ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ
Team Udayavani, Mar 4, 2021, 10:32 PM IST
ಲಕ್ನೋ: ಉತ್ತರಪ್ರದೇಶ ಅತ್ಯಾಚಾರ, ಮರ್ಯಾದಾ ಹತ್ಯೆ, ಕೊಲೆ, ಜಾತಿಗಲಭೆ, ಮಹಿಳೆ ಮೇಲಿನ ದೌರ್ಜನ್ಯಗಳಿಗೆ ಕುಖ್ಯಾತವಾಗಿದೆ. ಹೀಗೆಯೇ ಒಂದು ಅಮಾನವೀಯ ಘಟನೆ; ಹರ್ದೋಯಿ ಜಿಲ್ಲೆಯ ಪಂಡೆಂತರ ಎಂಬ ಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ತನಗಿಷ್ಟವಿಲ್ಲದ ವ್ಯಕ್ತಿಯೊಬ್ಬನೊಂದಿಗೆ 17 ವರ್ಷದ ತನ್ನ ಮಗಳು ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ, ಅಪ್ಪ ಆಕೆಯ ತಲೆ ಕಡಿದಿದ್ದಾನೆ. ಮಾತ್ರವಲ್ಲ ರಾಜಾರೋಷವಾಗಿ, ಅಷ್ಟೇ ತಣ್ಣಗೆ ತಲೆಯನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಡೆದು ಸಾಗಿದ್ದಾನೆ. ಕೂಡಲೇ ಆರೋಪಿ ಸರ್ವೇಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಯಾವುದೇ ಪ್ರತಿಭಟನೆ ನಡೆಸದೇ, ಕಿಂಚಿತ್ತೂ ಹೆದರಿಕೆ ತೋರಿಸದೇ ಪೊಲೀಸರಲ್ಲಿ ಎಲ್ಲವನ್ನೂ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ : ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್
ಲಕ್ನೋದಿಂದ 200 ಕಿ.ಮೀ. ದೂರದಲ್ಲಿರುವ ಹಳ್ಳಿಯಲ್ಲಿ ನಡೆದಿರುವ ಘಟನೆಯ ವಿಡಿಯೊ ಈಗ ದೊಡ್ಡ ಸುದ್ದಿ ಮಾಡಿದೆ.