ನಾಲ್ಕು ಕಿವಿಯ ಚೆಲುವೆ!


Team Udayavani, Dec 20, 2017, 3:46 PM IST

20-28.jpg

ಅಂಗಿಯಂತೆ ತೊಡಬಹುದಾದ ಸ್ವೆಟರ್‌ಗೆ ಹುಡಿ ಎಂಬ ಹೆಸರಿದೆ. ಈ ದಿರಿಸಿನಲ್ಲಿ ತಲೆಗವಸಿನ ಜೊತೆ ಎರಡು ಕಿವಿಗಳೂ ಇರುತ್ತವೆ. ಅದೇ ವಿಶೇಷ. ಗಡಗಡ ಚಳಿಯಿಂದ ಪಾರಾಗಲು ಹುಡಿ ನೆರವಾಗುತ್ತದೆ… 

ಸ್ವೆಟ್‌ ಶರ್ಟ್‌ ಎಂದರೆ ಅಂಗಿಯಂತೆ ತೊಡಬಹುದಾದ ಸ್ವೆಟರ್‌. ತಲೆಗವಸು ಇರುವ ಸ್ವೆಟ್‌ ಶರ್ಟ್‌ ಅನ್ನು “ಹುಡಿ’ ಎಂದು ಕರೆಯುತ್ತಾರೆ. ಇದು ನಿನ್ನೆ, ಮೊನ್ನೆ ಬಂದಿದ್ದಲ್ಲ. 1970ರಲ್ಲಿಯೇ ಈ ಶೈಲಿ ಪ್ರಸಿದ್ಧವಾಗಿತ್ತು. ಆದರೂ, “ಹುಡಿ’ ಎಂಬ ಪದ ಫ್ಯಾಷನ್‌ ಲೋಕಕ್ಕೆ ಪದಾರ್ಪಣೆ ಮಾಡಿದ್ದು 1990ರಲ್ಲಿ. ಇದೀಗ ಈ ಹುಡಿ ಹೊಸ ಅವತಾರದಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. 

ಅದೇನದು ಹೊಸ ಅವತಾರ ಎಂದು ನೀವು ಯೋಚಿಸುವುದಾದರೆ, ಇಲ್ಲಿದೆ ವಿಷಯ. ತಲೆಗವಸಿನ ಮೇಲೆ ಎರಡು ಕಿವಿಗಳೂ ಇವೆ! ಹೌದು! ಬೆಕ್ಕಿನ ಕಿವಿ, ನಾಯಿಯ ಕಿವಿ, ಪಾಂಡಾ ಕಿವಿ, ಮೊಲದ ಕಿವಿ, ಕುದುರೆ ಕಿವಿ, ಚಿರತೆ ಕಿವಿ… ಹೀಗೆ ಹಲವಾರು ಪ್ರಾಣಿಗಳ ಕಿವಿಯನ್ನು ಹೋಲುವಂತೆ ತಲೆಗವಸಿನ ಮೇಲೆ ಬಟ್ಟೆಯಿಂದ ಎರಡು ಕಿವಿಗಳನ್ನು ಹೊಲಿಯಲಾಗುತ್ತದೆ. ಈ ಟ್ರೆಂಡ್‌ ಕೇವಲ ಪ್ರಾಣಿಗಳ ಕಿವಿಗಳಿಗೆ ಸೀಮಿತವಾಗದೆ ಕಾಟೂìನ್‌ ಪಾತ್ರಗಳಾದ ಪೋಕಿಮಾನ್‌, ಮಿಕ್ಕಿ ಮೌಸ್‌, ಮಿನ್ನಿ ಮೌಸ್‌, ಬಗÕ… ಬನ್ನಿ, ಹಲೋ ಕಿಟ್ಟಿ, ಟೆಡ್ಡಿ ಬೇರ್‌ ಮುಂತಾದವುಗಳ ಕಿವಿಗಳನ್ನೂ ಹುಡಿ ಮೇಲೆ ಮೂಡಿಸಲಾಗಿವೆ.

ಕಿವಿಯ ಜೊತೆಗೆ ಕೊಂಬು
ಇನ್ನು ಹುಡಿ ಮೇಲೆ ಜಿಂಕೆಯ ಕೊಂಬುಗಳನ್ನೂ ಕಾಣಬಹುದು. ಇದೂ ಸಾಲದು ಅಂತ ಮಾಟಗಾತಿಯ ಕಿವಿ, ಬಾವಲಿಯ ಕಿವಿ, ಕಪ್ಪು ಬೆಕ್ಕಿನ ಕಿವಿಗಳನ್ನು ಹೋಲುವ ಕಿವಿಗಳುಳ್ಳ ಹುಡಿಗಳೂ ಲಭ್ಯ! ಇವು ಗಾತ್‌ ಶೈಲಿಯ ವಿನ್ಯಾಸಗಳಾಗಿದ್ದು, ವಿದೇಶಗಳಲ್ಲಿ ಹ್ಯಾಲೋವೀನ್‌ ಸಮಯದಲ್ಲಿ ಇವುಗಳಿಗೆ ತುಂಬ ಬೇಡಿಕೆ ಇರುತ್ತದೆ. ಇದೀಗ ಇದರ ಅಲೆ ನಮ್ಮ ದೇಶದಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂಥ ಹುಡಿಗಳು ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿವೆ. ನಮಗೆ ಬೇಕಾದಂತೆ ಹೊಲಿದು ಕೊಡುವ ಕಸ್ಟಾಮೈಸ್ಡ್ ಆಯ್ಕೆಗಳು ಭಾರತದಲ್ಲಿ ಈಗಿನ್ನೂ ಲಭ್ಯವಿಲ್ಲ. ಆದರೆ, ಇವು ಮುಂದಿನ ದಿನಗಳಲ್ಲಿ ಸುಲಭದಲ್ಲಿ ಸಿಗಲಿವೆ.

