‘ನಿಮ್ಮ ಈ ಟ್ವೀಟ್‌ ಪಾಕಿಸ್ಥಾನದ ಪತ್ರಿಕೆಗಳಿಗೆ ಹೆಡ್‌ ಲೈನ್‌ ಆಗಲಿದೆ’

Team Udayavani, Mar 14, 2019, 8:57 AM IST

rahul-gandhi-1-600.jpg

ನವದೆಹಲಿ: ಜೈಶ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ತನ್ನ ವಿರೋಧ ವ್ಯಕ್ತಪಡಿಸಿದ ಚೀನಾದ ನಿಲುವನ್ನು ಖಂಡಿಸುವಲ್ಲಿ ಪ್ರಧಾನಿ ಮೋದಿ ಅವರು ಮೃದುಧೋರಣೆ ಅನುಸರಿಸುತ್ತಿದ್ದಾರೆ ಮತ್ತು ಚೀನಾ ಅಧ್ಯಕ್ಷ ಕ್ಸಿ ಪಿಂಗ್‌ ಅವರಿಗೆ ಮೋದಿ ಹೆದರುತ್ತಿದ್ದಾರೆ ಎಂದು ಇಂದು ಬೆಳಿಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದರು. ರಾಹುಲ್‌ ಅವರ ಈ ಟೀಕೆಗೆ ಭಾರತೀಯ ಜನತಾ ಪಕ್ಷವು ಸರಿಯಾದ ತಿರುಗೇಟನ್ನು ನೀಡಿದೆ. ಚೀನಾ ಇವತ್ತು ವಿಶ್ವಸಂಸ್ಥೆಯಲ್ಲಿ ಪದೇ ಪದೇ ಭಾರತದ ತೀರ್ಮಾನಗಳಿಗೆ ಅಡ್ಡಗಾಲು ಹಾಕಲು ನಿಮ್ಮ ತಾತ ನೆಹರೂ ಅಂದು ನೀಡಿದ ‘ಭದ್ರತಾ ಸ್ಥಾನ ಕೊಡುಗೆ’ಯ ಭಿಕ್ಷೆಯೇ ಕಾರಣ ಎಂದು ಬಿ.ಜೆ.ಪಿ. ರಾಹುಲ್‌ ಅವರಿಗೆ ತಿರುಗೇಟು ನೀಡಿದೆ. ಪ್ರಧಾನಿ ಮೋದಿಯನ್ನು ಟೀಕಿಸಿ ರಾಹುಲ್‌ ಮಾಡಿರುವ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್‌ ಅಕೌಂಟ್‌ ಮೂಲಕ ಈ ಪ್ರತ್ಯುತ್ತರವನ್ನು ನೀಡಿದೆ.
 
‘ಆವತ್ತು ನಿಮ್ಮ ಆದರಣೀಯ ಮಹಾನ್‌ ತಾತ ಭಾರತದ ಆಶಯಗಳನ್ನು ಬದಿಗಿಟ್ಟು ಚೀನಾ ಪರವಾಗಿ ನಿಂತು ಅವರಿಗೆ ಭದ್ರತಾ ಸ್ಥಾನದ ‘ಕೊಡುಗೆ’ಯನ್ನು ನೀಡದೇ ಇರುತ್ತಿದ್ದರೆ ಚೀನಾ ಇವತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲೇ ಇರುತ್ತಿರಲಿಲ್ಲ. ನಿಮ್ಮ ಘನ ಕುಟುಂಬವು ಈ ದೇಶಕ್ಕೆ ಮಾಡಿದ ಎಲ್ಲಾ ತಪ್ಪುಗಳನ್ನು ಇವತ್ತು ಈ ದೇಶ ಸರಿಪಡಿಸಿಕೊಳ್ಳುತ್ತಿದೆ. ಮತ್ತು ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿ ನಾವು ಖಂಡಿತವಾಗಿಯೂ ಜಯಗಳಿಸಲಿದ್ದೇವೆ. ಈ ವಿಚಾರವನ್ನು ಮೋದಿಯವರಿಗೆ ಬಿಟ್ಟುಬಿಡಿ ಮತ್ತು ಅಲ್ಲಿಯವರೆಗೆ ನೀವು ಚೀನೀ ರಾಜತಾಂತ್ರಿಕರೊಂದಿಗೆ ಗೌಪ್ಯ ಮಾತುಕತೆಯನ್ನು ನಡೆಸುತ್ತಿರಿ’ ಎಂದು ಕೇಸರಿ ಪಕ್ಷವು ರಾಹುಲ್‌ ಅವರಿಗೆ ಖಡಕ್‌ ಉತ್ತರವನ್ನು ನೀಡಿದೆ. ‘ದೇಶವು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭಗಳಲ್ಲಿ ಎಲ್ಲಾ ರಾಹುಲ್‌ ಗಾಂಧಿ ಅವರು ಯಾಕೆ ಸಂಭ್ರಮದ ಮನಸ್ಥಿತಿಯಲ್ಲಿರುತ್ತಾರೆ?’ ಎಂದು ಕೇಂದ್ರ ಸಚಿವ ಆರ್‌. ಎಸ್‌. ಪ್ರಸಾದ್‌ ಅವರು ಪ್ರಶ್ನಿಸಿದ್ದಾರೆ. ‘ನಿಮಗೆ ಏನಾಗಿದೆ? ಖಂಡಿತವಾಗಿಯೂ ನಿಮ್ಮ ಈ ಟ್ವೀಟ್‌ ಪಾಕಿಸ್ಥಾನದ ಪತ್ರಿಕೆಗಳಿಗೆ ಹೆಡ್‌ ಲೈನ್‌ ಆಗಲಿದೆ’ ಎಂದವರು ‘ಕೈ’ ಪಕ್ಷದ ಮುಖಂಡನನ್ನು ತರಾಟೆಗೆ ತೆಗೆದುಕೊಂಡರು. ‘ಇನ್ನು 2009ರಲ್ಲಿಯೂ ಸಹ ಚೀನಾ ತಾಂತ್ರಿಕ ಅಂಶಗಳನ್ನು ಮುಂದೊಡ್ಡಿ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ತಡೆಯೊಡ್ಡಿತ್ತು, ಆವಾಗಲೂ ನೀವು ಇದೇ ರೀತಿ ಟ್ವೀಟ್‌ ಮಾಡಿದ್ದೀರಾ?’ ಎಂಬ ಪ್ರಶ್ನೆಯನ್ನು ಪ್ರಸಾದ್‌ ಅವರು ರಾಹುಲ್‌ ಗಾಂಧಿ ಅವರನ್ನು ಕೇಳಿದ್ದಾರೆ.

ಟಾಪ್ ನ್ಯೂಸ್

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

ಪಾಕ್‌ಗೆ ಗೌರವ ಕೊಡಿ… ಇಲ್ಲವಾದಲ್ಲಿ ಅಣುಬಾಂಬ್ ಹಾಕುತ್ತಾರೆ: ಮಣಿಶಂಕರ್ ಅಯ್ಯರ್ ಹೇಳಿಕೆ

Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ

Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್‌

Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್‌

police crime

Sandeshkhali ಪ್ರಕರಣಕ್ಕೆ ದಿಢೀರ್‌ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್‌!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.