70ನೇ ಸ್ವಾತಂತ್ರ್ಯ ದಿನಾಚರಣೆ “ಸಂಕಲ್ಪ ಪರ್ವ’
Team Udayavani, Aug 9, 2017, 6:35 AM IST
ಹೊಸದಿಲ್ಲಿ: ಈ ಬಾರಿಯ ಸ್ವಾತಂತ್ರ್ಯ ದಿನವನ್ನು “ಸಂಕಲ್ಪ ಪರ್ವ’ ಹೆಸರಿನಲ್ಲಿ ಆಚರಿಸಲು ನಿರ್ಧರಿಸಿರುವ ಕೇಂದ್ರ ಸರಕಾರ, ದೇಶದ ಜನತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಜೊತೆಗೆ ನವ ಭಾರತ ನಿರ್ಮಾಣಕ್ಕೆ ಅಗತ್ಯ ಸಲಹೆಗಳನ್ನು ನೀಡುವಂತೆ ಕೋರಿದೆ.
“ಆಗಸ್ಟ್ 15ರಂದು ನಡೆಯುವ 70ನೇ ಸ್ವಾತಂತ್ರೊéàತ್ಸವ ವನ್ನು “ಸಂಕಲ್ಪ ಪರ್ವ’ವಾಗಿ ಆಚರಿಸಲಾಗುತ್ತದೆ,’ ಎಂದು ಹೇಳಿರುವ ಸಿಬ್ಬಂದಿ ಸಚಿವಾಲಯ, ಬಲಿಷ್ಠ, ಸಮೃದ್ಧ ಹಾಗೂ ಎಲ್ಲರನ್ನೊಳಗೊಂಡ ನವ ಭಾರತ ನಿರ್ಮಿಸಲು ದೇಶದ ಪ್ರಜೆಗಳು ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ “ಆಗಸ್ಟ್ ಕ್ರಾಂತಿ’ ಎಂದೇ ಹೆಸರಾಗಿದ್ದ 1942ರ “ಕ್ವಿಟ್ ಇಂಡಿಯಾ ಚಳವಳಿ’ ಮಾದರಿ ಅಭಿಯಾನ ನಡೆಯಬೇಕು,’ ಎಂದು ಕರೆ ನೀಡಿದೆ. ಚಳವಳಿಗೆ ಈ ವರ್ಷ 75 ವರ್ಷ ತುಂಬಿದೆ. ಮುಂದಿನ 5 ವರ್ಷಗಳಲ್ಲಿ ಸ್ವತಂತ್ರ ಭಾರತ 75 ವಸಂತ ಪೂರೈಸಲಿದೆ. 2017ರಿಂದ 2022ರ ನಡುವಿನ 5 ವರ್ಷಗಳ ಅವಧಿಯು ನವ ಭಾರತದ “ಸಿದ್ಧಿ’ಗೆ “ಸಂಕಲ್ಪ’ ಮಾಡಲು ಸಿಕ್ಕಿರುವ ಸುವರ್ಣಾವಕಾಶ,’ ಎಂದು ಇಲಾಖೆ ಹೇಳಿದೆ.
ಈ ಬಾರಿಯ ಸ್ವಾತಂತ್ರ್ಯ ದಿನವನ್ನು “ಸಂಕಲ್ಪ ಪರ್ವ’ ಹೆಸರಿನಲ್ಲಿ ಆಚರಿಸಲು ನಿರ್ಧರಿಸಿರುವ ಕೇಂದ್ರ ಸರಕಾರ, ದೇಶದ ಜನತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಜೊತೆಗೆ ನವ ಭಾರತ ನಿರ್ಮಾಣಕ್ಕೆ ಅಗತ್ಯ ಸಲಹೆಗಳನ್ನು ನೀಡುವಂತೆ ಕೋರಿದೆ.