“ಫ್ಯಾನ್ಸಿ’ ಅಲ್ಲ, ಕ್ಯಾಶುಯಲ್‌
ಕಿವಿಗಳಿರುವ ಹುಡಿಗಳು ಮಹಿಳೆಯರು, ಪುರುಷರು ಮತ್ತು ಮಕ್ಕಳ ಉಡುಗೆಯ ಸೆಕ್ಷನ್‌ನಲ್ಲಿ ಸಿಗುತ್ತವೆ. ಫ್ಯಾನ್ಸಿ ಡ್ರೆಸ್‌ನಲ್ಲಿ (ಛದ್ಮವೇಷ) ಮಕ್ಕಳು ಸಾಮಾನ್ಯವಾಗಿ ಉಡುತ್ತಿದ್ದ ಇಂಥ ಬಟ್ಟೆಗಳನ್ನು ಇದೀಗ ಕ್ಯಾಶುಯಲ್‌ ಆಗಿಯೂ ತೊಡಬಹುದು. ಇವನ್ನು ಜೀ®Õ… ಪ್ಯಾಂಟ್‌, ಸ್ಕರ್ಟ್‌ (ಲಂಗ), ಶಾರ್ಟ್ಸ್, ಪೆಡಲ್‌ ಪುಷರ್ಸ್‌ (ಮುಕ್ಕಾಲು ಪ್ಯಾಂಟ್‌), ಡಂಗ್ರೀಸ್‌ ಮುಂತಾದ ವೆಸ್ಟರ್ನ್ (ಪಾಶ್ಚಾತ್ಯ) ಉಡುಪುಗಳ ಜೊತೆ ಧರಿಸಬಹುದು. ಇಂಥ ಹುಡಿಗಳನ್ನು ಹೆಚ್ಚಾಗಿ ಕ್ಯಾಶುಯಲ್‌ ಪ್ಯಾಂಟ್‌, ಶರ್ಟ್‌ ಜೊತೆ ಉಡುತ್ತಾರೆ. ಹಾಗೆಂದು ಕುರ್ತಾ, ಚೂಡಿದಾರ ಅಥವಾ ಇತರ ಉಡುಪುಗಳ ಜೊತೆ ಇಯರ್‌ ಹುಡಿ ತೊಡಬಾರದೆಂದು ಏನೂ ಇಲ್ಲ.

ಕಾಲೇಜಿಗೂ “ಹುಡಿ’
ಸ್ವೆಟರ್‌ ಅನ್ನು ಕೇವಲ ಚಳಿಗಾಲದಲ್ಲಿ ಮಾತ್ರ ತೊಡಬೇಕಾಗುತ್ತದೆ. ಆದರೆ, ಸ್ವೆಟ್‌ ಶರ್ಟ್‌ ಅನ್ನು ಬೇಸಿಗೆ ಸೇರಿದಂತೆ ಯಾವುದೇ ಕಾಲದಲ್ಲೂ ತೊಡಬಹುದು. ದಿನ ನಿತ್ಯ ತೊಡುವ ಕಾಲೇಜು ದಿರಿಸಿನ ಜೊತೆ ಇಂಥ ಹುಡಿಗಳು ಅಂದವಾಗಿ ಕಾಣುತ್ತವೆ. ಲೆಗಿಂಗÕ… ಮೇಲೂ ಇಯರ್‌ ಹುಡಿ ತೊಡಬಹುದು. ಹುಡಿಯ ಮೇಲಿರುವ ಕಿವಿಗಳ ಬಣ್ಣವನ್ನೇ ಹೋಲುವ ಬಣ್ಣದ ಲೆಗಿಂಗ್ಸ್‌ ಧರಿಸಿದರೆ, ನೀವು ಖಂಡಿತವಾಗಿ ಕ್ಯೂಟ್‌ ಆಗಿ ಕಾಣಿಸ್ತೀರಿ. ಪ್ರತಿ ಉಡುಗೆಗೆ ಮ್ಯಾಚಿಂಗ್‌ ಸ್ವೆಟರ್‌ ಖರೀದಿಸುವುದು ಒಳ್ಳೆಯ ಐಡಿಯಾ ಅಲ್ಲ. ಅದು ಸಾಧ್ಯವೂ ಇಲ್ಲ. ಹಾಗಾಗಿ, ಇಂಥ ಕ್ಯೂಟ್‌ ಹುಡಿಗಳನ್ನು ಧರಿಸಿ ಈ ಚಳಿಗಾಲದಲ್ಲಿ ಆರಾಮಾಗಿ ಓಡಾಡಿ.

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.