ಕರೋಡ್ ಪತಿ ಆಗುವ ಆಸೆಯೇ? ಹಾಗಾದ್ರೆ ELSS ಬಗ್ಗೆ ತಿಳಿಯಿರಿ


Team Udayavani, Oct 1, 2018, 6:00 AM IST

rupee-600.jpg

ಕರೋಡ್ ಪತಿಗಳಾಗಬೇಕು ಎಂದು ಎಲ್ಲರೂ ಬಯಸುವುದು ಸಹಜವೇ. ಆದರೆ ಕರೋಡ್ಪತಿಗಳಾಗುವ ಉಪಾಯ ಹೇಗೆ ಎಂಬುದು ಜನಸಾಮಾನ್ಯರಿಗೆ ಯಾವತ್ತೂ ಮಿಲಿಯನ್ ಡಾಲರ್ ಪ್ರಶ್ನೆಯೇ. ಹಾಗಿದ್ದರೂ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಅಥವಾ ಇಎಲ್ಎಸ್ಎಸ್ ಎಂಬುದು ಕರೋಡ್ ಪತಿಗಳಾಗುವುದಕ್ಕೆ ಸರಿಯಾದ ಉಪಾಯ ಎಂದು ಹೇಳಬಹುದು. 

ಸಾಮಾನ್ಯವಾಗಿ ಹಣ ಸಂಪಾದನೆ, ಉಳಿತಾಯ, ಹಣಕಾಸು ಹೂಡಿಕೆ ಇವೆಲ್ಲವುಗಳ ಹಿಂದಿರುವ ನಮ್ಮ ಮನೋಭಿಲಾಷೆ ಎಂದರೆ ನಾವೂ ಕರೋಡ್ಪತಿಗಳಾಗಬೇಕು ಎಂಬುದೇ ಆಗಿರುತ್ತದೆ. ಈಗಿನ ದಿನಗಳಲ್ಲಿ ಲಕ್ಷಕ್ಕೆ ಬೆಲೆಯೇ ಇಲ್ಲ; ಹಾಗಾಗಿ ಲಕ್ಷಾಧಿಪತಿಗಳಾಗಬೇಕೆಂಬ ಜನಸಾಮಾನ್ಯರ ಕನಸು ಇಪ್ಪತ್ತೆದು ವರ್ಷಗಳ ಹಿಂದಿನ ಮಾತು; ಈಗ ಕೋಟಿಗೆ ಮಾತ್ರವೇ ಬೆಲೆ; ಹಾಗಾಗಿ ಈಗಿನ ದಿನಗಳಲ್ಲಿ  ಕೋಟ್ಯಧಿಪತಿಗಳಾಗುವುದೇ ಒಳ್ಳೆಯದು. 

ನೆಮ್ಮದಿ  ಮತ್ತು ಸಮೃದ್ಧಿಯ ಬದುಕಿನ ರಹಸ್ಯವೇನು ಎಂಬ ಪ್ರಶ್ನೆಗೆ ಒಂದೇ ಉತ್ತರ : ಹಣಕಾಸು ಶಿಸ್ತು. ಹಣಕಾಸು ಶಿಸ್ತು ಎಂದರೆ ಪ್ರತೀ ತಿಂಗಳೂ ತಪ್ಪದೇ ನಿರ್ದಿಷ್ಟ ಮೊತ್ತದ ಹಣವನ್ನು ಉಳಿಸುವುದು ಮತ್ತು ಅದನ್ನು ಲಾಭದಾಯಕವಾಗಿ, ದೀರ್ಘಾವಧಿಗೆ ಹೂಡುವುದು. ಈಕ್ವಿಟಿ ಲಿಂಕ್ ಡ್ ಸೇವಿಂಗ್ಸ್ ಸ್ಕೀಮ್ (ELSS) ಮೂಲಕ ನಾವು ಕೋಟ್ಯಧಿಪತಿಗಳಾಗಬಹುದು ಎಂಬ ವಿಚಾರ ಬಹಳ ಮುಖ್ಯ. ನಾವಿದನ್ನು ಮೊದಲು ಮನಗಾಣಬೇಕು. 

