ಸರ್ವ ವ್ಯವಸ್ಥೆ ಸಮ್ಮಿಲಿತ ರಸ್ತೆ ಕಾಮಗಾರಿ ಸ್ಮಾರ್ಟ್ ಸಿಟಿಗೆ  ಅಗತ್ಯ


Team Udayavani, Sep 16, 2018, 12:32 PM IST

16-sepctember-11.jpg

ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಾಣಗೊಂಡ ರಸ್ತೆಯನ್ನು ಕೆಲವೇ ದಿನಗಳಲ್ಲಿ ಅಗೆಯುತ್ತಾರೆ, ಮತ್ತೆ ತೇಪೆ ಹಾಕುತ್ತಾರೆ. ಇಂಥ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿರುವುದರಿಂದ ಸುಂದರವಾದ ರಸ್ತೆಗಳೂ ತೇಪೆಯಿಂದ ತುಂಬಿ ಹೋಗುತ್ತಿದೆ. ಇದರ ಬದಲು ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲೇ ಭವಿಷ್ಯದ ಕುರಿತು ಯೋಚನೆ ಮಾಡಿ ದುರಸ್ತಿ ಮಾಡಬೇಕಾಗಿರುವ ಸ್ಥಳಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿದರೆ ರಸ್ತೆಯೂ ಹಾಳಾಗುವುದಿಲ್ಲ, ಕಾಮಗಾರಿಗೆ ಖರ್ಚು ಮಾಡಿದ ಹಣವೂ ವ್ಯರ್ಥವಾಗುವುದಿಲ್ಲ.

ಮಂಗಳೂರು ನಗರದಲ್ಲಿ ಕಾಂಕ್ರೀಟೀಕರಣ ಮಾಡುವಾಗ ಒಳಚರಂಡಿ, ಫುಟ್‌ಪಾತ್‌, ಯುಟಿಲಿಟಿ ಕಾಮಗಾರಿಗಳನ್ನು ಕಡೆಗಣಿಸಿರುವುದು ಸಮಸ್ಯೆಯಾಗಿ ಕಾಡತೊಡಗಿದೆ. ಕಾಂಕ್ರೀಟೀಕರಣಗೊಂಡಿರುವ ರಸ್ತೆಗಳನ್ನು ಅಲ್ಲಲ್ಲಿ ತುಂಡರಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ನೀರು ಸರಬರಾಜು ಕೊಳವೆಗಳು, ಟೆಲಿಪೋನ್‌ ಕಂಪೆನಿಗಳ ಕಂಬಗಳು, ತಂತಿಗಳು, ಒಳಚರಂಡಿ ಮುಂತಾದವುಗಳನ್ನು ರಸ್ತೆ ಮಧ್ಯದಲ್ಲೇ ಉಳಿಸಿಕೊಂಡು ಕಾಮಗಾರಿ ನಡೆಸಿರುವ ಪರಿಣಾಮವಾಗಿ ಸಮಸ್ಯೆ ನಿರ್ಮಿಸಿದಾಗ ಕಾಂಕ್ರೀಟ್‌ ರಸ್ತೆಯನ್ನೇ ತುಂಡರಿಸಿಯೇ ಇವುಗಳನ್ನು ಸರಿಪಡಿಸಬೇಕಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಮೂಲ ಕಾಂಕ್ರೀಟ್‌ ಮಾಯವಾಗಿ ತೇಪೆಗಳ ರಸ್ತೆಯಾಗಿ ಮಾರ್ಪಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ರಸ್ತೆ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲೇ ಎಲ್ಲ ಪೂರಕ ವ್ಯವಸ್ಥೆಗಳನ್ನು ಒಳಗೊಂಡು ಯೋಜನೆ ಕಾರ್ಯಗತಗೊಂಡರೆ ಅದು ವ್ಯವಸ್ಥಿತ ರಸ್ತೆಯಾಗಿ ರೂಪುಗೊಳ್ಳುತ್ತದೆ. ಮಂಗಳೂರು ನಗರದಲ್ಲಿ ಪ್ರಸ್ತುತ ಕಾಂಕ್ರೀಟೀಕರಣಗೊಂಡಿರುವ ರಸ್ತೆಗಳಲ್ಲಿ ಬಹುತೇಕ ರಸ್ತೆಗಳಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಸರಕಾರದ ಅನುದಾನವನ್ನು ವಿನಿಯೋಗಿಸುವ ಧಾವಂತದಲ್ಲಿ ತರಾತುರಿಯಲ್ಲಿ ಕಾಮಗಾರಿಗಳನ್ನು ನಡೆಸಿರುವುದು ವಾಸ್ತವ. ಇದರ ಪರಿಣಾಮಗಳು ಪ್ರಸ್ತುತ ವಿವಿಧ ಸಮಸ್ಯೆಗಳ ರೂಪದಲ್ಲಿ ಗೋಚರಿಸತೊಡಗಿವೆ. ಕೆಲವು ರಸ್ತೆಗಳ ಕಾಂಕ್ರೀಟ್‌ ಕಾಮಗಾರಿ ನಡೆದು ವರ್ಷಗಳೇ ಕಳೆದರೂ ಇನ್ನೂ ಫುಟ್‌ಪಾತ್‌, ಚರಂಡಿಗಳು ನಿರ್ಮಾಣ ಆಗಿಲ್ಲ.

