ಚಿತ್ರರಂಗದ 5ಭಾಷೆಗಳಲ್ಲಿ ಮನೆಮಾತಾಗಿ ಬಿಟ್ಟಿದ್ದ ಮನೆಕೆಲಸದ ಹುಡುಗಿ!


Team Udayavani, Dec 20, 2018, 5:48 PM IST

mano-01.jpg

ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಹಾಸ್ಯ ನಟಿ ಎಂಬ ಹೆಗ್ಗಳಿಕೆ ಇವರದ್ದು…ಬರೋಬ್ಬರಿ 1,500ಕ್ಕೂ  ಹೆಚ್ಚು ಸಿನಿಮಾ,, 5000ಕ್ಕೂ ಮಿಕ್ಕಿ ರಂಗಭೂಮಿ ನಟನೆ, ಟಿವಿ ಸೀರಿಯಲ್ ಗಳಲ್ಲಿ ನಟಿಸಿದ್ದ ಗೋಪಿಶಾಂತಾ ಅವರ ಸಾಧನೆ ಗಿನ್ನೆಸ್ ದಾಖಲೆ ಬರೆದಿದೆ. ಅರೇ ಇದ್ಯಾರಪ್ಪಾ ಅಂತ ಹುಬ್ಬೇರಿಸಬೇಡಿ..ಆಚಿ ಅಲಿಯಾಸ್ ಮನೋರಮಾ!

ಹೌದು ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಮನೆಮಾತಾಗಿರುವ ಮನೋರಮಾ 1985ರಲ್ಲಿ 1000 ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಿನ್ನೆಲೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಟಕ್ಕೆ ಸೇರಸಲ್ಪಟ್ಟ ಹೆಗ್ಗಳಿಕೆ ಇವರದ್ದಾಗಿದೆ. 2002ನೇ ಇಸವಿಯಲ್ಲಿ ಪದ್ಮ ಶ್ರೀ, ನ್ಯಾಷನಲ್ ಫಿಲ್ಮ್ ಅವಾರ್ಡ್, 1995ರಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಜೀವಮಾನ ಸಾಧನೆಯ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದ ಹೆಮ್ಮೆ ಮನೋರಮಾ ಅವರದ್ದು. ನಟಿ ಮನೋರಮಾ ಕನ್ನಡದಲ್ಲಿ ಪ್ರೇಮಲೋಕ, ಪ್ರೇಮಾನುಬಂಧ, ಗೆದ್ದವಳು ನಾನೇ, ದೇವರ ದುಡ್ಡು, ಹೆಣ್ಣು ಸಂಸಾರದ ಕಣ್ಣು, ದೇವರ ಗುಡಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.

ಮನೆಗೆಲಸದ ಹುಡುಗಿ ಚಿತ್ರರಂಗದಲ್ಲಿ ಮನೆಮಾತಾಗಿದ್ದಳು!
ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ತಂಜಾವೂರು ಜಿಲ್ಲೆಯಲ್ಲಿ  ಗೋಪಿಶಾಂತಾ ಜನಿಸಿದ್ದು. ವಿಧಿ ವಿಪರ್ಯಾಸ ಎಂಬಂತೆ ಹೆಣ್ಣು ಮಗು ಜನಿಸಿದ್ದಕ್ಕೆ ಮಲತಂದೆ ಅಸಮಾಧಾನಗೊಂಡು, ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕಿಬಿಟ್ಟಿದ್ದ! ಪುಟ್ಟ ಮಗು ಗೋಪಿಶಾಂತಾಳನ್ನು ಎದೆಗವುಚಿಕೊಂಡು ಊರೂರು ಸುತ್ತಿ ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸ ತೊಡಗಿದ್ದರು. ನಂತರ ಬಡತನದಿಂದಾಗಿ ಈ ಕುಟುಂಬ ಪಾಲ್ಲತ್ತೂರ್ ನಿಂದ ಕಾರೈಕುಡಿಗೆ ತೆರಳುತ್ತದೆ. ಈ ಸಂದರ್ಭದಲ್ಲಿ ತಾಯಿ ರಕ್ತ ವಾಂತಿ ಮಾಡತೊಡಗಿದ್ದರು. 

