ಪ್ರತಿಯೊಂದಿಗೆ, ಸ್ಕ್ಯಾನ್‌ ಮಾಡಿದ ಕಾಪಿಯನ್ನು ಲ್ಯಾಪ್‌ಟಾಪ್‌ನಲ್ಲಿ ಸೇವ್‌ ಮಾಡುವುದೂ ಉತ್ತಮ.

ಸಾಲ ಸೌಲಭ್ಯವೂ ಇದೆ
ವಿದೇಶದಲ್ಲಿ ವ್ಯಾಸಂಗ ಮಾಡಲು ರಾಜ್ಯ ಸರಕಾರವು ಹಿಂದುಳಿದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಇಲಾಖೆ ಮೂಲಕ 10 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುತ್ತಿದೆ. ಆದರೆ ಇದಕ್ಕೆ ಆಯ್ಕೆ ಪ್ರಕ್ರಿಯೆಗಳಿದ್ದು, ಪಾಸಾದರೆ ಮಾತ್ರ ವಿದ್ಯಾರ್ಥಿ ವೇತನ ಗಳಿಸಬಹುದು. ಅಲ್ಲದೆ ಭಾರತದ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯ ಬ್ಯಾಂಕ್‌ಗಳು ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗಕ್ಕೆಂದೇ ಶಿಕ್ಷಣ ಸಾಲ ನೀಡುತ್ತವೆ. ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿವೆ.

ಮುಖ್ಯವಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಭಾರತೀಯನಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು, 30 ವರ್ಷದೊಳಗಿರಬೇಕು. ಯಾವುದೇ ಮಾನ್ಯತೆ ಪಡೆದ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ, ಸಿಇಎಂಎ- ಲಂಡನ್‌, ಅಮೆರಿಕಾದಲ್ಲಿ ಸಿಪಿಎ ಇತ್ಯಾದಿಗಳ ಮೂಲಕ ನಡೆಸಲಾಗುವ ಕೋರ್ಸ್‌ಗಳಿಗೆ ಸಾಲ ಸೌಲಭ್ಯ ದೊರಕುತ್ತದೆ. ಗರಿಷ್ಠ 20 ಲಕ್ಷ ರೂ. ವರೆಗೆ ಸಾಲ ದೊರೆಯುತ್ತದೆ. ವಿದ್ಯಾರ್ಥಿಗಳು ಸಾಲ ಪಡೆಯುವ ಬಗ್ಗೆ ಬ್ಯಾಂಕಿಗೆ ಬಂದು ಸಾಲ- ಸೌಲಭ್ಯಗಳ ಬಗ್ಗೆ ವಿಚಾರಿಸಿ, ಮುಂದುವರಿಯಬಹುದು ಎನ್ನುತ್ತಾರೆ ಬ್ಯಾಂಕ್‌ ಉದ್ಯೋಗಿ ರಮೇಶ್‌ ನಾಯ್ಕ.

ಮಾಹಿತಿ ಪಡೆದುಕೊಳ್ಳಿ 
ಅರ್ಜಿ ಸಲ್ಲಿಸುವ ಮುನ್ನ ಮತ್ತು ಆಯ್ಕೆಯಾದ ಅನಂತರವೂ ನೀವು ಸೇರಲಿಚ್ಚಿಸಿದ ವಿಶ್ವ ವಿದ್ಯಾನಿಲಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆ ಊರು, ಸ್ಥಳ ಪರಿಚಯ, ಜನವಾಸ, ವಿದ್ಯಾರ್ಥಿಗಳು, ಶಿಕ್ಷಕರು ಸಹಿತ ಸಮಗ್ರ ಮಾಹಿತಿ ಕಲೆಹಾಕಿ ಅನಂತರವಷ್ಟೇ ಹೋಗುವುದು ಉತ್ತಮ. ಜತೆಗೆ ಹಾಸ್ಟೆಲ್‌, ವಸತಿ ಸೌಕರ್ಯದ ಬಗ್ಗೆಯೂ ವಿಚಾರಿಸುವು ದೊಳಿತು. ಏಕೆಂದರೆ ನಮ್ಮ ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿ ವರ್ಷಗಳ ಕಾಲ ಬದುಕು ಸಾಗಿಸುವುದೆಂದರೆ ಸುಲಭವಲ್ಲ. ಪ್ರಾಮುಖ್ಯವಾಗಿ ಅಲ್ಲಿನ ವಾತಾವರಣ ಮತ್ತು ಜನಜೀವನ ವಿಭಿನ್ನವಾಗಿದ್ದು, ಹೊಂದಿಕೊಳ್ಳುವುದೂ ಕೆಲವೊಮ್ಮೆ.  

 ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.