ಈಗ ಮಹಾನಗರ ಪಾಲಿಕೆಯಲ್ಲಿ ಹೊಸದಾಗಿ ಕೆಲವು ರಸ್ತೆಗಳ ಕಾಂಕ್ರೀಟೀಕರಣ, ಒಳಚರಂಡಿ, ಫುಟ್‌ಪಾತ್‌ ನಿರ್ಮಾಣ ಯೋಜನೆಗಳು ಸಿದ್ಧಗೊಂಡು ಟೆಂಡರ್‌ ಪ್ರಕ್ರಿಯೆಯಲ್ಲಿವೆ. ಇನ್ನು ಕೆಲವು ಹೊಸ ಯೋಜನೆಗಳ ಪ್ರಸ್ತಾವನೆ ಸಿದ್ಧಗೊಳ್ಳುತ್ತಿವೆ. ಟೆಂಡರ್‌ ಆಗಿರುವ ಕಾಮಗಾರಿಗಳು ಮಳೆಗಾಲ ಕಳೆದು ನವೆಂಬರ್‌ನಲ್ಲಿ ಪ್ರಾರಂಭಗೊಳ್ಳಲಿವೆ. ವಾಸ್ತವದಲ್ಲಿ ನಗರದಲ್ಲಿ ಕೆಲವು ರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿ ನಡೆದು ವರ್ಷಗಳೇ ಕಳೆದರೂ ಅಲ್ಲಿ ಇನ್ನೂ ಚರಂಡಿ, ಫುಟ್‌ಪಾತ್‌ಗಳು ನಿರ್ಮಾಣವಾಗಿಲ್ಲ. ಬಂಟ್ಸ್‌ಹಾಸ್ಟೆಲ್‌- ಪಿವಿಎಸ್‌ ರಸ್ತೆ, ಬಂಟ್ಸ್‌ಹಾಸ್ಟೆಲ್‌- ಅಂಬೇಡ್ಕರ್‌ ವೃತ್ತ , ಬಲ್ಮಠ- ಬೆಂದೂರುವೆಲ್‌ ರಸ್ತೆ , ಕೆಎಸ್‌ಆರ್‌ ಟಿಸಿ- ಬಿಜೈ ರಸ್ತೆ ಮುಂತಾದುವುಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿವೆ. ಸಾರ್ವಜನಿಕರು ಫ‌ುಟ್‌ಪಾತ್‌ ಇಲ್ಲದೆ ವಾಹನಗಳ ಜತೆಗೆ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಮುಂದೆ ನಡೆಯುವ ಕಾಮಗಾರಿಗಳ ವೇಳೆ ಪೂರ್ವದಲ್ಲೇ ವ್ಯವಸ್ಥಿತವಾಗಿ ಕಾಮಗಾರಿಗಳನ್ನು ರೂಪಿಸಿ ಕಾರ್ಯಗತಗೊಳಿಸಿದರೆ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಕೆಲವು ಮಾದರಿಗಳು ಮಂಗಳೂರು ನಗರದಲ್ಲಿ ಕೇಬಲ್‌, ಕುಡಿಯುವ ನೀರಿನ ಪೈಪ್‌ ಗಳು , ಕೊಳವೆ, ಒಎಫ್‌ಸಿ ಮುಂತಾದವುಗಳನ್ನು ಅಳವಡಿಸಲು ರಸ್ತೆ ಆಗೆಯುವುದು ಇತ್ತೀಚಿನ ವರ್ಷಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಇವು ಕೆಲವು ಬಾರಿ ಅಧಿಕೃತವಾಗಿ ಮತ್ತು ಇನ್ನು ಕೆಲವು ಬಾರಿ ಅನಧಿಕೃತವಾಗಿ ನಡೆಯುತ್ತವೆ. ಕೆಲಸ ಮುಗಿದ ಬಳಿಕ ರಸ್ತೆಯ ಬಗ್ಗೆ ಯಾರೂ ಕೇಳುವವರಿಲ್ಲ. ಅಧಿಕೃತವಾಗಿ ಅನುಮತಿ ಪಡೆದು ಅಗೆದಿದ್ದರೆ ಅದಕ್ಕೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗೆ ಮೊದಲೇ ಹಣ ಪಾವತಿಯಾಗಿರುತ್ತದೆ. ಆದರೆ ಕೆಲಸ ಮುಗಿದ ಬಳಿಕ ಸ್ಥಳೀಯಾಡಳಿತ ಸಂಸ್ಥೆ ಇದನ್ನು ದುರಸ್ತಿ ಮಾಡುವ ಗೋಜಿಗೆ ಹೋಗದಿರುವ ಪ್ರಮೇಯಗಳೇ ಜಾಸ್ತಿ. 

