CONNECT WITH US  

ಪ್ರೇಮ…ಕಾಮ; ಬೆಂಕಿಯಲ್ಲಿ ಅರಳಿದ ದುರಂತ ನಟಿ ಸೆಕ್ಸ್ ಸಿಂಬಲ್ ಮನ್ರೋ

ನೋರ್ಮಾ ಜೇನ್ ಮೋರ್ಟೆನ್ ಸನ್ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ  ಜಗತ್ತಿನಾದ್ಯಂತ ಹೆಸರು ಮಾಡಿದ್ದವಳು. ರೂಪದರ್ಶಿ, ಗಾಯಕಿಯಾಗಿ ಕೂಡಾ ಆಗಿದ್ದಳು. ಅವೆಲ್ಲಕ್ಕಿಂತ ಹೆಚ್ಚಾಗಿ 1950ರ ದಶಕದ ಅತ್ಯಂತ ಜನಪ್ರಿಯ ಸೆಕ್ಸ್ ಸಿಂಬಲ್ ಎಂದೇ ಖ್ಯಾತಿ ಗಳಿಸಿದ್ದಳು. ಬಾಲ್ಯದಲ್ಲಿಯೇ ಅತೀ ರೂಪವತಿಯಾಗಿದ್ದ ನೋರ್ಮಾಗೆ ಆಕೆಯ ಸೌಂದರ್ಯವೇ ಮಾರಕವಾಗಿ ಬಿಟ್ಟಿತ್ತು. ಬಾಲ್ಯದಲ್ಲಿಯೇ ಲೈಂಗಿಕ ಶೋಷಣೆಗೆ ಒಳಗಾಗಿ, ನೂರಾರು ನೋವು, ಒತ್ತಡಗಳ ನಡುವೆ ಅರಳಿದ್ದ ದುರಂತ ನಾಯಕಿ ಇವಳು!

ಸೌಂದರ್ಯ, ಮಾದಕತೆಯ ಗಣಿಯಾಗಿದ್ದ ಈಕೆ ಹಾಲಿವುಡ್ ನಲ್ಲಿ ಸಂಚಲನ ಮೂಡಿಸಿ ಪ್ರೇಮ, ಮೋಹದ ಪಾಶದೊಳಕ್ಕೆ ಸಿಲುಕಿ ವೈಯಕ್ತಿಕ ಬದುಕನ್ನು ಸುಟ್ಟುಕೊಂಡು ಸಾಗುತ್ತಲೇ ನಿಗೂಢವಾಗಿ ಸಾವನ್ನಪ್ಪಿದ್ದಳು.

ಹೌದು ಈಕೆ ಯಾರು ಗೊತ್ತಾ..ಬಾಲಿವುಡ್ ಚೆಲುವಿನ ತಾರೆಯಾಗಿದ್ದ ಮರ್ಲಿನ್ ಮನ್ರೋ. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ 1962ರ ಜೂನ್ 1ರಂದು ನೋರ್ಮಾ(ಮನ್ರೋ) ಜನಿಸಿದ್ದಳು. ನೋರ್ಮಾ ಜೀನ್ ಎಂಬ ಬಾಲಕಿ ಮರ್ಲಿನ್ ಮನ್ರೋ ಎಂದು ಜಗದ್ವಿಖ್ಯಾತಿಗೊಳ್ಳುವ ಮುನ್ನ ಅನುಭವಿಸಿದ ನೋವು, ಅವಮಾನ, ಶೋಷಣೆ ಅಪಾರ.

ಮನ್ರೋ ತನ್ನ ಬಾಲ್ಯ ಜೀವನವನ್ನು ಅತೀ ಹೆಚ್ಚಾಗಿ ಕಳೆದದ್ದು ಅನಾಥಾಶ್ರಮ ಹಾಗೂ ಆಶ್ರಯದಾತರ ಮನೆಗಳಲ್ಲಿ. 1944ರಲ್ಲಿ ರೇಡಿಯೋಪ್ಲೇನ್ ಫ್ಯಾಕ್ಟರಿಯಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಮದುವೆಯಾಗಿತ್ತು. ಆಗ ಮನ್ರೋ ವಯಸ್ಸು 16!

ಸಾಧಾರಣ ಸಿ ದರ್ಜೆಯ ನಟಿಯಾಗಿ ನಟಿಸುತ್ತಿದ್ದ ಮನ್ರೋ ಯಾವಾಗ ಫ್ಲೇ ಬಾಯ್ ಮುಖಪುಟದಲ್ಲಿ ಮಾದಕ ನೋಟದ, ವೈಯ್ಯಾರದ ಫೋಟೋಗಳು ಪ್ರಕಟವಾಗಲು ಶುರುವಾದವೋ ಅಲ್ಲಿಂದ ಆಕೆಯ ಬದುಕಿಗೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಅದರ ನಂತರವೇ ಸೆಕ್ಸ್ ಸಿಂಬಲ್ ಎಂದು ಜಗತ್ತಿನಾದ್ಯಂತ ಸುದ್ದಿಯಾಗಿದ್ದಳು.

