ಜೆಟ್ಏರ್ ವೇಸ್ಗೆ ಸ್ಪೈಸ್ ಜೆಟ್ ನೆರವು…?
Team Udayavani, Apr 25, 2019, 5:44 PM IST
ಮುಂಬಯಿ: ಆರ್ಥಿಕ ದಿವಾಳಿಯಾಗಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆಗೆ ಸ್ಪೈಸ್ ಜೆಟ್ ನೆರವಿನ ಹಸ್ತ ಚಾಚಿರುವುದು ಈಗಾಗಲೇ ವರದಿಯಾಗಿದೆ. ಈಗ ಜೆಟ್ ಏರ್ವೆàಸ್ ವಿಮಾನಗಳ ಹಾರಾಟಕ್ಕೆ ಸ್ಪೈಸ್ ಜೆಟ್ ನೆರವು ನೀಡಲಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಜೆಟ್ ಏರ್ವೇಸ್ ವಿಮಾನಗಳಿಗೆ ಸ್ಪೈಸ್ ಜೆಟ್ ವಿಮಾನದ ಬಣ್ಣವನ್ನೇ ಬಳಿಯಲಾಗುತ್ತಿದೆ.
ಜೆಟ್ ಏರ್ವೇಸ್ ಬೋಯಿಂ ಗ್ ಬಿ 737 ವಿಮಾನಕ್ಕೆ ಸ್ಪೈಸ್ ಜೆಟ್ನ ವಿಶಿಷ್ಟ ಕೆಂಪು ಗುರುತಿನ ಲೋಗೋವನ್ನು ಅಳವಡಿಸಲಾಗುತ್ತಿದೆ. ಜತೆಗೆ ಜೆಟ್ ಏರ್ವೇಸ್ ಹಳದಿ ಮತ್ತು ನೀಲಿ ಪಟ್ಟಿಯೂ ಇದರ ಜತೆಗೆ ಇರಲಿದೆ ಎಂದು ವರದಿಯಾಗಿದೆ. ಈಗಾಗಲೇ ಹಾರಾಟ ನಿಲ್ಲಿಸಿರುವ ಜೆಟ್ ಏರ್ವೇಸ್ ವಿಮಾನಗಳನ್ನು ಸ್ಪೈಸ್ ಜೆಟ್ ತನ್ನ ಸಂಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರದಿಂದ ಜೆಟ್ ಏರ್ವೇಸ್ ವಿಮಾನಗಳು ಆಗಸದಲ್ಲಿ ಕಾಣಸಿಗಬಹುದು. ಮುಂದಿನ ವಾರದಲ್ಲಿ ಹಾರಾಟ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ಆಶ್ರಯ
ವಿಮಾನ ಹಾರಾಟದ ಸ್ಥಗಿತದಿಂದ ಜೆಟ್ ಏರ್ವೇಸ್ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಈಗಾಗಲೇ 100ಕ್ಕೂ ಅಧಿಕ ಪೈಲಟ್ಗಳನ್ನು, 200ಕ್ಕೂ ಹೆಚ್ಚು ಕ್ಯಾಬಿನ್ ಸಿಬಂದಿ, 200 ತಾಂತ್ರಿಕ ಸಿಬಂದಿಗೆ ನೌಕರಿ ನೀಡಲಾಗುವುದು ಎಂದು ಸ್ಪೈಸ್ ಜೆಟ್ ಸಂಸ್ಥೆ ಮಾಹಿತಿ ನೀಡಿದೆ ಒಟ್ಟು 1300 ಪೈಲಟ್ಗಳಿದ್ದು ಈಗಾಗಲೇ 400ಕ್ಕೂ ಹೆಚ್ಚು ಪೈಲಟ್ಗಳಿಗೆ ಬೇರೆ ಸಂಸ್ಥೆಗಳಲ್ಲಿ ಆಶ್ರಯ ದೊರೆತಿದೆ. ಹಲವಾರು ಎಂಜನಿಯರ್ಗಳು, ಇತರ ಸಿಬಂದಿ ಈಗಾಗಲೇ ಕಂಪನಿಗೆ ಗುಡ್ ಬೈ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು