ದೇಶಭೂಷಣ: ತಿರಂಗಾ ಫ್ಯಾಷನ್‌


Team Udayavani, Aug 15, 2018, 6:00 AM IST

x-4.jpg

ಸ್ವಾತಂತ್ರ್ಯ ದಿನಾಚರಣೆ ಸಡಗರದಿಂದ ನಡೆಯುತ್ತಿರುವ ಹೊತ್ತಿದು. ವಿದ್ಯಾರ್ಥಿಗಳು ಭಾರತದ ಧ್ವಜ ಕೈಯಲ್ಲಿ ಹಿಡಿದುಕೊಂಡು ಪಥ ಸಂಚಲನ ನಡೆಸುವುದನ್ನು ನೋಡುವುದೇ ಸೊಗಸು. ಮಕ್ಕಳು ದೇಶಪ್ರೇಮ ಸಾರುವ, ದೇಶದ ವೈವಿಧ್ಯತೆಯನ್ನು ಸಾರುವ ದಿರಿಸುಗಳನ್ನು ತೊಟ್ಟು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ನೋಡುವುದು ಇನ್ನೂ ಸೊಗಸು. ಈ ದಿನದಂದು ಕಣ್ಮಣಿಗಳಾಗಲು ಏನೇನು ಮಾಡಬಹುದು ಎಂಬುದಕ್ಕೆ ಕೆಲ ಆಯ್ಕೆಗಳು ಇಲ್ಲಿವೆ…

ಕೇಸರಿ ಬಿಳಿ ಹಸಿರು ಅಂಗಿ
ಭಾರತ ಧ್ವಜದಲ್ಲಿರುವ ಮೂರು ವರ್ಣಗಳನ್ನು ಹೊಂದಿರುವ ಸೀರೆ, ದುಪ್ಪಟ್ಟಾ, ಚೂಡಿದಾರ್‌, ಲೆಹೆಂಗಾಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದಕ್ಕಿಂತ ಹೆಚ್ಚು ಬಣ್ಣಗಳುಳ್ಳ “ಕಲರ್‌ ಬ್ಲಾಕ್‌’ ಟ್ರೆಂಡ್‌ನ‌ ದಿರಿಸುಗಳಲ್ಲಿ ನಮ್ಮ ಧ್ವಜದ ತ್ರಿವರ್ಣ ಸಿಕ್ಕರೆ ಕೊಳ್ಳಬಹುದು. ಕೆಲ ದಿರಿಸುಗಳಲ್ಲಿ ತ್ರಿವರ್ಣಗಳು ಒಟ್ಟಿಗೆ ಇಲ್ಲದೇ ಹೋದರೂ ಭಾರತ ಧ್ವಜವನ್ನು ನೆನಪಿಸುವಂತೆ 2 ವರ್ಣಗಳಿರುತ್ತವೆ. ಅವುಗಳನ್ನು ಈ ದಿನ ಉಡಬಹುದು. ಅನೇಕ ಸೆಲಬ್ರಿಟಿಗಳು ಈ ಟಿಪ್ಸ್‌ಅನ್ನು ಈಗಾಗಲೇ ಪ್ರಚುರಪಡಿಸಿದ್ದಾರೆ. ಧ್ವಜದ ವಿನ್ಯಾಸ ಸಿಕ್ಕದೇ ಇದ್ದರೆ ಬೇಸರ ಬೇಡ ಮಿಕ್ಸ್‌ ಅಂಡ್‌ ಮ್ಯಾಚ್‌ ಕೂಡಾ ಮಾಡಬಹುದು. ತ್ರಿವರ್ಣವಲ್ಲದೆ ಖಾದಿ ಉಡುಪುಗಳನ್ನು ಧರಿಸುವ ಮೂಲಕವೂ ರಾಷ್ಟ್ರಪ್ರೇಮ ಮೆರೆಯಬಹುದು. 