ಫೋಟೋಗ್ರಾಫರ್, ರೂಪದರ್ಶಿಯಾಗಿದ್ದ ಮನ್ರೋ 1950ಲ್ಲಿ ಅದೃಷ್ಟ ಕೈ ಹಿಡಿದಿತ್ತು. 1953ರ ಹೊತ್ತಿಗೆ ಹಾಲಿವುಡ್ ನ ಅತ್ಯಂತ ಬೇಡಿಕೆಯ ಸ್ಟಾರ್ ನಟಿ ಆಗಿಬಿಟ್ಟಿದ್ದಳು. ಆಕೆಯ ಮಾದಕ ನೋಟ, ವೈಯ್ಯಾರದ ಮೈಮಾಟಕ್ಕೆ ಹಾಲಿವುಡ್ ನಿರ್ಮಾಪಕರು ಮುಗಿಬಿದ್ದು ಸಿನಿಮಾದಲ್ಲಿ ನಟಿಸುವಂತೆ ಗೋಗರೆಯುತ್ತಿದ್ದರಂತೆ. ಇದರಿಂದಾಗಿ ಮನ್ರೋ 25ನೇ ವರ್ಷಕ್ಕೆ ಜಾಗತಿಕ ತಾರೆ ಪಟ್ಟ ಗಿಟ್ಟಿಸಿಕೊಂಡಿದ್ದಳು.

ನೋವು…ಅವಮಾನ:

ಮನ್ರೋ ತಾಯಿ ಮಾನಸಿಕವಾಗಿ ಜರ್ಜರಿತರಾಗಿದ್ದರು. ಅರೆಹುಚ್ಚಿಯಂತಾಗಿದ್ದ ಆಕೆ ಬಹುತೇಕ ಸಮಯವನ್ನು  ಹುಚ್ಚಾಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನ ತಾಯಿ ಬಗ್ಗೆ ಮನ್ರೋ ಎಲ್ಲಿಯೂ ಹೇಳಿಕೊಂಡಿರಲಿಲ್ಲವಾಗಿತ್ತು. ತಂದೆ ಯಾರೆಂಬುದೇ ಗೊತ್ತಿಲ್ಲವಾಗಿತ್ತು. ಹಣಕ್ಕಾಗಿ ಆಕೆ ನಗ್ನ ಫೋಸ್ ಕೊಟ್ಟಿದ್ದಳು. ತನ್ನ ತಾಯಿ ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿರುವುದಾಗಿ ಮನ್ರೋ ಹೇಳಿಬಿಟ್ಟಿದ್ದಳು. ನಿಜ ವಿಷಯ ಏನೆಂದರೆ ಆಕೆ ಹುಚ್ಚಾಸ್ಪತ್ರೆಯಲ್ಲಿ ಜೀವಂತವಾಗಿದ್ದಳು. ಕೊನೆಗೂ ಆಕೆ ತಾನು ಯಾಕಾಗಿ ನಗ್ನ ಫೋಟೋ ತೆಗೆಯಲು ಅನುಮತಿ ಕೊಟ್ಟಿದ್ದೇನೆ ಎಂಬುದರ ಬಗ್ಗೆ ಬಾಯ್ಬಿಟ್ಟಿದ್ದಳು. ರಹಸ್ಯವಾಗಿ ರಕ್ಷಿಸುತ್ತಿದ್ದ ತಾಯಿ ಗ್ಲ್ಯಾಡೀಸ್ ಗಾಗಿ ಎಂದು ಹೇಳಿದ್ದಳು. ಆಕೆಯ ಚಿಕಿತ್ಸೆಗಾಗಿ ತನಗೆ ಹಣ ಬೇಕು ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಳು.

ಆ ಫೋಟೋ ಅತ್ಯಂತ ಜನಪ್ರಿಯವಾಗಿತ್ತು!

ಸ್ಯಾನ್ ಫ್ರಾನ್ಸಿಸ್ಕೋಗೆ ಓಡಿಬಂದ ಮನ್ರೋ ಹಾಗೂ ಜೊಯ್ ಡಿಮ್ಯಾಗಿಯೋ ಜೋಡಿ ವಿವಾಹವಾಗುತ್ತಾರೆ. ಆದರೆ ವಿಪರ್ಯಾಸ ಎಂಬಂತೆ 1954ರಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಆಕೆಯ ಸ್ಕರ್ಟ್ ಗಾಳಿಗೆ ಮೇಲಕ್ಕೆ ಹಾರೋದನ್ನು ಸಾರ್ವಜನಿಕವಾಗಿ ಚಿತ್ರೀಕರಿಸುತ್ತಿದ್ದರು. ಆ ಫೋಟೋವನ್ನು ಫೋಟೋಗ್ರಾಫರ್ಸ್ ಸೆರೆಹಿಡಿದಿದ್ದರು. ಆದರೆ ಇದು ಪತಿ ಜೊಯ್ ಗೆ ಆಕ್ರೋಶ ತಂದಿತ್ತು. ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆದು ಕೊನೆಗೆ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು. ಮನ್ರೋಳ ಆ ಫೋಟೋ ಇಂದಿಗೂ ಅತ್ಯಂತ ಜನಪ್ರಿಯಗೊಂಡಿದೆ.

