ಮರಾಟಿ ಸಮಾಜ ಸೇವಾ ಸಂಘ ಭೇಟಿ : ಸಂತ್ರಸ್ತರಿಗೆ ಸಾಂತ್ವನ

Team Udayavani, Aug 20, 2019, 5:40 AM IST

ಮಡಿಕೇರಿ: ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಹಾಗೂ ಕೊಡಗು ಜಿಲ್ಲಾ ಅಂಬಾಭವಾನಿ, ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಪದಾಧಿಕಾರಿಗಳು ಕಾವೇರಿ ಪ್ರವಾ ಹದ ಸಂದರ್ಭದಲ್ಲಿ ಹಾನಿ ಗೀಡಾದ ಪ್ರದೇಶಕ್ಕೆ ‌ ಭೇಟಿ ನೀಡಿ, ಕುಟುಂಬಸ್ತರಿಗೆ ಸಾಂತ್ವನ ಹೇಳಿದರು.

ಜಿಲ್ಲೆಯಲ್ಲಿ ಆಗಷ್ಟ್ ತಿಂಗಳಲ್ಲಿ ಉಂಟಾದ ಕಾವೇರಿ ಪ್ರವಾಹದಿಂದ ಸಾಕಷ್ಟು ಮನೆಗಳು, ಆಸ್ತಿ-ಪಾಸ್ತಿಗಳು ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ಜನಾಂಗ ಬಾಂಧವರಾದ ಉದಯ, ವೆಂಕಟೇಶ್‌, ಮುರಳಿಧರ್‌, ಮೋಹನ್‌, ಶಿವಪ್ಪರವರ ಮನೆಗಳು ಸಂಪೂರ್ಣ ಹಾನಿಯಾಗಿತ್ತು. ಅಲ್ಲದೆ ವಾಲ್ನೂರು ಹಾಗೂ ಸಿದ್ದಾಪುರದ ಕಡಿಗೋಡು, ನೆಲ್ಲಿಹುದಿಕೇರಿಗೆ ಭೇಟಿ ನೀಡಿದ ಪದಾಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್‌, ಜಿಲ್ಲೆಯಲ್ಲಿ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿಯಾಗಿತ್ತು. ಇದರಲ್ಲಿ ನಮ್ಮ ಸಮುದಾಯ ಬಾಂಧವರು ಮನೆ ಕಳೆದುಕೊಂಡಿದ್ದರು. ಸರ್ಕಾರದ ಪರಿಹಾರದ ಜತೆಗೆ ಸಂಘದ ವತಿಯಿಂದ ಸಹಕಾರ ನೀಡಲಾಗುವುದು ಂದು ತಿಳಿಸಿದರು.

ಈ ಸಂದರ್ಭ ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಖಜಾಂಚಿ ಸಂಪತ್‌ಕುಮಾರ್‌, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್‌.ಯೋಗೇಂದ್ರ, ಪ್ರಮುಖರಾದ ಎಂ.ಟಿ.ದೇವಪ್ಪ, ಎಂ.ಟಿ.ಗುರುವಪ್ಪ, ರಾಮಣ್ಣ ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