CONNECT WITH US  
echo "sudina logo";

"ಹೊಸ ಪದ್ಮಾವತಿ' ಜೊತೆ ಜಾನಿ: ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ

"ಜಾನಿ ಮೇರಾ ನಾಮ್' ಚಿತ್ರದ ಮುಂದುವರಿದ ಭಾಗ ಎನ್ನಲಾಗಿರುವ "ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ "ಹೊಸ ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಹಾಡಿಗೆ ಬಹಳ ಗ್ಲಾಮರಸ್ ಆಗಿ ಹೆಜ್ಜೆ ಹಾಕಿದ್ದಾರೆ. ಜಾನಿ ಜಾನಿ ಎಸ್‌ ಪಪ್ಪಾ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ದುನಿಯಾ ವಿಜಿ ಇದೇ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. "ಜಾನಿ ಮೇರಾ ನಾಮ್‌' ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪ್ರೀತಂ ಗುಬ್ಬಿ ಅವರೇ "ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ದುನಿಯಾ ವಿಜಯ್‌ ವಿಭಿನ್ನ ಗೆಟಪ್‌ನಲ್ಲಿ ಮಿಂಚಿದ್ದು, ತಿಥಿ ಚಿತ್ರದ ಗಡ್ಡಪ್ಪ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು ಚಿತ್ರದಲ್ಲಿದ್ದಾರೆ. ಚಿತ್ರದ ಬ್ಯೂಟಿಫುಲ್ ಸಾಂಗ್ ವೀಕ್ಷಿಸಿ.

Back to Top