ಟ್ರೈ ಕಲರ್‌ ಆಕ್ಸೆಸರೀಸ್‌
ತ್ರಿವರ್ಣ ವಿನ್ಯಾಸದ ದಿರಿಸುಗಳನ್ನು ಆರಿಸುವ ಸಂಕಷ್ಟ ಬಳೆಯ ವಿಷಯದಲ್ಲಿಲ್ಲ. ಯಾವುದೇ ಬ್ಯಾಂಗಲ್‌ ಸ್ಟೋರ್‌ಗೆ ಹೋದರೂ ಕೇಸರಿ ಬಿಳಿ ಹಸಿರು ಬಣ್ಣಗಳ ಬಳೆ ಸಿಕ್ಕೇ ಸಿಗುತ್ತವೆ. ಅವು ಮೂರನ್ನೂ ಧ್ವಜದ ಹಾಗೆ ಒಂದೇ ಕೈಗೆ ತೊಟ್ಟರೆ ಇಂಡಿಪೆಂಡೆನ್ಸ್‌ ಡೇ ಸ್ಪೆಷಲ್‌ ಆಗುವುದು ಖಂಡಿತ. ಅಲ್ಲದೆ ಇವುಗಳು ಸಾಂಪ್ರದಾಯಿಕ ಲುಕ್ಕನ್ನೂ ಕೊಡುವುದರ ಜೊತೆ, ವಿಶೇಷ ಮೆರುಗನ್ನೂ ನೀಡುತ್ತೆ. ಬಳೆಗಳಂತೆಯೇ ತ್ರಿವರ್ಣ, ವಿನ್ಯಾಸವಿರುವ ಕಿವಿಯೋಲೆ, ಬ್ರೇಸ್‌ಲೆಟ್‌, ಸರ ಮುಂತಾದ ಟ್ರೈ ಕಲರ್‌ ಆಕ್ಸೆಸರೀಸ್‌ಅನ್ನು ಧರಿಸಬಹುದು.

ಉಗುರಿಗೆ ಬಣ್ಣ
ಮೂರು ಪ್ರತ್ಯೇಕ ಬಣ್ಣಗಳ ನೇಲ್‌ ಪಾಲಿಶ್‌ಅನ್ನು ಕೊಂಡು ತಂದು ಉಗುರಿಗೆ ಬಣ್ಣ ಹಚ್ಚುವುದು ಸ್ವಾತಂತ್ರÂ ದಿನದಂದು ಮಾಡಬಹುದಾದ ಸುಲಭವಾದ ಮೇಕ್‌ ಓವರ್‌. ಇದು ತುಂಬಾ ಸಿಂಪಲ್‌ ಆಯ್ತು ಎನ್ನುವವರು ನೇಲ್‌ ಆರ್ಟ್‌ನ ಮೊರೆ ಹೋಗಬಹುದು. ನೇಲ್‌ ಆರ್ಟ್‌ ಮೂಲಕ ಪ್ರತಿ ಕೈಬೆರಳ ಉಗುರಿನ ಮೇಲೆ ತ್ರಿವರ್ಣ ಧ್ವಜವನ್ನು ಬಿಡಿಸಬಹುದು. ಸ್ಟೈಲಿಸ್ಟ್‌ ಅಥವಾ ಪರಿಣತ ಸ್ನೇಹಿತರ ನೆರವನ್ನು ಪಡೆದುಕೊಳ್ಳಬಹುದು. 

ಕಣ್ಣುಗಳು ಮನಸ್ಸಿನ ಕನ್ನಡಿ ಎನ್ನುತ್ತಾರೆ. ಹೆಂಗೆಳೆಯರನ್ನು ಚಂದಗಾಣಿಸುವುದರಲ್ಲಿ ಕಣ್ಣುಗಳ ಪಾತ್ರ ಹಿರಿದು. ಹೀಗಾಗಿ ಐ ಮೇಕಪ್‌ ಕಿಟ್‌ ಬಳಸಿಯೂ ರಾಷ್ಟ್ರಪ್ರೇಮವನ್ನು ಮೆರೆಯಬಹುದು.  
 

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.