CONNECT WITH US  

ನವಾಜ್‌ ಷರೀಫ್ ಭ್ರಷ್ಟಾಚಾರ ವಿಚಾರಣೆ ನಾಳೆಗೆ ಮುಂದೂಡಿಕೆ

ಇಸ್ಲಾಮಾಬಾದ್‌ : ಪಾನಾಮಾ ಪೇಪರ್ಸ್‌ ಹಗರಣದಲ್ಲಿ ವಿಚಾರಣೆ ಎದುರಿಸಲು ಪಾಕ್‌ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ಅವರು ಇಂದು ಮಂಗಳವಾರ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾದರು; ಆದರೆ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. 

67ರ ಹರೆಯದ ಷರೀಫ್ ಅವರು ಪುತ್ರಿ ಮರ್ಯಾಮ್‌ ಮತ್ತು ಅಳಿಯ ಕ್ಯಾಪ್ಟನ್‌ (ನಿವೃತ್ತ) ಮೊಹಮ್ಮದ್‌ ಸಫ್ದರ್‌ ಅವರೊಂದಿಗೆ ಇಂದು ಇಸ್ಲಾಮಾಬಾದ್‌ನ ಉತ್ತರದಾಯಿ ನ್ಯಾಯಾಲಯದ ಮುಂದೆ ಹಾಜರಾದರು. 

ಷರೀಫ್ ಮತ್ತವರ ಕೆಲ ಕುಟುಂಬ ಸದಸ್ಯರು ಲಂಡನ್‌ನಲ್ಲಿ ಹೊಂದಿರುವ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ಭ್ರಷ್ಟಾಚಾರದ ಮೂಲಕ ಗಳಿಸಿದವುಗಳು ಎಂಬ ಕಾರಣಕ್ಕೆ ಅವರ ವಿರುದ್ಧ ಕೋರ್ಟ್‌ ವಿಚಾರಣೆ ನಡೆಯುತ್ತಿದೆ. 

ಪಾಕಿಸ್ಥಾನದ ಸುಪ್ರೀಂ ಕೋರ್ಟ್‌ ಈ ವರ್ಷ ಜುಲೈಯಲ್ಲಿ ನವಾಜ್‌ ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು. 

Trending videos

Back to Top