CONNECT WITH US  

ಇದೇ ತಿಂಗಳಿನಲ್ಲಿ 'ಪ್ರವೇಶ' ಆರಂಭ!

ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ತುಳು ಸಿನೆಮಾ ನಿರ್ದೇಶಕ ಚೇತನ್‌ ಮುಂಡಾಡಿ ಮತ್ತೊಮ್ಮೆ ಕೋಸ್ಟಲ್‌ವುಡ್‌ನ‌ಲ್ಲಿ ಕರಾಮತ್ತು ತೋರಿಸಲು ಹೊರಟಿರುವ ಸಂಗತಿ ನಿಮಗೆಲ್ಲ ಗೊತ್ತೇ ಇದೆ. ಅಂದಹಾಗೆ 'ಪ್ರವೇಶ' ಎಂಬ ಟೈಟಲ್‌ ಅನ್ನು ಹೊಸ ಸಿನೆಮಾಕ್ಕೆ ಇಟ್ಟಿದ್ದಾರೆ. 

ಆ. 24ರಂದು ಬೆಳಗ್ಗೆ 11ಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಬಿ.ಎಸ್‌. ಸುಧೀಂದ್ರ ನಿರ್ಮಾಣದಲ್ಲಿ ಚಿತ್ರ ಸೆಟ್ಟೇರಲಿದೆ. ಕುಂದಾಪುರದಲ್ಲಿ ನಡೆದ ಗೋಹತ್ಯೆ ಗಲಭೆ ಕುರಿತ ನೈಜ ಘಟನೆ ಚಿತ್ರದ ವಸ್ತುವಾಗಿರಲಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಚೇತನ್‌ ಮುಂಡಾಡಿ ಅವರದ್ದು. ವಿನು ಬಳಂಜ, ಜೋಗಿ ಕಥೆ ವಿಸ್ತರಿಸಿದ್ದಾರೆ. ಈ ಚಿತ್ರಕ್ಕೂ 'ಮದಿಪು' ಚಿತ್ರದ ತಂತ್ರಜ್ಞರ ಬಹುತೇಕ ತಂಡವೇ ಮುಂದುವರಿಯಲಿದೆ. ವಿ. ಮನೋಹರ್‌ ಸಂಗೀತ, ಛಾಯಾಗ್ರಾಹಣ- ಗಣೇಶ್‌ ಹೆಗಡೆ, ಉಗ್ರಂ ಶ್ರೀಕಾಂತ್‌ ಎಡಿಟಿಂಗ್‌. 

ಇಂದು ಹೆಚ್ಚು ಓದಿದ್ದು

Trending videos

Back to Top