ಸಿಬಿಐಗೆ ಫೇಸ್ಬುಕ್ ಮಾಹಿತಿ
Team Udayavani, Nov 2, 2019, 6:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಫೇಸ್ಬುಕ್ನಲ್ಲಿರುವ ಭಾರತೀಯರ ಮತದಾರರ ಬಗೆಗಿನ ಮಾಹಿತಿಗಳನ್ನು ಸೋರಿಕೆ ಮಾಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ, ಫೇಸ್ಬುಕ್ ಸಂಸ್ಥೆ ಹಾಗೂ ಕೇಂಬ್ರಿಡ್ಜ್ ಅನಾಲಿಟಿಕಾ (ಸಿಎ) ಸಂಸ್ಥೆಗಳು ಹೆಚ್ಚುವರಿ ಮಾಹಿತಿಯನ್ನು ನೀಡಿವೆ. 2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, 8.7 ಕೋಟಿ ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಫೇಸ್ಬುಕ್ ಮೂಲಕ ಸಿಎ ಅಕ್ರಮವಾಗಿ ಪಡೆದಿತ್ತು.
ಈ ಹಿನ್ನೆಲೆಯಲ್ಲಿ, ಭಾರತದಿಂದಲೂ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಅನುಮಾನಗಳು ಎದ್ದ ಹಿನ್ನೆಲೆಯಲ್ಲಿ, ಸಿಬಿಐ, ಫೇಸ್ಬುಕ್ ಹಾಗೂ ಸಿಎ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಆ ಎರಡೂ ಸಂಸ್ಥೆಗಳಿಗೆ ಹೆಚ್ಚುವರಿ ಮಾಹಿತಿ ನೀಡುವಂತೆ ಸಿಬಿಐ ಈ ಹಿಂದೆಯೇ ಸೂಚಿಸಿತ್ತು.