Udayavni Special

ಸರಣಿ ಸಮಬಲಕ್ಕೆ ಭಾರತ ಹರಸಾಹಸ

ಬ್ಯಾಟಿಂಗ್‌ ಬರ ಎದುರಿಸುತ್ತಿರುವ ಕೊಹ್ಲಿ ; ಇಶಾಂತ್‌ಗೆ ಗಾಯ; ಉಮೇಶ್‌ ಆಡುವ ಸಾಧ್ಯತೆ

Team Udayavani, Feb 29, 2020, 5:11 AM IST

India-Vs-New-Zealand

ಕ್ರೈಸ್ಟ್‌ಚರ್ಚ್‌: ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಅಂತಿಮ ಟೆಸ್ಟ್‌ ಪಂದ್ಯ ಶನಿವಾರದಿಂದ ಕ್ರೈಸ್ಟ್‌ಚರ್ಚ್‌ನ “ಹ್ಯಾಗ್ಲಿ ಓವಲ್‌’ ಮೈದಾನದಲ್ಲಿ ನಡೆಯಲಿದೆ. ಇತ್ತಂಡಗಳೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಣಕ್ಕೆ ಇಳಿಯಲಿವೆ. ಆತಿಥೇಯ ತಂಡಕ್ಕೆ ಸರಣಿ ವಶಪಡಿಸುವ ಕಾತುರವಾದರೆ ಕೊಹ್ಲಿ ಪಡೆ ಸರಣಿ ಸಮಬಲಗೊಳಿಸುವ ಒತ್ತಡದೊಂದಿಗೆ ಆಡಲಿದೆ.

ಭಾರತಕ್ಕೆ ಗಾಯದ ಮೇಲೆ ಬರೆ
ಈಗಾಗಲೇ ಮೊದಲ ಪಂದ್ಯವನ್ನು ಸೋತು ಸಂಕಷ್ಟದಲ್ಲಿರುವ ಟೀಮ್‌ ಇಂಡಿಯಾಕ್ಕೆ ಉತ್ತಮ ಫಾರ್ಮ್ನಲ್ಲಿದ್ದ ಇಶಾಂತ್‌ ಶರ್ಮ ಗಾಯದ ಸಮಸ್ಯೆಗೆ ಒಳಗಾಗಿರುವುದು ದೊಡ್ಡ ಹೊಡೆತವಾಗಿದೆ. ಅವರು ದ್ವಿತೀಯ ಟೆಸ್ಟ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಶಾಂತ್‌ ಶುಕ್ರವಾರ ನೆಟ್‌ ಅಭ್ಯಾಸದಲ್ಲಿ ಬೌಲಿಂಗ್‌ ನಡೆಸಲಿಲ್ಲ. ಕಳೆದ ತಿಂಗಳು ರಣಜಿ ಟ್ರೋಫಿ ಪಂದ್ಯದ ವೇಳೆ ಇಶಾಂತ್‌ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈಗ ಮತ್ತದೇ ಸಮಸ್ಯೆ ಅವರನ್ನು ಕಾಡಿದೆ.

ಒಂದು ವೇಳೆ ಇಶಾಂತ್‌ ಹೊರಬಿದ್ದರೆ ಅವರ ಬದಲಿಗೆ ಯುವ ವೇಗಿ ನವದೀಪ್‌ ಸೈನಿ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಉಮೇಶ್‌ ಯಾದವ್‌ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ ಪೃಥ್ವಿ ಶಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೋಚ್‌ ರವಿಶಾಸಿŒ ಮತ್ತು ಕೊಹ್ಲಿ ಹೇಳಿದ್ದಾರೆ.

ಬ್ಯಾಟಿಂಗ್‌ ಮರೆತ ಕೊಹ್ಲಿ
ಕಿವೀಸ್‌ ಪ್ರವಾಸದಲ್ಲಿ ನಾಯಕ ವಿರಾಟ್‌ ಕೊಹ್ಲಿ ಸರಣಿಯುದ್ದಕ್ಕೂ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದಾರೆ. ಟಿ20, ಏಕದಿನದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಕೊಹ್ಲಿ ಎಡವಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ ಸೇರಿ ಅವರು ಗಳಿಸಿದ್ದು 21 ರನ್‌ ಮಾತ್ರ. ಕೊಹ್ಲಿ ಮಾತ್ರವಲ್ಲದೆ ಅನುಭವಿಗಳಾದ ಚೇತೇಶ್ವರ್‌ ಪೂಜಾರ, ವಿಹಾರಿ ಕೂಡ ಬ್ಯಾಟಿಂಗ್‌ ಬರ ಎದುರಿಸುತ್ತಿದ್ದಾರೆ. ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಕೊಂಚ ಮಟ್ಟಿಗೆ ಅಡ್ಡಿಯಿಲ್ಲ ಒಂದು ಅರ್ಧಶತಕ ಸಿಡಿಸಿ ತಂಡದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇವರನ್ನು ಹೊರತು ಪಡಿಸಿದರೆ ಉಪನಾಯಕ ಅಜಿಂಕ್ಯ ರಹಾನೆ ಭರವಸೆಯ ಆಟಗಾರರಾಗಿದ್ದಾರೆ.

