ಲೋಕಸಭೆ, ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್‌ ಮಾಡಿದ ವೆಚ್ಚ 820 ಕೋಟಿ

Team Udayavani, Nov 9, 2019, 6:00 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಕಾಂಗ್ರೆಸ್‌, ಪ್ರಸಕ್ತ ವರ್ಷ ನಡೆದ ಲೋಕಸಭೆ ಚುನಾ ವಣೆ ಮತ್ತು ಆ ಸಮಯದಲ್ಲಿ 5 ವಿಧಾನಸಭೆಗೆ ನಡೆದ ಚುನಾವಣೆಯ ಪ್ರಚಾರಕ್ಕೆ ಒಟ್ಟು 820 ಕೋಟಿ ರೂ. ವೆಚ್ಚ ಮಾಡಿದೆ.

ಚುನಾವಣ ಆಯೋಗಕ್ಕೆ ಕಾಂಗ್ರೆಸ್‌ ಸಲ್ಲಿಸಿರುವ ಚುನಾವಣೆ ವೆಚ್ಚದ ವಿವರದಲ್ಲಿ ಈ ವಿಷಯ ಪ್ರಸ್ತಾವಿಸಲಾಗಿದೆ. ಆ ಅವಧಿಯಲ್ಲಿ ಪಕ್ಷವು ಒಟ್ಟು 856 ಕೋಟಿ ರೂ.ಗಳನ್ನು ಸಂಗ್ರಹಿ ಸಿದ್ದು, ಆ ಪೈಕಿ 820 ಕೋಟಿ ರೂ.ಗಳನ್ನು ಮಾತ್ರ ವೆಚ್ಚ ಮಾಡಿದೆ. ಪ್ರಚಾರಕ್ಕಾಗಿ 626 ಕೋಟಿ ರೂ., ತನ್ನ ಅಭ್ಯರ್ಥಿಗಳಿಗೆ ಮಾಡಿದ 194 ಕೋಟಿ ರೂ. ವೆಚ್ಚವೂ ಇದರಲ್ಲಿ ಸೇರಿದೆ. ಮಾಧ್ಯಮ ಜಾಹೀರಾತು, ಡಿಜಿಟಲ್‌ ಪ್ರಚಾರಕ್ಕಾಗಿ 356 ಕೋಟಿ ರೂ., ಅಭ್ಯರ್ಥಿಗಳಿಗೆ ತಲಾ 5 ಲಕ್ಷ ರೂ.ನಿಂದ 60 ಲಕ್ಷ ರೂ., ಅಂದಿನ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರಕ್ಕಾಗಿ ತಲಾ 50 ಲಕ್ಷ ರೂ. ಖರ್ಚು ಮಾಡಿದ್ದಾಗಿ ಹೇಳಿದೆ.

2014ರ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ 516 ಕೋಟಿ ರೂ. ಖರ್ಚು ಮಾಡಿದ್ದರೆ, ಬಿಜೆಪಿ 714 ಕೋಟಿ ರೂ. ವ್ಯಯಿಸಿತ್ತು. ಬಿಜೆಪಿ 2019 ಲೋಕಸಭಾ ಚುನಾವಣೆ ವೆಚ್ಚದ ಲೆಕ್ಕವನ್ನು ಆಯೋಗಕ್ಕೆ ಇನ್ನೂ ಸಲ್ಲಿಸಿಲ್ಲ. ಇನ್ನು ಟಿಎಂಸಿ 83.6 ಕೋಟಿ ರೂ., ಬಿಎಸ್‌ಪಿ 55.4 ಕೋಟಿ, ಎನ್‌ಸಿಪಿ 72.3 ಕೋಟಿ., ಸಿಪಿಎಂ 73.1 ಕೋಟಿ ರೂ. ವೆಚ್ಚ ಮಾಡಿವೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ತುಮಕೂರು: ಇಂದಿನ ಜಾತಿ ವ್ಯವಸ್ಥೆ ಭಾರತವನ್ನು ದುರ್ಬಲವನ್ನಾಗಿಸುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಅಂದು ಬಸವಣ್ಣನವರು ಸಾಮಾಜಿಕ ಆಂದೋಲನವನ್ನೇ ಮಾಡಿದರು. ಇಂದು...

  • ಜಾಗತಿಕ ಮಟ್ಟದಲ್ಲಿ ಜನ ಸಾರಿಗೆ ಸೇವೆಗೆ ಮಾಡುವ ವೆಚ್ಚಕ್ಕೆ ಹೋಲಿಸಿದರೆ ಬೆಂಗಳೂರಿಗರು ದುಪ್ಪಟ್ಟು ಹಣ ತೆರುತ್ತಿದ್ದಾರೆ ಎಂದು ಸೆಂಟರ್‌ ಫಾರ್‌ ಸೈನ್ಸ್‌ ಆಂಡ್‌...

  • ಬೆಂಗಳೂರು: "ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ'! ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ದಿನೇಶ್‌ ಗುಂಡೂರಾವ್‌ ಅವರಿಗೆ...

  • ಬೆಂಗಳೂರು: ಕಪ್‌ ಗಳಿಸಿ, ಕಸ ಅಳಿಸಿ!, ಕಸದ ಪ್ರಮಾಣ ಕಡಿಮೆ ಮಾಡಿ, ರನ್‌ ರೇಟ್‌ ಅಲ್ಲ, ಕಸ ಇಲ್ಲದಿರುವ ಸಿಟಿ ಸೂಪರ್‌ ಸಿಟಿ! ಇವು ಭಾನುವಾರ ಬಿಬಿಎಂಪಿಯ ವೆಬ್‌ಸೈಟ್‌...

  • ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 58,10,493 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ. 91.16 ರಷ್ಟು ಗುರಿ ಸಾಧನೆಯಾಗಿದೆ....