ಇಂತಹ ಲೋಪಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಂಗಳೂರು ಸಹಿತ ಕೆಲವು ನಗರಗಳಲ್ಲಿ ಆನ್‌ಲೈನ್‌ ಅಪ್‌ಡೇಟ್‌, ಟೆಂಡರ್‌ ಶ್ಯೂರ್‌ ಮುಂತಾದ ಆಧುನಿಕ ಮಾದರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಕೇಬಲ್‌, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆಯ ಬೇಕಾದುದು ಅನಿವಾರ್ಯವಾದರೆ ಅದಕ್ಕೊಂದು ಪರಿಹಾರಬೇಕಾಗುತ್ತದೆ. ಅಗೆದವರಿಗೆ ಮತ್ತು ಅನುಮತಿ ನೀಡಿದವರಿಗೆ ಉತ್ತರದಾಯಿತ್ವ ನಿಗದಿಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವುದು ಆನ್‌ಲೈನ್‌ ಅಪ್‌ಡೇಟ್‌ ವ್ಯವಸ್ಥೆ, ಅನುಮತಿ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ದುರಸ್ತಿ ಬಗ್ಗೆ ನಿಗಾ ಇದರಲ್ಲಿ ವಹಿಸಲಾಗುತ್ತದೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. ಬೆಂಗಳೂರಿನಲ್ಲಿ ಈ ವ್ಯವಸ್ಥೆ ಈಗಾಗಲೇ ಅನುಷ್ಠಾನದಲ್ಲಿದೆ.

ನಗರದ ರಸ್ತೆಗಳು ಯಾವುದೇ ಸೂಕ್ತ ಮಾರ್ಗದರ್ಶನವಿಲ್ಲದೆ ಯರ್ರಾಬ್ರಿರಿಯಾಗಿದ್ದುದನ್ನು ಒಂದು ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಟೆಂಡರ್‌ ಶ್ಯೂರ್‌ನ ಮುಖ್ಯ ಉದ್ದೇಶವಾಗಿದ್ದು, ನಾಗರಿಕ ಏಜೆನ್ಸಿಗಳು ಒಂದೇ ರಸ್ತೆಯಲ್ಲಿ ಸಮನ್ವಯತೆ ಇಲ್ಲದೆ ಮನಬಂದಂತೆ ಪದೇಪದೇ ಅಗೆದು ಹಾಳುಗೆಡವುದನ್ನು ನಿವಾರಿಸುವ ದಿಸೆಯಲ್ಲಿ ಇದು ಉಪಕ್ರಮವಾಗಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು , ಯುಟಿಲಿಟಿ ಡಕ್ಕ್ ಗಳು, ಬಸ್‌ ಬೇಗಳ ಮತ್ತು ರಸ್ತೆ ಬದಿಯ ವ್ಯಾಪಾರದ ಸ್ಥಳಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ಮಾಡುವ ಪರಿಕಲ್ಪನೆ ಹೊಂದಿದೆ. ಇಂತಹ ವ್ಯವಸ್ಥೆ ಮಂಗಳೂರಿನಲ್ಲೂ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ರಸ್ತೆಗಳ ಬೇಕಾಬಿಟ್ಟಿ ಅಗೆತ ತಡೆಯುವುದು ಮತ್ತು ರಸ್ತೆಗಳ ಸುಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಪೂರಕವಾಗಬಹುದು.

ಮಂಗಳೂರಿನಲ್ಲಿ ಸ್ಮಾರ್ಟ್‌ ನಗರ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ವ್ಯವಸ್ಥೆಗಳು ಕೂಡ ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಹಾಗಾಗಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಅದಕ್ಕೆ ಹೊಂದಿಕೊಂಡಿರುವಂತಹ ಎಲ್ಲ ಪೂರಕ ವ್ಯವಸ್ಥೆಗಳನ್ನು ಜತೆಯಲ್ಲೇ ಕೈಗೊಂಡರೆ ಮುಂದಕ್ಕೆ ಅವುಗಳನ್ನು ಅಗೆದು, ತುಂಡರಿಸಿ ವಿರೂಪಗೊಳಿಸುವ ಪ್ರಸಂಗಗಳನ್ನು ತಪ್ಪಿಸಬಹುದು.

 ಕೇಶವ ಕುಂದರ್‌

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.