ಇಎಲ್ಎಸ್ಎಸ್ ಎಂಬುದು ಈ ಮೊದಲೇ ಹೇಳಿದ ಹಾಗೆ ಒಂದು ಬಗೆಯ ಮ್ಯೂಚುವಲ್ ಫಂಡ್ ಸ್ಕೀಮ್. ಇದರಲ್ಲಿ ಹೂಡುವ ಹಣದಿಂದ ತೆರಿಗೆ ವಿನಾಯಿತಿ ಲಾಭವಿದೆ. ತೆರಿಗೆ ವಿನಾಯಿತಿ ಇರುವ ಇತರ ಬಗೆಯ ಹೂಡಿಕೆಗಳಾಗಿರುವ ಪಿಪಿಎಫ್, ಎನ್ಎಸ್ಇ, ಯುಎಲ್ಐಪಿ, ಜೀವವಿಮೆ ಮುಂತಾದ ಸ್ಕೀಮ್‌ ಗಳಿಗಿಂತ ಅತೀ ಕನಿಷ್ಠ ಅವಧಿಯ, ಎಂದರೆ 3 ವರ್ಷಗಳ ಲಾಕ್ ಇನ್ ಪೀರಿಯಡ್ ಇರುವುದು ಇಎಲ್ಎಸ್ಎಸ್ ಸ್ಕೀಮಿನಲ್ಲಿ. ಆದುದರಿಂದ ಈ ಯೋಜನೆಯಲ್ಲಿ ಹಣ ಹೂಡಿದರೆ ನಮಗೆ ನಗದು ಲಭ್ಯತೆಯ ಎಂದರೆ ಲಿಕ್ವಿಡಿಟಿಯ ಸಮಸ್ಯೆ ಇರುವುದಿಲ್ಲ. 

ಇನ್ನೊಂದು ಬಹಳ ಮುಖ್ಯ ವಿಷಯವೆಂದರೆ ಇಎಲ್ಎಸ್ಎಸ್ನಲ್ಲಿ  ತೆರಿಗೆ ವಿನಾಯಿತಿಗಾಗಿ ವರ್ಷಕ್ಕೆ ಗರಿಷ್ಠ 1.50 ಲಕ್ಷ ರೂ. ಹೂಡಲು ಇರುವ ಅವಕಾಶವನ್ನು ಏಕಗಂಟಿನ ಹೂಡಿಕೆಯಲ್ಲಿ ಅಥವಾ ಪ್ರತೀ ತಿಂಗಳ ಕಂತು ಹೂಡಿಕೆಯಲ್ಲಿ (ಇದನ್ನೇ ಸಿಪ್ ಅನ್ನುವುದು : ಸಿಪ್ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಮಾಡಬಹುದು. ಒಂದು ಹಣಕಾಸು ವರ್ಷ ಆರಂಭವಾಗುವ ಒಂದು ಕ್ಯಾಲೆಂಡರ್ನ ಎಪ್ರಿಲ್ 1ರಿಂದ ತೊಡಗಿ ಮುಂದಿನ ಕ್ಯಾಲೆಂಡರ್ನ ಮಾರ್ಚ್ 31ರ ಒಳಗಿನ ಅವಧಿಯಲ್ಲಿ, ತೆರಿಗೆ ವಿನಾಯಿತಿಗಾಗಿ ಈ 1.50 ಲಕ್ಷ ರೂ.ಗಳ ಗರಿಷ್ಠ ಮೊತ್ತವನ್ನು ಕಂತು ಕಂತಿನಲ್ಲಿ ಅಥವಾ ಏಕಗಂಟಿನಲ್ಲಿ ಹೂಡಬಹುದು. 

ಕಂತು ಕಂತಿನ ಸಿಪ್ ಮೂಲಕ ಹೂಡಿದ ಪಕ್ಷದಲ್ಲಿ ಸಿಗುವ ಲಾಭ ಏಕಗಂಟಿನ ಹೂಡಿಕೆಗಿಂತ ಅತ್ಯಧಿಕ ಎನ್ನುವುದು ಬಹಳ ಮುಖ್ಯ ವಿಚಾರ. ಏಕೆಂದರೆ ಶೇರು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಇಎಲ್ಎಸ್ಎಸ್ ಯೂನಿಟ್ ಧಾರಣೆ ಏರಿಳಿತ ಕಾಣುವುದರಿಂದ ಕಂತು ಕಂತಿನ ಹೂಡಿಕೆ ಕ್ರಮದಲ್ಲಿ ಎಷ್ಟೋ ವೇಳೆ ಅತೀ ಕಡಿಮೆ ಧಾರಣೆಯ ಯೂನಿಟ್‌ ಗಳು  ನಮಗೆ ಸಿಗುತ್ತವೆ. ಶೇರು ಮಾರುಕಟ್ಟೆಯಲ್ಲಿ ತೇಜಿ ಬಂದಾಗ ಯೂನಿಟ್ ಧಾರಣೆಯೂ ಏರುವುದರಿಂದ ವರ್ಷದ ಕೆಲವು ಅವಧಿಯಲ್ಲಿ ಇಎಲ್ಎಸ್ಎಸ್ ಯೂನಿಟ್ ಧಾರಣೆ ಕೂಡ ಏರುತ್ತದೆ. ಆದುದರಿಂದಲೇ ಈ ಮ್ಯೂಚುವಲ್ ಫಂಡ್ ಸ್ಕೀಮನ್ನು “ಈಕ್ಟಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್’ ಅನ್ನುವುದು. 