ಬೌಲಿಂಗ್‌ನಲ್ಲಿ ಯಾರ್ಕರ್‌ ಸ್ಪೆಶಲಿಸ್ಟ್‌ ಬುಮ್ರಾ ಕೂಡ ಉತ್ತಮ ಲಯ ಕಂಡುಕೊಳ್ಳಲಿಲ್ಲ. ಏಕದಿನ ಸರಣಿಯಲ್ಲಿ ವಿಕೆಟ್‌ಲೆಸ್‌ ಎನಿಸಿಕೊಂಡ ಬುಮ್ರಾ ಟೆಸ್ಟ್‌ನಲ್ಲಿ ಒಂದು ವಿಕೆಟ್‌ ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿತೀಯ ಟೆಸ್ಟ್‌ನಲ್ಲಿ ಇವರ ಬೌಲಿಂಗ್‌ ಮೇಲೆ ಟೀಮ್‌ ಇಂಡಿಯಾ ಭಾರೀ ನಿರೀಕ್ಷೆ ಇರಿಸಿದೆ.

ಕಿವೀಸ್‌ ಸಮರ್ಥ ತಂಡ
ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ವಿಲಿಯಮ್ಸನ್‌ ಪಡೆ ಬಲಿಷ್ಠವಾಗಿದೆ. ನಾಯಕ ವಿಲಿಯಮ್ಸನ್‌, ಅನುಭವಿ ರಾಸ್‌ ಟೇಲರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಉತ್ತಮ ಬ್ಯಾಟಿಂಗ್‌ ಫಾರ್ಮ್ನಲ್ಲಿದ್ದಾರೆ. ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್, ಕೈಲ್‌ ಜಾಮೀಸನ್‌ ಕೂಡ ಅಪಾಯಕಾರಿಯಾಗಿ ಗೋಚರಿಸಬಲ್ಲರು. ಇದಕ್ಕೆ ಕಳೆದ ಪಂದ್ಯದ ಬ್ಯಾಟಿಂಗ್‌ಗೇ ಸಾಕ್ಷಿ.

ಬೌಲಿಂಗ್‌ ಕೂಡ ಘಾತಕವಾಗಿದೆ. ವೇಗಿಗಳಾದ ಟ್ರೆಂಟ್‌ ಬೌಲ್ಟ್, ಕೈಲ್‌ ಜಾಮೀಸನ್‌, ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌, ಟಿಮ್‌ ಸೌಥಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ನೀಲ್‌ ವ್ಯಾಗ್ನರ್‌ ತಂಡಕ್ಕೆ ಮರಳಿದ್ದು ತಂಡಕ್ಕೆ ಆನೆಬಲ ಬಂದಂತಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ಫ್ಯೂ ಉಲ್ಲಂಘಿಸಿದ ಫುಟ್ ಬಾಲ್ ಆಟಗಾರನಿಗೆ ಮೂರು ತಿಂಗಳು ಗೃಹ ಬಂಧನ

ಕರ್ಫ್ಯೂ ಉಲ್ಲಂಘಿಸಿದ ಫುಟ್ ಬಾಲ್ ಆಟಗಾರನಿಗೆ ಮೂರು ತಿಂಗಳು ಗೃಹ ಬಂಧನ

ಕ್ಯಾರಂಟೈನ್ ನಲ್ಲಿ ಇಡಲಾಗಿದ್ದ ಫಿಜಿ ರಗ್ಬಿ ಆಟಗಾರರು ಪರಾರಿ; ಮತ್ತೆ ಆಸ್ಪತ್ರೆಗೆ

ಕ್ಯಾರಂಟೈನ್ ನಲ್ಲಿ ಇಡಲಾಗಿದ್ದ ಫಿಜಿ ರಗ್ಬಿ ಆಟಗಾರರು ಪರಾರಿ; ಮತ್ತೆ ಆಸ್ಪತ್ರೆಗೆ

ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್‌ ಓ’ಕೀಫ್ ವಿದಾಯ

ಪ್ರಥಮ ದರ್ಜೆ ಕ್ರಿಕೆಟಿಗೆ ಬೌಲರ್‌ ಓ’ಕೀಫ್ ವಿದಾಯ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

ರೊನಾಲ್ಡೊಗೆ ಗೆಳತಿಯಿಂದಲೇ ಕ್ಷೌರ

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX!