ಹಾಗಲಕಾಯಿ ಕಹಿ ಎಂದು ದೂರದಿರಿ


Team Udayavani, Feb 21, 2017, 2:56 PM IST

hagala-0.jpg

ಹಾಗಲಕಾಯಿ ಸಮೃದ್ಧವಾದ ತರಕಾರಿ. ಹತ್ತು ಹಲವು ಕಾಯಿಲೆಗಳಿಗೆ ಉಪಶಮನ ನೀಡಬಲ್ಲಂಥ ಔಷಧೀಯ ಅಂಶಗಳು ಇದರಲ್ಲಿವೆ..

ಹಾಗಲಕಾಯಿ ಎಂದಾಕ್ಷಣ ಅದು ಮಧುಮೇಹಿಗಳಿಗೆ, ನಾವು ಏಕೆ ತಿಂದು ಬಾಯಿ ಕಹಿ ಮಾಡಿಕೊಳ್ಳಬೇಕು ಎಂದು ಆಲೋಚಿಸದಿರಿ. ಯಾಕೆಂದರೆ, ಕಡು ಕಹಿಯಾದ ಹಾಗಲಕಾಯಿಯನ್ನು ಸ್ವಲ್ಪ ಪ್ರಮಾಣವಾದರೂ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಖಚಿತ.

ಮೊಮೊರ್ಡಿಕಾ ಚರಾಂತಿಯ, ಬಿಟರ್‌ಗಾರ್ಡ್‌ ಎಂದೆಲ್ಲ ಕರೆಯಲ್ಪಡುವ ಹಾಗಲಕಾಯಿಯು ಕ್ಯಕುರ್ಬಿಟೇಸಿಯ ಜಾತಿಗೆ ಸೇರಿದ ತರಕಾರಿ. ಹೆಚ್ಚಾಗಿ ಹಾಗಲಕಾಯಿಯು ಉಷ್ಣ ವಲಯಗಳಲ್ಲಿ ಬೆಳೆಯುತ್ತವೆ.  ಇದರ ಪ್ರತಿ ಸಸ್ಯವು ಪ್ರತ್ಯೇಕವಾದ ಹಳದಿ  ಕಂದು ಬಣ್ಣಗಳ ಹೂವು ಹೊಂದಿರುತ್ತದೆ. 

ಇದು ಸೌತೆಕಾಯಿ, ಹಸುರು ದಪ್ಪ ಮೆಣಸಿಕಾಯಿಯ ಮಾದರಿಯನ್ನು ಹೋಲುತ್ತದೆಯಾದರೂ, ಬಹಳ ಕಹಿ. ಕಾಯಿಯ ಹೊರಭಾಗವೂ ತೆಳುವಾಗಿರುವುದರ ಜತೆಗೆ ಖಾದ್ಯವಾಗಿ ಬಳಸಬಹುದು. ಅದರ ಕಹಿ ಸ್ವಾದಕ್ಕಾಗಿ ಸಾಮಾನ್ಯವಾಗಿ ಚೈನೀಸ್‌ ಅಡುಗೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ  ಹುರಿದ ತಿನಿಸುಗಳ ತಯಾರಿಯಲ್ಲಿ ಬಳಕೆ ಹೆಚ್ಚು. ಮಾತ್ರವಲ್ಲದೇ ಇದನ್ನು ಸೂಪ್‌ನಲ್ಲಿ ಹಾಗೂ ಟೀನಂತೆಯೂ ಬಳಸಲಾಗುತ್ತದೆ. ಅದರ ಎಳೆಯದಾದ ಚಿಗುರು ಬಳ್ಳಿ ಹಾಗೂ ಎಲೆಗಳನ್ನೂ ಸೇವಿಸಬಹುದು.

ಔಷಧೀಯ ಗುಣಗಳು
ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಶಿಯನ್‌ ಹಾಗೂ ಆಫ್ರಿಕನ್‌ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಬಳಸುತ್ತಾರೆ.

ರಕ್ತ ಶುದ್ಧೀಕರಣ
ರಕ್ತಕ್ಕೆ ಸಂಬಂಧಿಸಿದ  ಅನೇಕ ತೊಂದರೆಗಳನ್ನು ನೀಗಿಸುವಲ್ಲಿ  ಹಾಗಲಕಾಯಿ ತುಂಬಾ ಸಹಕಾರಿ. ಕೆಟ್ಟ ರಕ್ತದಿಂದ  ಉಂಟಾಗುವ ಹುಣ್ಣು, ಚರ್ಮದ ತುರಿಕೆ  ಮತ್ತು ಕೀವು ಸೋರುವುದು ತಡೆಯುತ್ತದೆ. ನಿಂಬೆ ಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ  ಇದನ್ನು ಸೇವಿಸುತ್ತಾ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ.