ಇದಕ್ಕೊಂದು ಉದಾಹಣೆಯನ್ನು ಇಲ್ಲಿ ನೀಡಬಹುದು : ನೀವು ತಿಂಗಳಿಗೆ 12,500 ರೂ. ಪ್ರಕಾರ ಸಿಸ್ಟಮ್ಯಾಟಿಕ್ ಪ್ಲಾನ್ (ಸಿಪ್) ನಡಿ 15 ವರ್ಷಗಳ ಅವಧಿಗೆ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿದ್ದೀರಿ. ನಿಮ್ಮ ಹಾಗೆ ಇನ್ನೊಬ್ಬ ವ್ಯಕ್ತಿ ವರ್ಷಕ್ಕೆ ಏಕಗಂಟಿನಲ್ಲಿ ವರ್ಷಕ್ಕೆ 1.50 ಲಕ್ಷ ರೂ.ಗಳನ್ನು 15 ವರ್ಷಗಳ ಅವಧಿಗೆ ಹೂಡಿದ್ದಾರೆ ಎಂದು ತಿಳಿಯೋಣ. 15 ವರ್ಷಗಳು ಮುಗಿದಾಗ ನೀವು ಹೂಡಿರುವ ಒಟ್ಟು ಹಣ 22.50 ಲಕ್ಷ ಆಗಿರುತ್ತದೆ; ಇನ್ನೊಬ್ಬ ವ್ಯಕ್ತಿ  ವಾರ್ಷಿಕ ಏಕಗಂಟಿನಲ್ಲಿ  15 ವರ್ಷಗಳಲ್ಲಿ ಹೂಡಿದ ಹಣ ಕೂಡ 22.50 ಲಕ್ಷ ರೂ. ಆಗಿರುತ್ತದೆ. ಇಬ್ಬರಿಗೂ ಶೇ.15ರ ಇಳುವರಿ ಸಿಕ್ಕಿರುತ್ತದೆ ಎಂದಿಟ್ಟುಕೊಳ್ಳೋಣ. ಹಾಗಿದ್ದರೂ ಸಿಪ್ ಮೂಲಕ ಕಂತು ಕಂತಿನಲ್ಲಿ ಮಾಡಿದ ಹೂಡಿಕೆಯ ಮೌಲ್ಯ 15 ವರ್ಷ ಮುಗಿದಾಗ 84,60,789 ರೂ. ಆಗಿರುತ್ತದೆ. ಆದರೆ ಏಕಗಂಟಿನ ಹೂಡಿಕೆ ಮೌಲ್ಯ 15 ವರ್ಷ ಮುಗಿದಾಗ 83,57,620 ರೂ. ಆಗಿರುತ್ತದೆ. ಎಂದರೆ 1,03,169 ರೂ ಹೆಚ್ಚು ಇಳುವರಿ ಸಿಪ್ ಹೂಡಿಕೆದಾರನಿಗೆ ಬಂದಿರುತ್ತದೆ !

