CONNECT WITH US  

ರಷ್ಯಾದಲ್ಲಿ ವಿಮಾನ ಪತನ ; ಭಾರತೀಯರಿಬ್ಬರು ಸೇರಿ 61 ಬಲಿ: ವಿಡಿಯೋ

ಮಾಸ್ಕೋ : ದಕ್ಷಿಣ ರಷ್ಯಾದಲ್ಲಿ ದುಬೈನಿಂದ ತೆರಳಿದ್ದ ವಿಮಾನವೊಂದು ಶನಿವಾರ ಬೆಳಗ್ಗೆ ಪತನಗೊಂಡು ಇಬ್ಬರು ಭಾರತೀಯರು ಸೇರಿದಂತೆ 61 ಮಂದಿ  ದಾರುಣವಾಗಿ ಸಾವನ್ನಪ್ಪಿದ್ದಾರೆ . 

ದುಬೈನಿಂದ ಹೊರಟಿದ್ದ ವಿಮಾನ ರಾಸ್ಟೋವ್‌ ಅನ್‌ ಡಾನ್‌ ಪ್ರದೇಶದಲ್ಲಿ ಅವಘಡಕ್ಕೀಡಾಗಿದೆ ಎಂದು ವರದಿಯಾಗಿದೆ.

ವಿಮಾನಕ್ಕೆಆಕಸ್ಮಿಕವಾಗಿ ಬೆಂಕಿ ತಗುಲಿ ಪತನಗೊಂಡಿದೆ ಎಂದು ತಿಳಿದು ಬಂದಿದ್ದು, ವಿಮಾನದಲ್ಲಿದ್ದ ಐವರು ಸಿಬಂದಿಗಳು ಸೇರಿ 61 ಮಂದಿಯೂ ಸಾವನ್ನಪ್ಪಿದ್ದಾರೆ.

ಮೃತರಲ್ಲಿ 44 ಮಂದಿ ರಷ್ಯನ್ನರು, ಉಕ್ರೇನ್‌ನ 8 ಮಂದಿ ,ಇಬ್ಬರು ಭಾರತೀಯರು ಮತ್ತು ಓರ್ವ ಉಜ್ಬೇಕಿಸ್ತಾನದ ಪ್ರಜೆ ಎಂದು ದುಬೈನ ಮಾದ್ಯಮ ಕಚೇರಿ ಟ್ವೀಟ್‌ ಮಾಡಿದೆ.

ಮೃತ ಭಾರತೀಯರಲ್ಲಿ ಓರ್ವ ಮಹಿಳೆ ಮತ್ತು ಒರ್ವ ಪುರುಷನಾಗಿದ್ದು , ಮಿಸ್‌ ಅಂಜು ಕಥಿರ್‌ವೆಲ್‌ ಅಯ್ಯಪ್ಪನ್‌ ಮತ್ತು ಮೋಹನ್‌ ಶ್ಯಾಮ್‌ ಎಂದು ತಿಳಿದು ಬಂದಿದೆ.

ವಿಮಾನ ತೋಪೊಂದರಲ್ಲಿ ಪತನವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ,ಈ ವಿಡಿಯೋ ವೀಕ್ಷಿಸಿ...

Trending videos

Back to Top