CONNECT WITH US  

ಎಣ್ಣೆ ಎಣ್ಣೆ ಚರ್ಮದವ್ರಿಗೆ ನಾಲ್ಕೇ ನಾಲ್ಕು ಟಿಪ್ಸ್‌ 

ಇನ್ನು ಹುಡುಗ್ರು ರೇಗ್ಸಿದ್ರೆ ಕೇಳಿ!
"ಏನ್‌ ಎಣ್ಣೆ ಫ್ಯಾಕ್ಟರೀನಾ?' ಅಂತ ಕಿಚಾಯಿಸೋ ಹುಡುಗರು, ಕಣ್ಣೀರಾಗೋ ಮುಗ್ಧ ಹಳ್ಳಿ ಹುಡುಗಿ. ಯಾವೊªà ಸಿನಿಮಾದಲ್ಲಿ ಬರೋ ಸೀನ್‌. ಹಾಗಂತ ನಮ್ಗೆ ಅಪ್ಲೆ„ ಆಗಲ್ಲ ಅಂತ ನೀವಂದುಕೊಳ್ಳಬೇಕಿಲ್ಲ. ಎಣ್ಣೆ ಎಣ್ಣೆ ಸ್ಕಿನ್‌ ಅಂದ್ರೆ ಮುಖ ಮುಟ್ಟಲು ನಮ್ಮ ಕೈಯೇ ಹಿಂದೇಟು ಹಾಕುತ್ತೆ. ಯಾಕೆ ಅಷ್ಟೊಂದು ಹಿಂಸೆಪಡ್ಬೇಕು, ಎಣ್ಣೆಚರ್ಮಕ್ಕೆ ಇಲ್ಲೊಂದಿಷ್ಟು ಟಿಪ್ಸ್‌ ಇದೆ. ಟ್ರೈ ಮಾಡಿ ..
*
ಬಾಳೆಹಣ್ಣಿನ ಫೇಸ್‌ಮಾಸ್ಕ್
ಸಾಮಗ್ರಿ:
ಒಂದು ಬಾಳೆಹಣ್ಣು, 5 ಚಮಚ ಜೇನು ಹಾಗೂ 10 ಚಮಚ ನಿಂಬೆರಸ ಅಥವಾ ಕಿತ್ತಳೆರಸ.
ವಿಧಾನ: ಮೊದಲು ಚೆನ್ನಾಗಿ ಬಾಳೆಹಣ್ಣನ್ನು ಮಸೆದು ಅದಕ್ಕೆ ಜೇನು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಕೊನೆಯಲ್ಲಿ ನಿಂಬೆರಸ ಬೆರೆಸಿ ಈ ಲೇಪವನ್ನು ಮುಖಕ್ಕೆ ಚೆನ್ನಾಗಿ ಲೇಪಿಸಿ, ಫೇಸ್‌ಮಾಸ್ಕ್ ಮಾಡಬೇಕು. 20 ನಿಮಿಷದ ಬಳಿಕ ತೊಳೆಯಬೇಕು. ತೊಳೆದ ಬಳಿಕ ಮುಖಕ್ಕೆ ಬಿಸಿನೀರಿನಲ್ಲಿ ಅದ್ದಿದ ಬಟ್ಟೆಯಿಂದ ಶಾಖ (sಠಿಛಿಚಞ) ಕೊಡಬೇಕು.
ತದನಂತರ ಮಾಯಿಶ್ಚರೈಸರ್‌ ಹಚ್ಚಿ. ಎಣ್ಣೆ ಗಿಣ್ಣೆ ಇಲೆªà ಮುಖ ಫ್ರೆಶ್‌ ಆಗಿರುತ್ತೆ. 

ಗ್ಲಿಸರಿನ್‌ ರೋಸ್‌ವಾಟರ್‌ ಫೇಸ್‌ಮಾಸ್ಕ್ 
ಸಾಮಗ್ರಿ: 4 ಚಮಚ ಗ್ಲಿಸರಿನ್‌, 4 ಚಮಚ ರೋಸ್‌ ವಾಟರ್‌, 2 ಚಮಚ ನಿಂಬೆರಸ.
ವಿಧಾನ: ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 15 ನಿಮಿಷದ ಬಳಿಕ ತೊಳೆಯಬೇಕು. ಅಧಿಕ ಜಿಡ್ಡು ನಿವಾರಣೆಯಾಗುತ್ತದೆ.

