ವೈರಲ್ ಆಯ್ತು ಮದುವೆ ಆಮಂತ್ರಣ
Team Udayavani, Nov 13, 2019, 7:17 AM IST
ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲೊಂದು ಮದುವೆ ಆಮಂತ್ರಣ ಪತ್ರಿಕೆ ಭಾರಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ದುಬಾರಿ ಎಂದಲ್ಲ. ಬದಲಾಗಿ ದುಂದುವೆಚ್ಚದ ಮದುವೆಗಳನ್ನು ಗೇಲಿ ಮಾಡಿದಂತೆ ಚಿತ್ರಿಸಲಾಗಿದೆ. ಹೀಗಾಗಿ, ಅದು ಜಾಲತಾಣದಲ್ಲಿ ಜನರನ್ನು ನಗೆ ಗಡಲಲ್ಲಿ ತೇಲಿಸಿದೆ.
ಹಾಸ್ಯ ಕಲಾವಿದ ಅಕ್ಷರ್ ಪಾಠಕ್ ಆಮಂತ್ರಣ ವಿನ್ಯಾಸ ಮಾಡಿದ್ದಾರೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಶರ್ಮ ಮತ್ತು ವರ್ಮ ಕುಟುಂಬಗಳ ನಡುವೆ ಮದುವೆ ನಡೆದರೆ ಅದಕ್ಕೆ ‘ಶವರ್ಮ’ ಎಂಬ ಹ್ಯಾಷ್ಟ್ಯಾಗ್ ನೀಡುತ್ತಿದ್ದದ್ದು ಮಾಮೂಲಿಯಾಗಿತ್ತು.
ಅದನ್ನು ಗೇಲಿ ಮಾಡಿರುವ ಇವರು, ವಧುವರರ ಹೆಸರನ್ನು ಈ ರೀತಿ ಬರೆದಿದ್ದಾರೆ, ‘ಶರ್ಮ ಜಿ ಕಾ ಲಡ್ಕ’ ವೆಡ್ಸ್ ‘ವರ್ಮ ಜಿ ಕಾ ಲಡ್ಕಿ’ ಜೊತೆಗೆ 2-3 ಆರತಕ್ಷತೆ ಸಮಾರಂಭ, ಅತಿಥಿಗಳು ನೀಡುವ ಉಡುಗೊರೆ, ತಾವು ಯಾರಿಗೂ ಕಡಿಮೆ ಇಲ್ಲವೆಂದು ಅನಗತ್ಯ ಖರ್ಚುವೆಚ್ಚಗಳನ್ನೂ ಆಮಂತ್ರಣ ಪತ್ರಿಕೆಯಲ್ಲಿ ವ್ಯಂಗ್ಯವಾಗಿ ಗೇಲಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್