1955ರಲ್ಲಿ ಮನ್ರೋ ನ್ಯೂಯಾರ್ಕ್ ನತ್ತ ಪ್ರಯಾಣ ಬೆಳೆಸಿ ಸ್ವಂತ ಸಿನಿಮಾ ಕಂಪನಿಯನ್ನು ಆರಂಭಿಸಿದ್ದಳು. ಅಲ್ಲಿ ಅರ್ಥುರ್ ಮಿಲ್ಲರ್ ಜೊತೆ ಡೇಟಿಂಗ್ ನಲ್ಲಿ ತೊಡಗಿ 1956ರಲ್ಲಿ ವಿವಾಹವಾಗುತ್ತಾರೆ.

ಅರ್ಥರ್ ಮೋಸ ಕೂಡಾ ಮನ್ರೋಗೆ ತಿಳಿಯುತ್ತೆ. ಹೀಗೆ ತಾನು ತಾಯಿಯಾಗಬೇಕೆಂಬ ಬಯಕೆಯೂ ಈಡೇರೋದಿಲ್ಲ. ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು ಕೂಡಾ ತಾಯಿಯೂ ಮಗಳ ವಿರುದ್ಧ ತಿರುಗಿ ಬೀಳುತ್ತಾರೆ. 1957ರ ನಂತರ ಕೆಲವು ವರ್ಷಗಳ ಕಾಲ ಭಾರೀ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾಳೆ. ಅತೀಯಾದ ಮದ್ಯಸೇವೆನೆಯ ದಾಸಿಯಾಗಿಬಿಟ್ಟಿದ್ದಳು.

ಜಾನ್ ಎಫ್ ಕೆನಡಿ ಪ್ರೇಯಸಿ, ಸಾವಿನ ರಹಸ್ಯ ಏನು?

ಮರ್ಲಿನ್ ಮನ್ರೋ ಕೇವಲ ನಟಿ, ಸ್ಟಾರ್ ಮಾತ್ರ ಆಗಿರಲಿಲ್ಲವಾಗಿತ್ತು. ಆಕೆಯ ಸ್ನೇಹಕ್ಕಾಗಿ ಪ್ರತಿಷ್ಠಿತ ಜನರು ಹಾತೊರೆಯುತ್ತಿದ್ದರು. ಆಕೆಯ ಗೆಳೆತನ ಕೂಡಾ ಭಾರೀ ಶ್ರೀಮಂತರ ಜೊತೆಗೆ ಇತ್ತು. ಅದರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಕೂಡಾ ಒಬ್ಬರಾಗಿದ್ದರು!

ಜಾನ್ ಎಫ್ ಕೆನಡಿ ಹಾಗೂ ಜಾನ್ ಕೆನಡಿಯ ಸಹೋದರ ರಾಬರ್ಟ್ ಕೆನಡಿ ಕೂಡಾ ಮನ್ರೋ ಜತೆ ಸಂಬಂಧ ಹೊಂದಿದ್ದರು ಎಂಬ ಥಿಯರಿಯನ್ನೂ ಹೇಳಲಾಗುತ್ತಿದೆ. ಹೀಗೆ ಕಿರಿಯ ಪ್ರಾಯದಲ್ಲೇ ಹೆಸರು, ಐಶ್ವರ್ಯ ಗಳಿಸಿದ್ದ ಮರ್ಲಿನ್ ಮನ್ರೋ ಎಂಬ ಚೆಲುವೆ 1962ರ ಜೂನ್ 5ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಆಗ ಆಕೆಯ ವಯಸ್ಸು 36! ಆದರೆ ಈವರೆಗೂ ಆಕೆಯ ಸಾವಿನ ಹಿಂದೆ ಕೆನಡಿ ಕುಟುಂಬ ಇದೆ ಎಂಬ ಊಹಾಪೋಹ ಹರಿದಾಡುತ್ತಲೇ ಇದೆ.

ಹೀಗೆ ಪ್ರೇಮ, ಮೋಹ, ಕಾಮ, ಡ್ರಗ್ಸ್, ಮಾದಕ ಪ್ರಪಂಚದೊಳಗೆ ಸುತ್ತಿ ಹಣದ ಸುಪ್ಪತ್ತಿಗೆಯಲ್ಲಿ ತೇಲಾಡಿದರೂ ಅವಮಾನ, ಅನುಮಾನಕ್ಕೊಳಗಾಗಿ ಕೊನೆಗೂ ನೋವು, ಮಾನಸಿಕ ಒತ್ತಡದಲ್ಲಿಯೇ ಅಂತ್ಯ ಕಂಡ ಮರ್ಲಿನ್ ಎಂಬ ಡ್ರೀಮ್ ಗರ್ಲ್ ನ ದುರಂತ ಕಥೆ.


Trending videos

Back to Top