ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ ಆಘಾತ
Team Udayavani, May 24, 2022, 10:50 PM IST
ಜಕಾರ್ತಾ: ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿದ ಜಪಾನ್ 5-2 ಗೋಲುಗಳಿಂದ ಭಾರತವನ್ನು ಮಣಿಸಿದೆ. ಇದರೊಂದಿಗೆ ಭಾರತದ ಅನನುಭವಿಗಳ ತಂಡ ತ್ವರಿತ ನಿರ್ಗಮನದ ಅಪಾಯಕ್ಕೆ ಸಿಲುಕಿದೆ.
ಕೂಟದ ಮೊದಲ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ 1-1 ಡ್ರಾ ಸಾಧಿಸಿತ್ತು. ಹೀಗಾಗಿ ಜಪಾನ್ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ ಗೆದ್ದರೂ ಭಾರತ ನಾಕೌಟ್ ಹಂತ ಪ್ರವೇಶಿಸುವುದು ಅನುಮಾನ.
ಜಪಾನ್ ಪರ ಕೋಸಿ ಕವಾಬೆ 2 ಗೋಲು ಸಿಡಿಸಿದರು. ಕೆನ್ ನಗಯೋಶಿ, ರಿಯೋಮಿ ಊಕಾ ಮತ್ತು ಕೋಜಿ ಯಮಾಸಾಕಿ ತಲಾ ಒಂದೊಂದು ಗೋಲು ಹೊಡೆದರು. ಭಾರತದ ಗೋಲುಗಳು ಪವನ್ ರಾಜ್‌ಭಾರ್ ಮತ್ತು ಉತ್ತಮ್ ಸಿಂಗ್ ಅವರಿಂದ ದಾಖಲಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಂಡೀಸ್ ಪ್ರವಾಸ: ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಸಾಧ್ಯತೆ
ವಿಂಬಲ್ಡನ್ ಟೆನಿಸ್ : ನೊವಾಕ್ ಜೊಕೋವಿಕ್, ತಾಟ್ಜಾನಾ ಮರಿಯಾ ಸೆಮಿಗೆ
ಮಾನವ ದೋಷ: ಸಿಂಧು ಕ್ಷಮೆ ಕೇಳಿದ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿ
ವಿಶ್ವದ ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಖ್ಯಾತ ಶಟ್ಲರ್ ಪ್ರಣಯ್
ಸಮಾನ ಪಂದ್ಯ ಶುಲ್ಕ; ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ನಿರ್ಧಾರ