ಟಿವಿಎಸ್, ಬಜಾಜ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕುಸಿತ
Team Udayavani, Jan 5, 2020, 8:52 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಆರ್ಥಿಕ ಕುಸಿತದ ಪರಿಣಾಮ ಕಳೆದ ಡಿಸೆಂಬರ್ ನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಇದು ದೇಶದ ಹೆಸರಾಂತ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಟಿವಿಎಸ್ ನ ವಾಹನಗಳ ಮಾರಾಟದ ಮೇಲೂ ಪರಿಣಾಮವನ್ನು ಬೀರಿದೆ.
ಟಿವಿಎಸ್ ಮೋಟಾರ್ ಕಂಪೆನಿಯ ವಾಹನಗಳ ಮಾರಾಟ ಕಳೆದ ವರ್ಷದಲ್ಲಿ ಶೇ.15ರಷ್ಟು ಕುಸಿತ ಕಂಡಿದೆ. 2018ರ ಡಿಸೆಂಬರ್ನಲ್ಲಿ 2,71,395 ವಾಹನಗಳು ಮಾರಾಟ ಮಾಡಿದ್ದ ಸಂಸ್ಥೆ 2019ರ ಡಿಸೆಂಬರ್ ತಿಂಗಳಲ್ಲಿ 2,31,571 ವಾಹನ ಮಾರಾಟ ಮಾಡಿದೆ.
ಕಂಪೆನಿಯು ಟಿವಿಎಸ್ ಅಪಾಚೆ ಆರ್ಟಿಆರ್ ಶ್ರೇಣಿ, ಟಿವಿಎಸ್ ಜುಪಿಟರ್ ಕ್ಲಾಸಿಕ್ ಮತ್ತು ಟಿವಿಎಸ್ ಎಕ್ಸ್ಎಲ್ ಸರಣಿಯ 2020ರ ಬಿಎಸ್-4 ವಾಹನಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಪೂರೈಸುತ್ತಿದೆ.
ಬಜಾಜ್ ಮಾರಾಟ ಶೇ 12ರಷ್ಟು ಕುಸಿತ
ಬಜಾಜ್ ಆಟೋ ಇಂಡಿಯಾ ಕೂಡ ಶೇ 12ರಷ್ಟು ಕುಸಿತ ಕಂಡಿದ್ದು, 2019ರ ಎಪ್ರಿಲ್ – ಡಿಸೆಂಬರ್ ಅವಧಿಯಲ್ಲಿ 19,65,547 ಯೂನಿಟ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,28,421 ಯೂನಿಟ್ಗಳನ್ನು ಮಾರಾಟ ಮಾಡಿತ್ತು. ಒಟ್ಟಾರೆ ದೇಶಿ ದ್ವಿಚಕ್ರ ಆಟೋಮೊಬೈಲ್ ಉದ್ಯಮ 2019ರಲ್ಲಿ ಶೇ 3ರಷ್ಟು ಕುಸಿತ ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್