ಮಂಡಿನೋವಿನ ಮಂಡೆಬಿಸಿಯೇ?


Team Udayavani, Jan 24, 2018, 2:33 PM IST

24-27.jpg

ಚಳಿಗಾಲ ಬಂತೆಂದರೆ, ಮಂಡಿನೋವಿನದ್ದೇ ಮಂಡೆಬಿಸಿ. ಮನೆಯಲ್ಲಿ ದಿನವಿಡೀ ದುಡಿಯುವ ಮಹಿಳೆಯರಿಗೆ ಗಂಟು ನೋವಿನ ಸಮಸ್ಯೆ ತೀವ್ರ. ಅಧ್ಯಯನವೊಂದರ ಪ್ರಕಾರ, ಶೇ.15ಕ್ಕಿಂತ ಹೆಚ್ಚು ಮಹಿಳೆಯರನ್ನು ಸಂಧಿವಾತ ಕಾಡುತ್ತಿದೆ. 25ರಿಂದ 50 ವರ್ಷ ವಯೋಮಾನದವರಲ್ಲಿ ಒಂದಲ್ಲ ಒಂದು ರೀತಿಯ ಸಂಧಿವಾತದ ಸಮಸ್ಯೆ ಕಂಡುಬರುತ್ತದೆ. ಪರೀಕ್ಷೆಗೊಳಗಾಗುವ ಪ್ರತಿ ಐದು ಮಹಿಳೆಯರ ಪೈಕಿ ನಾಲ್ವರಲ್ಲಿ ಸಂಧಿವಾತ ದೃಢಪಡುತ್ತದೆ.

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಂಧಿವಾತಕ್ಕೆ ಮುಖ್ಯ ಕಾರಣ, ಮಂಡಿಚಿಪ್ಪಿನ ಸವೆತ. ಜೊತೆಗೆ ವಂಶವಾಹಿ ಕಾರಣಗಳು, ಮಂಡಿಯ ಮೇಲೆ ಸತತವಾದ ಒತ್ತಡ, ಬೊಜ್ಜು ಮತ್ತು ವ್ಯಾಯಾಮದ ಕೊರತೆಯೂ ಹೌದು. ಮೊಣಕಾಲಿನ ಜೊತೆಗೆ ಮಣಿಕಟ್ಟು, ಹಿಮ್ಮಡಿ, ಕೈಗಳು ಗಡುಸಾಗಿರುತ್ತವೆ. ನೋವು, ಆ ನೋವಿರುವ ಸ್ಥಳ ಕೆಂಪಗಾಗಿರುವುದು, ಊದಿಕೊಂಡಿರುವುದು ಕಂಡುಬರುತ್ತದೆ. ಋತುಸ್ರಾವದ ವೇಳೆಯೂ ಮಂಡಿನೋವಿನ ಸಮಸ್ಯೆ ಹೆಚ್ಚಿರುತ್ತದೆ.

ರೋಗಪತ್ತೆ, ರೋಗಲಕ್ಷಣಗಳು, ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವಿಕೆ ವಿಧಾನಗಳ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ. ಫೋರ್ಟಿಸ್‌ ಆಸ್ಪತ್ರೆಯ ಮೂಳೆರೋಗಶಾಸ್ತ್ರದ ನಿರ್ದೇಶಕರಾದ ಡಾ. ನಾರಾಯಣ ಹುಲ್ಸೆ ಅವರು ಮಂಡಿನೋವು ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಿದ್ದಾರೆ. ಚಟುವಟಿಕೆರಹಿತ ಜೀವನ ನಡೆಸುವುದರಿಂದ ಮಂಡಿಯ ಕೀಲುಗಳು ಬಾಧಿಸಲ್ಪಡುತ್ತವೆ, ವ್ಯಾಯಾಮದ ಕೊರತೆ, ಅಧಿಕ ದೇಹತೂಕ, ಮತ್ತು ಪೌಷ್ಟಿಕತೆಯಿಲ್ಲದ ತಿನಿಸುಗಳು ನಿಮ್ಮ ಮಂಡಿಯನ್ನು ಹಾನಿಗೊಳಪಡಿಸಿ ದುರ್ಬಲಗೊಳಿಸಿ, ಮೃದುಎಲುಬನ್ನು ಸವೆಸುತ್ತದೆ. ಈ ರೀತಿ ಸವೆದ ಮೃದುಎಲುಬನ್ನು ಪುನಃಶ್ಚೇತನಗೊಳಿಸುವುದು ಅಸಾಧ್ಯವಾದರೂ, ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳುವುದರಿಂದ ದೀರ್ಘ‌ಕಾಲದಲ್ಲಿ ಮಂಡಿ ಮೃದುಎಲುಬಿನ ಸವೆತದ ವೇಗವನ್ನು ತಗ್ಗಿಸಬಹುದು.

ನಿಮ್ಮ ಚಲನೆ ಮತ್ತು ಜೀವನದ ಗುಣಮಟ್ಟವನ್ನು ಬಾಧಿಸುವ ಮಟ್ಟಿಗೆ ಸಂಧಿವಾತವು ತೀವ್ರಗೊಂಡಿದ್ದರೆ, ಮಂಡಿ ಮರುಜೋಡಣೆ ಅತ್ಯಂತ ವಾಸ್ತವವಾದ ಚಿಕಿತ್ಸಾ ವಿಧಾನವಾಗಿದೆ. ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಎಂದರೆ ಭಯವಾದರೂ ಇತ್ತೀಚಿನ ತಂತ್ರಜಾnನವು ಈ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸರಳ, ಶೀಘ್ರ ಹಾಗೂ ಪರಿಣಾಮಕಾರಿಯನ್ನಾಗಿ ಮಾಡಿದೆ.

ಸಂಧಿವಾತದಿಂದ ತಪ್ಪಿಸಿಕೊಳ್ಳಲು…
– ದೀರ್ಘ‌ಕಾಲ ಕುಳಿತುಕೊಳ್ಳಬೇಕಾದ ಸಂದರ್ಭದಲ್ಲಿ, ಮಧ್ಯೆ ಮಧ್ಯೆ ಬಿಡುವು ಪಡೆದು ನಿಮ್ಮ ಕಾಲುಗಳನ್ನು ಚಾಚಲು ಮತ್ತು ಮಂಡಿ ಚಲನೆ ಮಾಡಿಕೊಳ್ಳಿ.
– ಮಧ್ಯಮ ಪ್ರಮಾಣದಲ್ಲಾದರೂ ನಿಯಮಿತವಾಗಿ ವ್ಯಾಯಾಮ ಮಾಡಿ. ನಿಮಗೆ ಅಸಾಧ್ಯವಾಗುವಂಥ ಕೆಲಸ ಮಾಡಲು ಪ್ರಯತ್ನಿಸಬೇಡಿ.
– ಬೆಳಗಿನ ಎಳೆಬಿಸಿಲು ದೇಹದ ಮೇಲೆ ಬೀಳಬೇಕು. ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಮುಖ್ಯವಾದ “ಡಿ’ ವಿಟಮಿನ್‌ ಅನ್ನು ಪೂರೈಸುತ್ತದೆ.
– ಹಸಿರೆಲೆ ತರಕಾರಿಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಬೀಜಗಳು, ಮೀನು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
– ಕುಳಿತಿರುವಾಗಲೇ ಆಗಲಿ, ನಡೆಯುತ್ತಿರುವಾಗಲೇ ಆಗಲಿ, ನಿಮ್ಮ ದೇಹದ ಭಂಗಿಯ ಬಗ್ಗೆ ಎಚ್ಚರಿಕೆ ಇರಲಿ.

ಅಮೃತ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.