ಅಡುಗೆ ಇಂಧನ ದರದಲ್ಲಿ ಹೆಚ್ಚಳ ; ಗ್ರಾಹಕರ ಜೇಬಿಗೆ ಕತ್ತರಿ

Team Udayavani, Dec 3, 2019, 8:06 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಸತತ ನಾಲ್ಕನೇ ಬಾರಿಯೂ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಏರಿಕೆ ಕಂಡುಬಂದಿದ್ದು, 14.2 ಕೆಜಿ ಸಿಲಿಂಡರ್‌ ಮೇಲೆ 13.50 ರೂ. ಬೆಲೆ ಹೆಚ್ಚಳವಾಗಿದೆ. ಇಂಡಿಯನ್‌ ಆಯಿಲ್‌ ಕಂಪನಿಯ ಪ್ರಕಾರ, ದೇಶಾದ್ಯಂತ ನಿತ್ಯ 30 ಲಕ್ಷ ಸಿಲಿಂಡರ್‌ ವಿತರಣೆ ಆಗುತ್ತಿದೆ. ಹೊಸದಿಲ್ಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ 695 ರೂ.ಗೆ ಲಭ್ಯವಾಗುತ್ತಿದ್ದು, ಮುಂಬಯಿಯಲ್ಲಿ 665, ಚೆನ್ನೈನಲ್ಲಿ 714 ರೂ. ಮತ್ತು ಕೋಲ್ಕತ್ತಾದಲ್ಲಿ 725 ರೂ.ಗೆ ಮಾರಾಟ ಆಗುತ್ತಿದೆ.

ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಇಂಧನ ಚಿಲ್ಲರೆ ವ್ಯಾಪಾರಿಗಳು ದಿನದಿಂದ ದಿನಕ್ಕೆ ಬೆಲೆಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಸುಮಾರು 76 ರೂ. ಹೆಚ್ಚಳವಾಗಿದ್ದರೆ ಅಕ್ಟೋಬರ್‌ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ 15 ರೂ.ರಷ್ಟು ಏರಿಕೆಯಾಗಿದೆ.

ಈ ತಿಂಗಳ ಪ್ರಾರಂಭದಲ್ಲೇ 13.50 ರೂ. ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಡಾಲರ್‌ ಮತ್ತು ರೂಪಾಯಿ ವಿನಿಮಯ ದರದ ಮೇಲೆ ಎಲ್.ಪಿ.ಜಿ. ಬೆಲೆ ನಿರ್ಧಾರವಾಗುತ್ತದೆ. ಈರುಳ್ಳಿ ದರ ಏರಿಕೆ ಆಗುತ್ತಿರುವ ನಡುವೆಯೇ ಅಡುಗೆ ಇಂಧನ ಅನಿಲ ಬೆಲೆ ಹೆಚ್ಚಾಗಿರುವುದು ಗ್ರಾಹಕರನ್ನು ಮತ್ತಷ್ಟು ಆಂತಕಕ್ಕೀಡುಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