ನಿರ್ಭಯ ಹಂತಕರನ್ನು ಗಲ್ಲಿಗೇರಿಸುವ ವ್ಯಕ್ತಿ ಸಿಕ್ಕಿದರು !

Team Udayavani, Dec 11, 2019, 10:31 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನವದೆಹಲಿ: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರು ಹಂತಕರನ್ನು ಗಲ್ಲಿಗೇರಿಸುವ ಪೂರ್ವತಯಾರಿ ತಿಹಾರ್ ಜೈಲಿನಲ್ಲಿ ನಡೆಯುತ್ತಿದೆ. ಈಗಾಗಲೇ ಅಪರಾಧಿಗಳನ್ನು ಗಲ್ಲಿಗೇರಿಸಲು ಅಗತ್ಯವಾಗಿರುವ ನೇಣು ಕುಣಿಕೆಯನ್ನು ತಯಾರಿಸುವಂತೆ ಬಿಹಾರದ ಬಕ್ಸರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ನಡುವೆ ಗಲ್ಲಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ ನಡೆದಿರುವ ಮಧ್ಯೆಯೇ ತಮಿಳುನಾಡು ಪೊಲೀಸ್ ಇಲಾಖೆಗೆ ಸೇರಿದ ಹೆಡ್ ಕಾನ್ ಸ್ಟೇಬಲ್ ಒಬ್ಬರು ಸ್ವಯಂಪ್ರೇರಣೆಯಿಂದ ಈ ಕಾರ್ಯವನ್ನು ನಡೆಸಲು ಮುಂದೆ ಬಂದಿದ್ದಾರೆ.

42 ವರ್ಷ ಪ್ರಾಯದ ಎಸ್. ಸುಭಾಷ್ ಶ್ರೀನಿವಾಸನ್ ಅವರೇ ಈ ವ್ಯಕ್ತಿಯಾಗಿದ್ದು, ಇವರು ಪೊಲೀಸ್ ಶೌರ್ಯ ಪದಕ ವಿಜೇತರಾಗಿದ್ದಾರೆ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೈನಿಕರಾಗಿದ್ದ ವ್ಯಕ್ತಿಯ ಮೊಮ್ಮಗನಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