ಈ ಸಂದರ್ಭದಲ್ಲಿಯೇ 11ನೇ ವಯಸ್ಸಿನ ಪುಟ್ಟ ಬಾಲಕಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈ ಬಿಟ್ಟು ಮನೆ ಕೆಲಸಕ್ಕೆ ಸೇರಿಕೊಂಡು ಬಿಟ್ಟಿದ್ದಳು. ಹೀಗೆ ಮನೆ ಕೆಲಸ ಮಾಡುತ್ತಿದ್ದ ವೇಳೆ ಪಾಲ್ಲಥೂರಿಗೆ ನಾಟಕ ತಂಡವೊಂದು ಬಂದಿತ್ತು. ಸಣ್ಣ ಪಾತ್ರವೊಂದನ್ನು ಮಾಡಬೇಕಾಗಿದ್ದ ನಟಿಯೊಬ್ಬಳು ಕೈಬಿಟ್ಟಿದ್ದಳು. ಇದರಿಂದ ಗಾಬರಿಯಾದ ನಾಟಕ ತಂಡದವರು ಪಾತ್ರ ಮಾಡಬಲ್ಲ ಹಾಗೂ ಹಾಡಬಲ್ಲ ನಟಿಗಾಗಿ ಹುಡುಕಾಟ ಶುರು ಮಾಡಿದ್ದರು. ಆಗ ಆ ಪುಟ್ಟ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದಾಕೆಯೇ ಮನೋರಮಾ! ಆಗ ಆಕೆಯ ವಯಸ್ಸು ಕೇವಲ 12 ..ತದನಂತರ ಒಂದರ ಹಿಂದೆ ಒಂದು ನಾಟಕಗಳಲ್ಲಿ ಪಾತ್ರ ಮಾಡತೊಡಗಿದ್ದರು. ಜೊತೆಗೆ ಹಿನ್ನೆಲೆ ಸಂಗೀತ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. 

ನಾಟಕಗಳಲ್ಲಿನ ಅಭಿನಯ ಕಂಡು ಮೊತ್ತ ಮೊದಲ ಬಾರಿಗೆ ಜಾನಕಿರಾಮನ್ ಎಂಬವರು ಇನ್ಬಾವಝುವೂ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದರು. ದುರಾದೃಷ್ಟ ಆ ಸಿನಿಮಾ ಕೇವಲ ಶೇ.40ರಷ್ಟು ಚಿತ್ರೀಕರಣವಾಗಿ ಅರ್ಧಕ್ಕೆ ನಿಂತು ಬಿಟ್ಟಿತ್ತು. ಬಳಿಕ ಕನ್ನಡದಾಸನ್ ಅವರು ಉನ್ಮಯಿನ್ ಕೋಟೈ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕೊಟ್ಟರು. ಆ ಸಿನಿಮಾ ಕೂಡಾ ಪೂರ್ಣ ಚಿತ್ರೀಕರಣವಾಗದೆ ಅರ್ಧಕ್ಕೆ ನಿಂತಿತ್ತು. ಇದರಿಂದಾಗಿ ಮನೋರಮಾ ಸಿನಿಮಾ ನಟಿಯಾಗಬೇಕೆಂಬ ಕನಸನ್ನು ಬಿಟ್ಟು ಬಿಟ್ಟಿದ್ದರಂತೆ!

1958ರಲ್ಲಿ ಮಾಲಾಯಿಟ್ಟಾ ಮಾಂಗೈ ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. 1963ರಲ್ಲಿ ತೆರೆಕಂಡ ಕೋನ್ಜುಂಮ್ ಕುಮಾರಿ ಚಿತ್ರದಲ್ಲಿ ಹೀರೋಯಿನ್ ಆಗಿ ಅಭಿನಯಿಸಿದ್ದರು.1960ರಿಂದ ಬೆಳ್ಳಿ ತೆರೆಗೆ ಬಂದ ಮನೋರಮಾ 2013ರವರೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಸೇರಿದಂತೆ 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 1960ರಿಂದ 1969ರವರೆಗೆ ಮನೋರಮಾ ಮತ್ತು ನಾಗೇಶ್ ಜೋಡಿ ತಮಿಳು ಸಿನಿಮಾರಂಗದಲ್ಲಿ ಜನಪ್ರಿಯವಾಗಿತ್ತು. 1970-80ರ ದಶಕದ ಹೊತ್ತಿಗೆ ಚೋ ಹಾಗೂ ಮನೋರಮಾ, ನಂತರ ತೆಂಗಾಯ್ ಶ್ರೀನಿವಾಸನ್, ವೆನ್ನಿರಾಡೈ ಮೂರ್ತಿ, ಸುರಾಲಿ ರಾಜನ್ ಹಾಗೂ ಮನೋರಮಾ ಜೋಡಿ ಹೆಚ್ಚು ಜನಾನುರಾಗಿಯಾಗಿತ್ತು.