ಮುಲ್ತಾನಿಮಿಟ್ಟಿ (ಫ‌ುಲ್ಲರ್ ಅರ್ಥ್) ಲೇಪ
ಸಾಮಗ್ರಿ: 3 ಚಮಚ ಮುಲ್ತಾನಿಮಿಟ್ಟಿ ಪುಡಿ, 10 ಚಮಚ ರೋಸ್‌ ವಾಟರ್‌, 4 ಹನಿ ನಿಂಬೆರಸ, 10 ಚಮಚ ಹಾಲು.
ವಿಧಾನ: ಸ್ವಲ್ಪ ಬಿಸಿನೀರಿನಲ್ಲಿ ಮುಲ್ತಾನಿಮಿಟ್ಟಿಯನ್ನು ಅರ್ಧ ಗಂಟೆ ನೆನೆಸಿ ಇಡಬೇಕು. ನಂತರ ಅದನ್ನು ರೋಸ್‌ವಾಟರ್‌, ನಿಂಬೆರಸ ಬೆರೆಸಿ ಚೆನ್ನಾಗಿ ಪೇಸ್ಟ್‌ ತಯಾರಿಸಬೇಕು. ಕೊನೆಗೆ ಹಾಲು ಸೇರಿಸಿ ಬೆರೆಸಿ ಮುಖಕ್ಕೆ ಲೇಪಿಸಬೇಕು. 15 ನಿಮಿಷದ ಬಳಿಕ ಬೆಚ್ಚಗೆ ನೀರಲ್ಲಿ ತೊಳೆಯಬೇಕು. ಈ ರೀತಿಯಲ್ಲಿ ಈ ಮಾಸ್ಕ್ ನ್ನು ವಾರಕ್ಕೆ 3 ಸಾರಿ ಬಳಸಿದರೆ ಮುಖದ ಜಿಡ್ಡು ಮಾಯವಾಗುತ್ತೆ. 

ಮಿಶ್ರ ಹಣ್ಣುಗಳ ಫೇಸ್‌ಪ್ಯಾಕ್‌ 
ಸಾಮಗ್ರಿ: ಪಪ್ಪಾಯ, ಸೇಬು, ಕಿತ್ತಳೆ, ಮೂಸಂಬಿ, ಕೀವಿ, ಬೆಣ್ಣೆಹಣ್ಣು 
ವಿಧಾನ : ಹಣ್ಣುಗಳನ್ನು ತಿರುಳು ಹಾಗೂ ರಸವನ್ನು ಬೆರೆಸಿ ಚೆನ್ನಾಗಿ ಪೇಸ್ಟ್‌ ತಯಾರಿಸಬೇಕು.
ಇದನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಬೆರಳುಗಳ ತುದಿಯಿಂದ ಮಾಲೀಶು ಮಾಡಬೇಕು. 20 ನಿಮಿಷದ ಬಳಿಕ ತೊಳೆದು ತದನಂತರ ಬಿಸಿನೀರಿನಲ್ಲಿ ಪುದೀನಾ ಎಲೆ ಕತ್ತರಿಸಿ ಹಾಕಿ ಕುದಿಸಿ, ಆ ನೀರಿನ ಆವಿಯನ್ನು ಮುಖಕ್ಕೆ ಹಿಡಿಯಬೇಕು. ಬಳಿಕ ಮುಖ ಒರೆಸಿ ಉತ್ತಮ ನೈಸರ್ಗಿಕ ಮಾಯಿಶ್ಚರೈಸರ್‌ ಬಳಸಿದರೆ ಜಿಡ್ಡು ನಿವಾರಣೆಯಾಗಿ ಮುಖದ ಅಂದ ಚಂದ ಕಾಂತಿ ವರ್ಧಿಸುತ್ತದೆ.

Trending videos

Back to Top