CONNECT WITH US  

ಕೃಷಿ ಸಾಲ ನೀಡಲು ಆಗ್ರಹ

ಕಕ್ಕೇರಾ: ನೂತನ ಸಾಲ ನೀಡುವಲ್ಲಿ ಸಹಕಾರಿ ಸಂಘದಿಂದ ವಿಳಂಬವಾಗಿದ್ದು, ಶೀಘ್ರ ರೈತರಿಗೆ ಕೃಷಿ ಸಾಲ ನೀಡಬೇಕು
ಎಂದು ವಲಯ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಮುಖಂಡರು ಶುಕ್ರವಾರ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯ ಎದುರು ಪ್ರತಿಭಟಿಸಿದರು. ಕಳೆದ ಮೂರು ವರ್ಷಗಳಿಂದ ಸಹಕಾರಿ ಸಂಘದಿಂದ ಈ ಭಾಗದ ಬಹುತೇಕ ರೈತರಿಗೆ ಬೆಳೆಸಾಲ ನೀಡಿಲ್ಲ. ಒಟ್ಟು 1,200 ರೈತರು ಸಂಘದಲ್ಲಿ ಸದಸ್ಯತ್ವ ಹೊಂದಿದ್ದಾರೆ. 2018-19ನೇ ಸಾಲಿನಲ್ಲಿ 396 ರೈತರಿಗೆ ಮಾತ್ರ ಸಾಲ ನೀಡಲಾಗಿದೆ.

ಇನ್ನೂಳಿದ ರೈತರು ಸಾಲ ಕೇಳಿದರೆ ಸರಕಾರ ಆದೇಶ ಬಂದಿಲ್ಲ ಎಂದು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಸಹಾಕರಿ ಸಂಘ ಪ್ರತಿಯೊಬ್ಬ ರೈತರಿಗೆ ಸಾಲ ನೀಡಿ ಕೃಷಿ ಅಭ್ಯುದಯ ಸಾಧಿ ಸಲು ಮತ್ತು ನೆರವಾಗಲು ಶ್ರಮಿಸಿಬೇಕು. ಇದನ್ನು ಗಾಳಿಗೆ ತೂರಿ ತಮಗೆ ಇಚ್ಚಿಸಿದಂತೆ ಕೆಲ ರೈತರಿಗೆ ಬೆಣ್ಣೆ, ಇನ್ನೂಳಿದ ರೈತರಿಗೆ ಸುಣ್ಣ ಲೇಪನ ನಡೆಸಿರುವುದು ದುರಂತ ಎಂದು ದೂರಿದರು.

ಈಗಾಗಲೇ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ. ಇಂತಹ ಬರಗಾಲ ಪರಸ್ಥಿತಿಯಲ್ಲಿ ಸಹಕಾರಿ ಸಂಘವು ರೈತರ ಜತೆ ಚೆಲ್ಲಾಟ ಆಡುತ್ತಿರುವುದು ಸರಿಯಲ್ಲಿ ಎಂದರು. ಈಗಾಗಲೇ ಬಿತ್ತನೆ ಮಾಡಿದ ರೈತರಿಗೆ ಸಮರ್ಪಕ
ರಸಗೊಬ್ಬರ ಮತ್ತು ಕ್ರಿಮಿನಾಶಕ, ಕೃಷಿ ಸಲಕರಣೆ ಒದಗಿಸಬೇಕು. ಸ್ತ್ರೀ ಶಕ್ತಿ ಸಂಘಗಳಿಗೂ ಸಾಲ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ಕಾನೂನು ಸಲಹೆಗಾ ರರನ್ನುತೆಗೆದುಕೊಳ್ಳುವುದು ಸೇರಿದಂತೆ ಬೇಡಿಕೆಗಳಿಗೆ ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ನಂತರ ಉಪ-ತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ ಅವರಿಗೆ ವಿವಿಧ ಬೇಡಿಕೆ ಈಡೇರಿಕೆಯ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಹಾದೇವಿ
ಬೇವಿನಾಳಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರತ್ನಾ ಪಾಟೀಲ ಯಕ್ಷಂತಿ, ವಲಯ ಅಧ್ಯಕ್ಷ ಮುದ್ದಣ್ಣ ಅಮ್ಮಾಪುರ,
ಅಯ್ಯಣ್ಣ ಹಾಲಭಾವಿ, ಹಣಮಂತ್ರಾಯ ಮಡಿವಾಳರ, ಬಸವರಾಜಪ್ಪಗೌಡ ಹೆಮ್ಮಡಗಿ, ಚಂದ್ರು ವಜ್ಜಲ್‌, ಬುಚ್ಚಪ್ಪ ನಾಯಕ, ಚಂದ್ರಕಲಾ ವಡಗೇರಿ, ದೇವಿಂದ್ರಪ್ಪಗೌಡ ಪೊಲೀಸ್‌ ಪಾಟೀಲ, ರುದ್ರಣ್ಣ ಮೇಟಿ, ಶಂಕರ ಜಾಧವ, ತಿಪ್ಪಣ್ಣ ಜಂಪಾ, ಗೋವಿಂದ ಬೈಲಪತ್ತಾರ ಸೇರಿದಂತೆ ಪದಾಧಿಕಾರಿಗಳು ಮತ್ತು ರೈತರು ಇದ್ದರು. 

Trending videos

Back to Top