ಮಧುಮೇಹ
ಇದರಲ್ಲಿನ ಹೈಪೊಗೈಸಮಿಕ್‌ ಎಂಬ ನೈಸರ್ಗಿಕ ಇನ್ಸುಲಿನ್‌  ರಕ್ತದಲ್ಲಿನ  ಸಕ್ಕರೆ ಅಂಶವನ್ನು  ತಗ್ಗಿಸುವಲ್ಲಿ ಸಹಕಾರಿ. ಜತೆಗೆ  ರಕ್ತಕ್ಕೆ ಗ್ಲೂಕೋಸ್‌ ನೀಡಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಜೀರ್ಣಿಸಲು ಸಹಕಾರಿ
ಕಹಿ ರುಚಿಯಿರುವ ಇತರ ಆಹಾರಗಳ ರೀತಿ, ಹಾಗಲಕಾಯಿಯು ಆಹಾರ ಪಚನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಅಜೀರ್ಣ ಹಾಗೂ ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿ. ಆದಾಗ್ಯೂ ಅತಿ ಬಳಕೆಯಿಂದ ಇದು ಎದೆ ಉರಿ  ಹಾಗೂ ಹುಣ್ಣುಗಳಿಗೆ ಕಾರಣವಾದೀತೆಂದು ಭಾವಿಸಲಾಗುತ್ತದೆ. 

ಲಾಡಿಹುಳ ನಿರೋಧಕ
ಹಾಗಲಕಾಯಿಯನ್ನು ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಟೊಗೊ ನಲ್ಲಿ ಜನಪದೀಯ ಔಷಧವನ್ನಾಗಿ ಬಳಸಲಾಗುತ್ತದೆ.

ಕ್ಯಾನ್ಸರ್‌ಗೆ ಬಳಕೆ
ಹಾಗಲಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಕ್ಯಾನ್ಸರ್‌ ವಿರುದ್ಧ ಹೋರಾಡಲು ಈ ಅಂಶಗಳು ಸಹಕಾರಿಯಾಗುತ್ತವೆ.

ಮಲೇರಿಯಾ ನಿರೋಧಕ 
ಹಾಗಲಕಾಯಿಗೆ ಕಹಿಯು ಕ್ವಿನೈನ್‌ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ. ಇದು ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. 

ವೈರಸ್‌ ನಿರೋಧಕ 
ಸಿಡುಬು ಹಾಗೂ ದಡಾರದಂತಹ ರೋಗಗಳ  ವಿರುದ್ಧ ಈ ಸಸ್ಯವನ್ನು  ಬಳಸಲಾಗುತ್ತದೆ. ಇದರ  ಸಂಯುಕ್ತಗಳು ಎಚ್‌ಐವಿ ಸೋಂಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಂದು  ಪ್ರಾಯೋಗಿಕ ಪರೀಕ್ಷೆಗಳು ಸೂಚಿಸುತ್ತವೆ.
ಕಾಲರಾ, ಜಾಂಡಿಸ್‌ನಂತಹ ಅಪಾಯಕಾರಿ ರೋಗಗಳ ತಡೆಗೆ  ಇದು ರಾಮಬಾಣ. ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರ, ಉಸಿರಾಟದ ತೊಂದರೆ, ಅಸ್ತಮಾ, ಕೆಮ್ಮು, ಗಂಟಲಿನ ತೊಂದರೆ, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಸ್ರಾವ,  ತುರಿಗಜ್ಜಿ, ತೂಕ ನಿಯಂತ್ರಣಕ್ಕೆ ಹಾಗೂ ಚರ್ಮದ ಇತರ ಸಮಸ್ಯೆಗನ್ನು ಒಳಗೊಂಡಂತೆ  ಹಲವು ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಬಳಸಲಾಗುತ್ತದೆ. ಕಣ್ಣು ಮತ್ತು ಚರ್ಮ ರೋಗಗಳು, ಗೌಟ್‌, ಮೂಲವ್ಯಾಧಿ, ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು.

- ವಿನೋದ್‌ ರಾಜ್‌ ಕೆ.

ಟಾಪ್ ನ್ಯೂಸ್

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.