ಐದು ಮುಖ್ಯಮಂತ್ರಿಗಳ ಜೊತೆ ನಟಿಸಿದ್ದ ನಟಿ ಆಚಿ!
ಮನೋರಮಾ ಮತ್ತು ಜಯಲಲಿತಾ ಒಟ್ಟು 25 ಸಿನಿಮಾಗಳಲ್ಲಿ ನಟಿಸಿದ್ದರು.  ಅಂದಿನ ಸ್ಟಾರ್ ನಟರಾದ ಶಿವಾಜಿ ಗಣೇಶನ್, ನಾಟ್ಯ ರಾಣಿ ಪದ್ಮಿನಿ, ಹಾಸ್ಯ ನಟ ನಾಗೇಶ್ ಜೊತೆ 50 ಸಿನಿಮಾಗಳಲ್ಲಿ, ಚೋ ರಾಮಸ್ವಾಮಿ ಜೊತೆ 20 ಸಿನಿಮಾ ಹಾಗೂ ಇವೆಲ್ಲಕ್ಕಿಂತ ಹೆಚ್ಚಾಗಿ ಐದು ಮುಖ್ಯಮಂತ್ರಿಗಳ ಜೊತೆ ನಟಿಸಿದ್ದ ಖ್ಯಾತಿ ಮನೋರಮಾ ಅವರದ್ದಾಗಿದೆ. ಚಿತ್ರ ಕಥೆಗಾರ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾ ದೊರೈ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಎಂಜಿ ರಾಮಚಂದ್ರನ್, ಜೆ. ಜಯಲಲಿತಾ ಹಾಗೂ ಆಂಧ್ರ ಪ್ರದೇಶದ ಮಾಜಿ ಸಿಎಂ ಎನ್ ಟಿ ರಾಮರಾಮ್ ಜೊತೆ ಮನೋರಮಾ ನಟಿಸಿದ್ದರು. ಮನೋರಮಾ ಮತ್ತು ಜಯಲಲಿತಾ ಆಪ್ತ ಗೆಳೆತಿಯರಾಗಿದ್ದರು. 1996ರಲ್ಲಿ ನಡೆದ ಚುನಾವಣೆಯಲ್ಲಿ ರಜನಿಕಾಂತ್ ವಿರುದ್ಧ ಪ್ರಚಾರ ಮಾಡಿ ಜಯಲಲಿತಾ ಪರವಾಗಿ ಮತಚಲಾಯಿಸುವಂತೆ ಪ್ರಚಾರ ಭಾಷಣ ಮಾಡಿದ್ದರು!

ಮದುವೆ, ವಿಚ್ಛೇದನ…ಒಂಟಿ ಬದುಕು!
ನಾಟಕ ಕಂಪನಿಯ ಮ್ಯಾನೇಜರ್ ಎಸ್ ಎಂ ರಾಮನಾಥನ್ ಪ್ರೇಮಪಾಶದಲ್ಲಿ ಬಿದ್ದ ಮನೋರಮಾ 1964ರಲ್ಲಿ ಸತಿಪತಿಗಳಾಗಿದ್ದರು. ಸಂಸಾರ ನೌಕೆಯಲ್ಲಿ ತೇಲಿದ್ದ ದಂಪತಿಗೆ ಮಗ(ಭೂಪತಿ) ಜನಿಸಿದ್ದ. ಆದರೆ ಇಬ್ಬರ ಖುಷಿ ಹೆಚ್ಚು ಬಾಳಿಕೆ ಬರಲಿಲ್ಲ..1966ರಲ್ಲಿ ಮನೋರಮಾ ಮತ್ತು ರಾಮನಾಥನ್ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಈಗ ಮಗ ಕೂಡಾ ಚಿತ್ರರಂಗದಲ್ಲಿದ್ದಾನೆ.

ನನಗೆ ಯಾವುದರ ಬಗ್ಗೆಯೂ ವಿಷಾಧವಿಲ್ಲ. ನನಗೆ ದೇವರು ಈ ಜನ್ಮವನ್ನು ಕರುಣಿಸಿದ್ದಾನೆ. ಒಂದು ವೇಳೆ ಮತ್ತೊಂದು ಜನ್ಮವಿದ್ದರೂ ಕೂಡಾ ಮನೋರಮಾ ಆಗಿಯೇ ಹುಟ್ಟುಬೇಕೆಂಬುದು ನನ್ನ ಆಸೆ. ನನಗೆ ಮತ್ತೆ ಈ ಜೀವನ, ಈ ಜನರ ಸುತ್ತಲೂ ಇರಬೇಕೆಂಬುದೇ ನನ್ನ ಇಚ್ಛೆ ಎಂದು 2015ರಲ್ಲಿ ತಮ್ಮ ಕೊನೆಯ ಸಂದರ್ಶನದಲ್ಲಿ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮನೋರಮಾ ತಮ್ಮ 78ನೇ ವಯಸ್ಸಿನಲ್ಲಿ 2015ರ ಅಕ್ಟೋಬರ್ 10ರಂದು ವಿಧಿವಶರಾಗಿದ್ದರು. ಆದರೂ ಆಚಿಯ ಹಾಸ್ಯ ನಟನೆ, ತಾಯಿ ಪಾತ್ರದ ಮೂಲಕ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.