ತಿಂಗಳಿಗೆ 12,500 ರೂ. ಪ್ರಕಾರ ನೀವು ಒಂದೊಮ್ಮೆ 20 ವರ್ಷಗಳ ಅವಧಿಗೆ ಸಿಪ್ ಮೂಲಕ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದಲ್ಲಿ  ಶೇ.15ರ ಅಶ್ಯೂರ್ಡ್ ರಿಟರ್ನ್ ಪ್ರಕಾರ ನಿಮಗೆ ಸಿಗುವ ಮೊತ್ತ ಇನ್ನೂ ದೊಡ್ಡದು. ಈ  ಸಂದರ್ಭದಲ್ಲಿ ನೀವು 20 ವರ್ಷಗಳ ಕಾಲ ಉಳಿತಾಯ ಮಾಡುವ ಹಣದ ಹೂಡಿಕೆ ಮೊತ್ತವೇ 1.78 ಕೋಟಿ ರೂ.ಗಳಾಗಿರುತ್ತದೆ. ಅಂತಿರುವಾಗ ಇದರ ಜತೆಗೆ ಇಳುವರಿ ಮೊತ್ತ ಸೇರುವಾಗ ಕೈಗೆ ಸಿಗುವ ಮೊತ್ತ ಮತ್ತೂ ದೊಡ್ಡದು; ಎಂದರೆ ಸಹಜವಾಗಿಯೇ ನೀವು ಆಗ ಕರೋಡ್ಪತಿಗಳಾಗಿರುತ್ತೀರಿ! 

ಹನಿ ಕೂಡಿ ಹಳ್ಳ, ತೆನೆ ಕೂಡಿ ಕಣಜ ಎಂಬ ಜನಪದ ನುಡಿ ನಿಜಕ್ಕೂ ಅಕ್ಷರಶಃ ಸತ್ಯ ಎನ್ನುವುದನ್ನು ನಾವು ಸಣ್ಣ ಸಣ್ಣ  ಮೊತ್ತದ ಉಳಿತಾಯವನ್ನು  ನಿರಪಾಯಕರ ಲಾಭದಾಯಕ ಮಾರ್ಗಗಳಲ್ಲಿ ತೊಡಗಿಸಿದಾಗ ಅನುಭವದಿಂದ ಕಾಣಬಹುದು. ಇಎಲ್ಎಸ್ಎಸ್ ಬಗ್ಗೆ ನೀವು ನೆನಪಿಟ್ಟು ಕೊಳ್ಳಬೇಕಾದ ಅಂಶಗಳು ಹೀಗಿವೆ : 

1. ಹೂಡಿಕೆ ಶಿಸ್ತನ್ನು ಮೈಗೂಡಿಸಿಕೊಳ್ಳಬಹುದು

2. ನಗದು ಲಭ್ಯತೆಯ ಕೊರತೆ ಉಂಟಾಗದು (ಹೂಡಿದ ಹಣದ ಲಾಕ್ ಇನ್ ಪೀರಿಯಡ್ ಕೇವಲ 3 ವರ್ಷ)

3. ಕಂತು ಕಂತಿನಲ್ಲಿ ಸಿಪ್ ಮೂಲಕ ಹಣ ಹೂಡುವಾಗ ರೂಪಾಯಿ ವೆಚ್ಚ ಸರಾಸರಿಯಾಗುತ್ತಾ ಸಾಗುತ್ತದೆ.

4. ಹೂಡಿಕೆ ಅತೀ ಸುಲಭ 

5. ತಿಂಗಳಿಗೆ ಕೇವಲ 500 ರೂ. ಮೂಲಕವೂ ಸಿಪ್ – ಇಎಲ್ಎಸ್ಎಸ್ ಹೂಡಿಕೆ ಆರಂಭಿಸಬಹುದು

6. ಹೆಚ್ಚುವರಿ ಇಳುವರಿ (ಶೇರು ಮಾರುಕಟ್ಟೆ ಏರಿಳಿತದಿಂದ ಸಿಗುವ ಲಾಭ).

ಈ ಎಲ್ಲ ಮೂಲಭೂತ ಅಂಶಗಳನ್ನು ಸರಿಯಾಗಿ ಮನನ ಮಾಡಿಕೊಂಡು ಮುಂದಡಿ ಇಟ್ಟರೆ ಒಂದು ಕಾಲಮಿತಿಯೊಳಗೆ ನಾವೂ ಕರೋಡ್ ಪತಿಗಳಾಗಬಹುದು ಎಂದು ಹೇಳಬಹುದು. ಆದರೆ ಅದನ್ನು ಸಾಧಿಸಲು ದೃಢವಾದ ಮನೋಸಂಕಲ್ಪ ಹೊಂದಿರುವುದು ಅಗತ್ಯ. 

ಟಾಪ್ ನ್ಯೂಸ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.